ಪಾಟ್ನಾ- ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂರನೇ ಬಾರಿ ಪ್ರಯೋಗಿಕ ಸಂಚಾರ
ಪಾಟ್ನಾ, ಜೂನ್ 26: ಪಾಟ್ನಾ- ರಾಂಚಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂರನೇ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸೆಮಿ ಹೈಸ್ಪೀಡ್ ರೈಲಿನ ಕಾರ್ಯಾಚರಣೆ ಜೂನ್ 28 ರಂದು ಪ್ರಾರಂಭವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈಸ್ಟ್ ಸೆಂಟ್ರಲ್ ರೈಲ್ವೇ (ECR), ಹಾಜಿಪುರ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಬೀರೇಂದ್ರ ಕುಮಾರ್ ಮಾತನಾಡಿ, ಎಂಟು ಕೋಚ್‌ಗಳೊಂದಿಗೆ ಎಕ್ಸ್‌ಪ್ರೆಸ್‌ನ ಅಂತಿಮ ಮತ್ತು ಮೂರನೇ ಪ್ರಯೋಗವನ್ನು ಪಾಟ್ನಾದಿಂದ ರಾಂಚಿಗೆ ಯಶಸ್ವಿಯಾಗಿ ಮಾಡಲಾಗಿದೆ. ಈಗ ಜೂನ್ 27 ರಂದು ಉದ್ಘಾಟನೆ ಮತ್ತು ಜೂನ್ 28 ರಿಂದ ಕಾರ್ಯಾಚರಣೆಗೆ ಸೂಕ್ತವಾಗಿದೆ ಎಂದು ಕುಮಾರ್ ಹೇಳಿದರು.

ಭಾನುವಾರ ಬೆಳಗ್ಗೆ 7 ಗಂಟೆಗೆ ಪಾಟ್ನಾ ಜಂಕ್ಷನ್‌ನಿಂದ ಹೊರಟ ರೈಲು ಮಧ್ಯಾಹ್ನ 12.50 ರ ಸುಮಾರಿಗೆ ರಾಂಚಿ ತಲುಪಿತು. ಮಧ್ಯಾಹ್ನ ಬಿಹಾರ ರಾಜಧಾನಿ ಪಾಟ್ನಾಗೆ ರಿಟರ್ನ್ ಹೊರಟಿತು. ಮೊದಲ ಪ್ರಯೋಗಿಕ ಸಂಚಾರವನ್ನು ವಂದೇ ಭಾರತ್ ರೈಲು ಪಾಟ್ನಾದಿಂದ ರಾಂಚಿಗೆ ಮತ್ತು ಜೂನ್ 12 ರಂದು ನಡೆಸಲಾಯಿತು. ಬಳಿಕ ಎರಡನೇ ಪ್ರಾಯೋಗಿಕ ಸಂಚಾರವನ್ನು ಜೂನ್ 18 ರಂದು ನಡೆಯಿತು. ಈಗ ಮೂರನೇ ಪ್ರಯೋಗಿಕ ಸಂಚಾರ ನಡೆಸಿದೆ.
ಸಿಧ್ವರ್ (ರಾಮಗಢ) ಮತ್ತು ಸಂಕಿ (ರಾಂಚಿ) ನಡುವಿನ 27-ಕಿಮೀ ವಿಸ್ತಾರವು ನಾಲ್ಕು ಸುರಂಗಗಳನ್ನು ಹೊಂದಿದೆ, ಉದ್ದವು 1.7-ಕಿಮೀ ಉದ್ದವಿದ್ದರೆ, ಮೂರು ಸುರಂಗಗಳು ತಲಾ 600 ಮೀಟರ್‌ಗಳಷ್ಟು ಇವೆ. ಕೋಲ್ಕತ್ತಾದ ರೈಲ್ವೆ ಸುರಕ್ಷತಾ ಕಮಿಷನರ್ (ಸಿಆರ್‌ಎಸ್) ಸಿಧ್ವರ್ ಮತ್ತು ಸ್ಯಾಂಕಿ ನಡುವಿನ 27 ಕಿಮೀ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಮತ್ತು ವೇಗ ಪ್ರಯೋಗವನ್ನು ನಡೆಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಬರ್ಕಾಕಾನಾ ಮೂಲಕ ಕೊಡರ್ಮಾ ಮತ್ತು ರಾಂಚಿ ನಡುವಿನ ಹೊಸ ಮಾರ್ಗವನ್ನು ಕಾರ್ಯಗತಗೊಳಿಸಲು ಒಪ್ಪಿಗೆ ನೀಡಿದ್ದರು.

ಈ ಮೂಲಕ ಜಾರ್ಖಂಡ್ ತನ್ನ ಮೊದಲ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ತನ್ನ ಹಳಿಗಳ ಮೇಲೆ ತರಲು ಸಜ್ಜಾಗಿದೆ. ಈ ರೈಲು ಜಾಂಖಂಡ್‌ನ ರಾಜಧಾನಿ ರಾಂಚಿ ಮತ್ತು ಬಿಹಾರದ ಪಾಟ್ನಾ ನಡುವೆ ಕಾರ್ಯನಿರ್ವಹಿಸಲಿದೆ. ಇದು ಬಿಹಾರದ ರಾಜಧಾನಿ ಪಾಟ್ನಾದಿಂದ ಕಾರ್ಯನಿರ್ವಹಿಸುವ ಮೊದಲ ರೈಲು ಮತ್ತು ರಾಜ್ಯದಲ್ಲಿ ಓಡುತ್ತಿರುವ ಎರಡನೆ ವಂದೇ ಭಾರತ್ ಆಗಿದೆ. ಮೊದಲನೆಯದು ಎನ್‌ಜೆಪಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಇದು ಬಿಹಾರದ ಬರ್ಸೋಯ್ ಪಟ್ಟಣದಲ್ಲಿ ನಿಲುಗಡೆ ಇರುತ್ತದೆ.
ಪಾಟ್ನಾ-ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪಾಟ್ನಾದಿಂದ ರಾಂಚಿಗೆ ಆರು ಗಂಟೆಗಳಲ್ಲಿ ಪ್ರಯಾಣವನ್ನು ಒಳಗೊಂಡಿರುತ್ತದೆ. ಆದರೆ ಪ್ರಸ್ತುತ ವೇಗದ ರೈಲು (ರಾಂಚಿ ಜನಶತಾಬ್ದಿ) ಅದೇ ಪ್ರಯಾಣವನ್ನು ಕವರ್ ಮಾಡಲು ಏಳು ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಈ ಪ್ರದೇಶದ ಜನರಿಗೆ ವೇಗದೊಂದಿಗೆ ವಿಮಾನ ರೀತಿಯ ಪ್ರಯಾಣ ಅನುಭವವನ್ನು ನೀಡುತ್ತದೆ.
ಇದಲ್ಲದೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಪಾಟ್ನಾವನ್ನು ರಾಂಚಿಯೊಂದಿಗೆ ಸಂಪರ್ಕಿಸುವುದರಿಂದ, ಎರಡು ಸ್ಥಳಗಳನ್ನು ಸಂಪರ್ಕಿಸುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ರೈಲು ಸುಮಾರು ಒಂದು ಗಂಟೆ 45 ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ. ವಂದೇ ಭಾರತ್ ಆರು ಗಂಟೆಗಳಲ್ಲಿ ಪ್ರಯಾಣವನ್ನು ಕ್ರಮಿಸುತ್ತದೆ,. ಆದರೆ ಪ್ರಸ್ತುತ ವೇಗದ ರೈಲು ಅದೇ ಪ್ರಯಾಣವನ್ನು ಕ್ರಮಿಸಲು 7 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.












Click it and Unblock the Notifications