Get Updates
Get notified of breaking news, exclusive insights, and must-see stories!

Lok Sabha Election 2024 Results: ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು; ಸಟ್ಟಾ ಬಜಾರ್ ಅಂಕಿ-ಅಂಶಗಳು

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕೋಟಿಗಟ್ಟಲೆ ಹಣವನ್ನು ಬಾಜಿ ಕಟ್ಟಲಾಗುತ್ತಿದೆ.

ರಾಜಸ್ಥಾನದ ಜನಪ್ರಿಯ ಪಲೋಡಿ ಸತ್ತಾ ಬಜಾರ್ ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಮಾರು 300 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

Phalodi Satta Bazar Predicts BJP Majority in Lok Sabha Investors Focus on Seat Share Turnout

ಬೆಟ್ಟಿಂಗ್ ಮಾರುಕಟ್ಟೆ ಕೂಡ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಬಿಜೆಪಿ ಸುಮಾರು 290-300 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ಹೇಲಿದೆ. ಕಾಂಗ್ರೆಸ್ 40-42 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಉಳಿದ ಸ್ಥಾನಗಳನ್ನು ಇತರೆ ಪಕ್ಷಗಳು ಪಡೆಯಲಿವೆ ಎಂದು ಹೇಳಿದೆ.

ಬಿಜೆಪಿಗೆ ಸ್ಪಷ್ಟ ಬಹುಮತ?

ಫಲೋಡಿ ಸತ್ತಾ ಬಜಾರ್ ಚುನಾವಣೆಗಳಲ್ಲಿ, ಕ್ರಿಕೆಟ್ ಪಂದ್ಯಗಳಲ್ಲಿ ಅಥವಾ ಹವಾಮಾನ ಮುನ್ಸೂಚನೆಗಳಲ್ಲಿ ನಿಖರವಾದ ಭವಿಷ್ಯ ಹೇಳಿದ ಇತಿಹಾಸವನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ ಕಡಿಮೆ ಮತದಾನದ ಹೊರತಾಗಿಯೂ, ಬಿಜೆಪಿ 80 ರಲ್ಲಿ 62 ರಿಂದ 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಫಲೋಡಿ ಸತ್ತಾ ಬಜಾರ್‌ನ ಹಲವಾರು ವರದಿಗಳು ಮತ್ತು ಭವಿಷ್ಯವಾಣಿಗಳು ಬಿಜೆಪಿಯು ಯುಪಿಯಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿವೆ. ಒಟ್ಟಾರೆಯಾಗಿ 335 ರಿಂದ 340 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.

ಅಭ್ಯರ್ಥಿ ಜನಪ್ರಿಯತೆ, ಜಾತಿ ಆಧಾರಿತ ಬೆಂಬಲ, ಚುನಾವಣಾ ಪ್ರಚಾರ ಸಭೆಗಳಲ್ಲಿ ಮತದಾರರ ಬೆಂಬಲ, ಪಕ್ಷದ ಬಲ ಮತ್ತು ಸ್ಥಾನಮಾನ ಸೇರಿದಂತೆ ಬಹು ಅಂಶಗಳ ಆಧಾರದ ಮೇಲೆ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ದರಗಳು ಏರಿಳಿತಗೊಳ್ಳುತ್ತವೆ.

ಸಟ್ಟಾ ಬಜಾರ್ ಅಂಕಿಅಂಶಗಳು

ಪಾಲನ್ಪುರ್ ಸತ್ತಾ ಬಜಾರ್

ಕಾಂಗ್ರೆಸ್ - 112
ಇಂಡಿಯಾ - 225
ಬಿಜೆಪಿ - 216
ಎನ್‌ಡಿಎ - 247

ಕರ್ನಾಲ್ ಸತ್ತಾ ಬಜಾರ್

ಕಾಂಗ್ರೆಸ್ - 108
ಇಂಡಿಯಾ - 231
ಬಿಜೆಪಿ - 235
ಎನ್‌ಡಿಎ -263

ಬೋಹ್ರಿ ಸತ್ತಾ ಬಜಾರ್

ಕಾಂಗ್ರೆಸ್ - 115
ಇಂಡಿಯಾ- 212
ಬಿಜೆಪಿ - 227
ಎನ್‌ಡಿಎ - 255

ಬೆಳಗಾವಿ ಸತ್ತಾ ಬಜಾರ್

ಕಾಂಗ್ರೆಸ್ - 120
ಇಂಡಿಯಾ- 230
ಬಿಜೆಪಿ - 223
ಎನ್‌ಡಿಎ-265

ಕೋಲ್ಕತ್ತಾ ಸತ್ತಾ ಬಜಾರ್

ಕಾಂಗ್ರೆಸ್ - 128
ಇಂಡಿಯಾ- 228
ಬಿಜೆಪಿ - 218
ಎನ್‌ಡಿಎ- 261

ವಿಜಯವಾಡ ಸತ್ತಾ ಬಜಾರ್

ಕಾಂಗ್ರೆಸ್ - 121
ಇಂಡಿಯಾ- 237
ಬಿಜೆಪಿ - 224
ಎನ್‌ಡಿಎ- 251

ಇಂದೋರ್ ಸರಾಫಾ

ಕಾಂಗ್ರೆಸ್ - 94
ಇಂಡಿಯಾ- 180
ಬಿಜೆಪಿ - 260
ಎನ್‌ಡಿಎ - 283

ಅಹಮದಾಬಾದ್ ಚೋಖಾ ಬಾರ್

ಕಾಂಗ್ರೆಸ್ - 104
ಇಂಡಿಯಾ- 193
ಬಿಜೆಪಿ - 241
ಎನ್‌ಡಿಎ-270

ಸೂರತ್ ಮಾಘೋಬಿ

ಕಾಂಗ್ರೆಸ್ - 96
ಇಂಡಿಯಾ- 186
ಬಿಜೆಪಿ - 247
ಎನ್‌ಡಿಎ - 282

ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4 ಮಂಗಳವಾರದಂದು ಅಂತಿಮ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+