ಗ್ರಾಹಕರಿಗೆ ಆಗಸ್ಟ್ ಗಿಫ್ಟ್: ಇಂಧನ ದರ ಗಣನೀಯ ಇಳಿಕೆ
ನವದೆಹಲಿ, ಆ. 01: ಗ್ರಾಹಕರಿಗೆ ತೈಲ್ ಕಂಪನಿಗಳುಜುಲೈ ತಿಂಗಳ ಅಂತ್ಯಕ್ಕೆ ಭರ್ಜರಿ ಗಿಫ್ಟ್ ನೀಡಿವೆ. ಪೆಟ್ರೋಲ್ ದರವನ್ನು ಲೀಟರ್ಗೆ 2.43 ರೂ.ನಷ್ಟು ಕಡಿಮೆ ಮಾಡಲಾಗಿದ್ದು, ಡೀಸೆಲ್ ದರ ಲೀಟರ್ಗೆ 3.60 ರೂ.ನಷ್ಟು ಇಳಿಕೆಯಾಗಿದೆ.
ನೂತನ ದರಗಳು ಜುಲೈ 31 ರ ಮಧ್ಯರಾತ್ರಿಯಿಂದಲೇ ಜಾರಿಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲದ ಬೆಲೆ ಗಣನೀಯವಾಗಿ ಕುಸಿದ ಪರಿಣಾಮ ತೈಲ ದರದಲ್ಲಿ ಇಳಿಕೆ ಮಾಡಲಾಗಿದೆ.[ಗ್ರಾಹಕರಿಗೆ ಬಂಪರ್, ಲೀಟರ್ ಪೆಟ್ರೋಲ್ 4 ರು. ಕಡಿತ ಸಾಧ್ಯತೆ]

ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಈಮ ಬಗ್ಗೆ ಅಧಿಕೃತ ಘೋಷಣೆ ಮಾಡಿವೆ. ಜುಲೈ 16 ರಂದು ಪೆಟ್ರೋಲ್ ದರವನ್ನು 2 ರು. ಇಳಿಕೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಮೂರು ಸಾರಿ ದರ ಪರಿಷ್ಕರಣೆ ಮಾಡಿದಂತೆ ಆಗಿದೆ.
ಬೆಂಗಳೂರಿಗರು ಎಷ್ಟು ನೀಡಬೇಕು?
ಬೆಂಗಳೂರಿಗರು ಸದ್ಯ ಪೆಟ್ರೋಲ್ ಗೆ 68.27 ನೀಡಿದರೆ ಸಾಕು. ಡೀಸೆಲ್ ಗೆ 48.99 ರು. ನೀಡಿದರೆ ಸಾಕು. ಒಟ್ಟಿನಲ್ಲಿ ಪೆಟ್ರೋಲ್ 70 ರ ಗಡಿಯಿಂದ ಕೆಳಕ್ಕೆ ಬಂದಿದ್ದು ಡೀಸೆಲ್ ಸಹ 50 ರ ಗಡಿಯಿಂದ ಕೆಳಕ್ಕೆ ಇಳಿದಿದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]
ಎಲ್ ಪಿಜಿ ಗ್ರಾಹಕರಿಗೂ ಸಿಹಿಸುದ್ದಿ
ಇದೇ ವೇಳೆ ಸಬ್ಸಿಡಿಯೇತರ ಸಿಲೆಂಡರ್ಗಳ ಬೆಲೆ ಕೂಡ ಪರಿಷ್ಕೃತಗೊಂಡಿದ್ದು, 14.2 ಕೆಜಿ ಎಲ್ಪಿಜಿ ಸಿಲೆಂಡರ್ನ ಬೆಲೆ 23.50 ರೂ.ನಷ್ಟು ಇಳಿಕೆಯಾಗಿದೆ. ಆದರೆ ಸಬ್ಸಿಡಿ ಸಿಲೆಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.












Click it and Unblock the Notifications