22ರ ಯುವಕನದ್ದಲ್ಲ, 22 ವರ್ಷದ ಅಭಿವೃದ್ಧಿಯ ವಿಡಿಯೋ ಬೇಕು: ಹಾರ್ದಿಕ್

Subscribe to Oneindia Kannada

ಅಹಮದಾಬಾದ್‌, ನವೆಂಬರ್ 15: ಸೆಕ್ಸ್ ಸಿಡಿ ಬಿಡುಗಡೆಯಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್, ಗುಜರಾತಿನ ಜನತೆಗೆ ರಾಜ್ಯದ 22 ವರ್ಷಗಳ ಅಭಿವೃದ್ಧಿ ವಿಡಿಯೋ ತೋರಿಸಿ. ಅದು ಬಿಟ್ಟು 22 ವರ್ಷದ ಯುವಕನ ವಿಡಿಯೋವನ್ನು ತೋರಿಸುವುದಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹಾರ್ದಿಕ್‌ ಪಟೇಲ್‌ "ಗುಜರಾತಿನ ಜನತೆಗೆ ಬೇಕಿರುವುದು 22 ವರ್ಷಗಳಿಂದ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯ ವಿಡಿಯೋ. 22 ವರ್ಷದ ಯುವಕನ ವಿಡಿಯೋ ಬೇಕಾಗಿಲ್ಲ," ಎಂದು ಹೇಳಿದ್ದಾರೆ.

People wants to see CD of 22 years of development, not of a 22-year-old boy: Hardik Patel

ಹಾರ್ದಿಕ್‌ ಪಟೇಲ್‌ ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ಸಿಡಿಯೊಂದು ಸೋಮವಾರ ಬಿಡುಗಡೆಯಾಗಿತ್ತು. ಮತ್ತು ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು.

ಡಿಸೆಂಬರ್ 9 ಮತ್ತು 14ರಂದು ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದ್ದು ಅದಕ್ಕೂ ಮುನ್ನ ರಾಜಕೀಯ ಅಖಾಡದಲ್ಲಿ ಈ ಸೆಕ್ಸ್ ಸಿಡಿ ಸದ್ದು ಮಾಡುತ್ತಿದೆ. ಡಿಸೆಂಬರ್ 18ರಂದು ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Patidar Anamat Andolan Samiti (PAAS) convener Hardik Patel on Tuesday hit back at the sex video clips saying that people of Gujarat want to see development in the state not him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ