ಹಳ್ಳಿಗಳ ಮನೆಗಳಿಗೆ ಬೆಳಕು ನೀಡಿದ ಸಾಹಸಿ: ಕೆಂಪು ಕೋಟೆಯ ಸ್ವಾತಂತ್ರ್ಯ ದಿನಾಚರಣೆಗೆ ಪಾಯಲ್ ಮುಂಜಪಾರ ವಿಶೇಷ ಅತಿಥಿ

ನವದೆಹಲಿ: ನಮ್ಮ ಸಾಮಾಜದಲ್ಲಿ ಸಾಮಾನ್ಯವಾಗಿ ಒಂದಿಷ್ಟು ಕೆಲಸವನ್ನಾ ಪುರುಷರು ಮಾತ್ರ ಮಾಡಬೇಕು ಮತ್ತೆ ಅವರಷ್ಟೇ ಮಾಡಬಲ್ಲರು ಎಂದು ನಂಬಲಾಗಿದೆ. ಆದರೆ ಆ ನಂಬಿಕೆಯನ್ನಾ ಸುಳ್ಳು ಎಂದು ಅಸಾಮಾನ್ಯ ಸಾಧನೆ ಮಾಡಿ ತೋರಿಸಿರುವ ಗುಜರಾತ್‌ನ ಯುವತಿ ಪಾಯಲ್ ಮುಂಜಪಾರ ಅವರಿಗೆ ರಾಷ್ಟ್ರೀಯ ಮಟ್ಟದ ಗೌರವ ಒದಗಿಬಂದಿದೆ.

ಹೌದು, ಹಳ್ಳಿಗಳಲ್ಲಿ ಮನೆಗಳ ಛಾವಣಿ ಏರಿ ಸೌರ ಫಲಕ ಅಂದರೆ ಸೋಲರ್‌ ಪ್ಯಾನಲ್‌ಗಳನ್ನಾ ಅಳವಡಿಸುವ ಮೂಲಕ ಗ್ರಾಮೀಣ ಭಾರತದ ಹಸಿರು ಇಂಧನ ಕ್ರಾಂತಿಗೆ ಶ್ರಮಿಸುತ್ತಿರುವ ಪಾಯಲ್ ಮುಂಜಪಾರ ಅವರು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹಾಗೂ ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ವಿಶೇಷ ಆಹ್ವಾನ ನೀಡಿದೆ.

Payal Munjpara

ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಸಣ್ಣ ಹಳ್ಳಿಯೊಂದರಿಂದ ಬಂದ ಪಾಯಲ್ ಮುಂಜಪಾರ ಅವರು, ಸಾಮಾನ್ಯವಾಗಿ ಮಹಿಳೆಯರು ಎಂದಿಗೂ ಆಯ್ಕೆ ಮಾಡದ ಭಿನ್ನವಾದ ಹಾದಿಯನ್ನ ಆರಿಸಿಕೊಂಡರು. 'ಸೋಲಾರ್ ಪಿವಿ ಟೆಕ್ನಿಷಿಯನ್' ಆಗಿ ವೃತ್ತಿಪರ ತರಬೇತಿ ಪಡೆದ ಅವರು, ಸೌರ ಫಲಕಗಳ ಅಳವಡಿಕೆ, ಕಷ್ಟಕರವಾದ ವೈರಿಂಗ್ ಹಾಗೂ ನಿರ್ವಹಣಾ ಕೆಲಸಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ.

ಮನೆಯ ಛಾವಣಿಗಳನ್ನ ಏರಿ ಭಾರದ ಸೋಲಾರ್ ಪ್ಯಾನಲ್‌ಗಳನ್ನ ಅಳವಡಿಸುವ ಕೌಶಲವನ್ನ ಕರಗತ ಮಾಡಿಕೊಂಡ ಪಾಯಲ್, ಯಾವುದೇ ವೃತ್ತಿಯೂ ಲಿಂಗಭೇದಕ್ಕೆ ಸೀಮಿತವಾಗಿಲ್ಲ ಎಂಬುದನ್ನು ತಮ್ಮ ಕೆಲಸ ಮೂಲಕ ಸಾಬೀತುಪಡಿಸಿದ್ದಾರೆ. ಹಾಗೆಯೇ ಮೊದ ಮೊದಲು ಸಮಾಜದಲ್ಲಿನ ಸಂಶಯದ ದೃಷ್ಟಿಗಳನ್ನ ಎದುರಿಸಿದರೂ, ಆದ್ರೆ ತಮ್ಮ ಪರಿಶ್ರಮದಿಂದ ಈಗ ಒಬ್ಬ ನುರಿತ ತಂತ್ರಜ್ಞೆಯಾಗಿ ಗುರುತಿಸಿಕೊಂಡರು.

ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆ

ಪಾಯಲ್ ಅವರ ಈ ಕೆಲಸವು ಕೇವಲ ಹಳ್ಳಿಗಳ ಮನೆಗಳಿಗೆ ಸೌರ ವಿದ್ಯುತ್ ಬೆಳಕು ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ ನೋಡಿ. ಅವರ ಈ ಸಾಹಸವು ಗ್ರಾಮೀಣ ಭಾಗದ ನೂರಾರು ಮಹಿಳೆಯರು ಹಾಗೂ ಯುವತಿಯರಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ. ಪಾಯಲ್ ಅವರ ಸಾಧನೆಯಿಂದ ಪ್ರೇರಿತರಾದ ಅನೇಕ ಯುವತಿಯರು ಇದೀಗ ತಾಂತ್ರಿಕ ಹಾಗೂ ಸೌರ ಇಂಧನ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಮುಂದಾಗುತ್ತಿದ್ದಾರೆ.

ಮಹಿಳೆಯರೂ ಕೂಡ ತಾಂತ್ರಿಕ ಕೌಶಲಗಳನ್ನ ಕಲಿತು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎನ್ನುವುದಕ್ಕೆ ಪಾಯಲ್ ಒಂದು ಒಳ್ಳೆಯ ಉದಾಹರಣೆ. ಹಾಗೆಯೇ ಭಾರತವು ಹಸಿರು ಇಂಧನದತ್ತ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ತಳಮಟ್ಟದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನ ಹೆಚ್ಚಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

ಕೆಂಪು ಕೋಟೆ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಆಹ್ವಾನ

ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಾಮಾನ್ಯರಲ್ಲಿ ಅಸಾಮಾನ್ಯ ಸಾಧಕರನ್ನ ಗುರುತಿಸಿ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನಿಸುವ ಸಂಪ್ರದಾಯದ ಭಾಗವಾಗಿ, ಪಾಯಲ್ ಮುಂಜಪಾರ ಅವರಿಗೆ ಈ ಗೌರವ ಒದಗಿಬಂದಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸುವ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ಆಯ್ದ ವಿಶೇಷ ಅತಿಥಿಗಳ ಸಾಲಿನಲ್ಲಿ ಪಾಯಲ್ ಕೂಡ ಉಪಸ್ಥಿತರಿರಲಿದ್ದಾರೆ.

ಸಮಾಜದ ಹಳೆಯ ಕಟ್ಟುಪಾಡುಗಳನ್ನ ಮುರಿದು, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ದೇಶದ ಸುಸ್ಥಿರ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಳಾ ಸಾಧಕರಿಗೆ ಈ ಆಹ್ವಾನವು ಸಂದ ಗೌರವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+