ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾ: ಮಹಿಳಾ ಉದ್ಯೋಗಿಗಳ ಕನ್ಯತ್ವ ಪ್ರಶ್ನಿಸಿದ ವೈದ್ಯಕೀಯ ಕಾಲೇಜು

ಮಹಿಳಾ ಉದ್ಯೋಗಿಗಳಿಗೆ ಕನ್ವತ್ಯ ಘೋಷಿಸುವಂತೆ ಕೇಳಿದ ಪಾಟ್ನಾದ ಸಂಸ್ಥೆ. ಇಂದಿರಾಗಾಂಧಿ ವೈದ್ಯಕೀಯ ಮಹಾ ವಿದ್ಯಾಲಯದಿಂದ ಸೂಚನೆ.

|
Google Oneindia Kannada News

ಪಾಟ್ನಾ, ಆಗಸ್ಟ್ 2: ಇಲ್ಲಿನ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು (ಐಜಿಐಎಂಎಸ್) ತನ್ನಲ್ಲಿನ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕನ್ಯತ್ವದ ಬಗ್ಗೆ ಘೋಷಣೆ ಮಾಡಬೇಕೆಂದು ತಾಕೀತು ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಸ್ಥೆಯ ಬಗ್ಗೆ ನಾವೆಲ್ಲರೂ ಇತ್ತೀಚೆಗೆ ಓದಿದ್ದೇವೆ. ಬಡ ವ್ಯಕ್ತಿಯ ಪುತ್ರನೊಬ್ಬ ಇತ್ತೀಚೆಗೆ ಇದೇ ಸಂಸ್ಥೆಯ ಆಸ್ಪತ್ರೆಯಲ್ಲಿ ಮೃತನಾದಾಗ, ಆ ಸಂಸ್ಥೆಯ ಸಿಬ್ಬಂದಿಯ ಆ್ಯಂಬುಲೆನ್ಸ್ ನೀಡರಲಿಲ್ಲ. ಹಾಗಾಗಿ, ಆ ವ್ಯಕ್ತಿ ತನ್ನ ಹೆಗಲ ಮೇಲೆ ಮಗನ ಶವವನ್ನಿಟ್ಟಿಕೊಂಡು ಮನೆಗೆ ಹೋಗಿದ್ದ. ಇದು ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಈಗ, ಇಂಥದ್ದೊಂದು ವಿಲಕ್ಷಣ ಘೋಷಣೆ ಪತ್ರ ನೀಡುವಂತೆ ಕೇಳಿ ಇದು ಮತ್ತೆ ಸುದ್ದಿಯಾಗಿದೆ.

Patna's Indira Gandhi Institute of Medical sciences asks Woman employees to declare virginity

ಈ ಬಗ್ಗೆ ಸಂಸ್ಥೆಯೇ ಬಿಡುಗಡೆ ಮಾಡಿರುವ ಘೋಷಣಾ ಪತ್ರವನ್ನು ಉದ್ಯೋಗಿಗಳು ತುಂಬಬೇಕಿದ್ದು, ಅದರಲ್ಲಿ ಮಹಿಳಾ ಉದ್ಯೋಗಿಗಳು ತಾವು ಅವಿವಾಹಿತರೇ, ವಿವಾಹಿತರೇ ಅಥವಾ ಕನ್ಯತ್ವ ಉಳಿಸಿಕೊಂಡಿರುವವರೇ ಎಂಬುದನ್ನು ತಿಳಿಸಬೇಕಾಗುತ್ತದೆ ಎಂದು ಕೇಳಲಾಗಿದೆ.

ಅದೇ ರೀತಿ ಪುರುಷ ಉದ್ಯೋಗಿಗಳಿಗೆ ಅವರು ಹೊಂದಿರಬಹುದಾದ ಪತ್ನಿಯ ಸಂಖ್ಯೆಯನ್ನು ನಮೂದಿಸುವಂತೆ ಕೇಳಿಕೊಂಡಿದೆ. ''ಜೀವಂತ ಪತ್ನಿ, ವಿಚ್ಛೇದಿತ ಅಥವಾ ಮೃತ ಪತ್ನಿ. ಒಂದಕ್ಕಿಂತ ಹೆಚ್ಚು ಪತ್ನಿ ಹೊಂದಿದ್ದೇನೆ'' ಎಂಬ ಆಪ್ಷನ್ ಗಳ ಮುಂದೆ ಅವರು ಟಿಕ್ ಮಾಡಬೇಕಿದೆ.

ಅಲ್ಲದೆ, ಘೋಷಣಾ ಪತ್ರದಲ್ಲಿ ಕೆಳಗೆ ಸಹಿ ಹಾಕುವ ಮುನ್ನ, ಒಂದಕ್ಕಿಂತ ಹೆಚ್ಚು ಪತ್ನಿ ಉಳ್ಳವರು, ತಾವು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದು, ಇಂಥವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಇರುವ ನಿರ್ಬಂಧದಿಂದ ವಿನಾಯ್ತಿ ನೀಡಬೇಕೆಂದು ಕೋರಬೇಕಿದೆ.

English summary
The Indira Gandhi Institute of Medical Sciences has asked its Woman Employees to declare their virginity. It also asked male employees to declare their status of polygyny if they have.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X