ಪಠಾಣ್‌ ಕೋಟ್ ದಾಳಿ : ಉಗ್ರರ ಚಿತ್ರಗಳು ಬಿಡುಗಡೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 22 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ಗುರುತು ಪತ್ತೆ ಹಚ್ಚಲು ಎನ್‌ಐಎ ಇಂಟರ್ ಪೋಲ್ ನೆರವು ಕೇಳಿದೆ. ಎನ್‌ಐಎ ಸೋಮವಾರ ನಾಲ್ವರು ಉಗ್ರರ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ. ಸೋಮವಾರ ನಾಲ್ವರು ಉಗ್ರರ ಚಿತ್ರಗಳನ್ನು ಬಿಡುಗಡೆ ಮಾಡಿದ ಎನ್‌ಐಎ, ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

terrorism

ನಾಲ್ವರು ಉಗ್ರರ ಪೈಕಿ ನಾಸೀರ್ ಮತ್ತು ಸಲೀಂ ಎಂಬ ಇಬ್ಬರ ಗುರುತು ಪತ್ತೆ ಹಚ್ಚಲಾಗಿದೆ. ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮೊಬೈಲ್ ದೋಚಿದ್ದ ನಾಸೀರ್ ನಂತರ, ಅದೇ ಮೊಬೈಲ್‌ನಿಂದ ಪಾಕ್‌ನಲ್ಲಿರುವ ತಾಯಿಗೆ ಕರೆ ಮಾಡಿದ್ದ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

2016ರ ಜನವರಿ ಮೊದಲ ವಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ನಾಲ್ವರು ಉಗ್ರರು ದಾಳಿ ಮಾಡಿದ್ದರು. ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ವರು ಉಗ್ರರನ್ನು ಎನ್‌ಎಸ್‌ಜಿ ಕಮಾಂಡೋಗಳು ಹತ್ಯೆ ಮಾಡಿದ್ದರು. [ಮಸೂದ್‌ ಬಂಧನ : ಪಾಕ್ ಕಣ್ಣಾಮುಚ್ಚಾಲೆ!]

ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ಪೈಕಿ ಇಬ್ಬರ ಗುರುತು ಪತ್ತೆ ಮಾಡಲು ಎನ್‌ಐಎ ಇಂಟರ್ ಪೋಲ್ ನೆರವು ಕೇಳಿದೆ. ನಾಲ್ವರ ವಿರುದ್ಧ ಬ್ಲಾಕ್ ನೋಟಿಸ್ ಹೊರಡಿಸುವಂತೆ ಎನ್‌ಐಎ ಮನವಿ ಮಾಡಿದೆ. [ಪಠಾಣ್ ಕೋಟ್ : ಉಗ್ರರು ಕರೆ ಮಾಡಿದ 3 ನಂಬರ್ ಪಾಕಿಸ್ತಾನದ್ದು]

ಏನಿದು ಬ್ಲಾಕ್ ನೋಟಿಸ್? : ಅಪರಿಚಿತ ಶವದ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂಟರ್ ಪೋಲ್ ಬ್ಲಾಕ್ ನೋಟಿಸ್ ಅಥವ ಡಿ ಸೀರಿಸ್ ನೋಟಿಸ್ ಹೊರಡಿಸುತ್ತದೆ. ಬ್ಲಾಕ್ ನೋಟಿಸ್ ಹೊರಡಿಸಬೇಕಾದರೆ ಶವದ ಸಂಪೂರ್ಣವಾದ ಮೂರು ಭಾವಚಿತ್ರಗಳು ಇರಬೇಕು. ಬೆರಳಚ್ಚು ಇದ್ದರೂ ಉತ್ತಮ.

ಶವ ಸಿಕ್ಕ ದಿನ, ಸ್ಥಳ ಮುಂತಾದ ಮಾಹಿತಿಗಳು ಅಗತ್ಯ. ಶವ ಮೈಮೇಲಿರುವ ಟ್ಯಾಟೂ, ಬಟ್ಟೆ ಮುಂತಾದ ವಿವರಗಳ ಅಗತ್ಯವೂ ಇದೆ. ಒಂದು ವೇಳೆ ಶವದ ಗುರುತು ಪತ್ತೆಯಾದರೆ ಅಥವ ಪತ್ತೆಯಾಗುವುದು ವಿಳಂಬವಾದರೆ ಬ್ಲಾಕ್ ನೋಟಿಸ್ ರದ್ದುಗೊಳಿಸಲು ತನಿಖಾ ಸಂಸ್ಥೆ ಮನವಿ ಮಾಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After releasing the photographs of the four terrorists who carried out an attack on the Pathankot air force station, the National Investigation Agency has approached the Interpol to issue a black notice. The black notice request has been made since the identity of two of the bodies is still unknown.
Please Wait while comments are loading...