ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Heart Attack : ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದೇ ವಾರದಲ್ಲಿ 98 ಜನರ ಸಾವು

|
Google Oneindia Kannada News

ಲಖನೌ, ಜನವರಿ 09: ತೀವ್ರ ಚಳಿ ವಾತಾವರಣದ ಪರಿಣಾಮವಾಗಿ ಉತ್ತರ ಪ್ರದೇಶದ ಲಖನೌನಲ್ಲಿ ಹೃದಯಾಘಾತ ಮತ್ತು ಮೆದುಳು ನಿಷ್ಕ್ರೀಯದಿಂದ ಕಳೆದ ಐದೇ ದಿನದಲ್ಲಿ ಒಟ್ಟು 98 ಮಂದಿ ಮೃತಪಟ್ಟಿದ್ದಾರೆ.

ಉತ್ತರ ಭಾರತದಾದ್ಯಂತ ಕಳೆದ ಕೆಲವು ವಾರಗಳಿಂದ ತೀವ್ರವಾಗಿ ಚಳಿ ಗಾಳಿ ಬೀಸುತ್ತಿದೆ. ನಿತ್ಯ ಬೆಳಗ್ಗೆ ದಟ್ಟ ಮಂಜು ಕವಿದ ವಾತಾವರಣ ದಾಖಲಾಗುತ್ತಿದೆ. ಈ ಕಾರಣದಿಂದ ಯಾರೂ ಮನೆಯಿಂದ ಹೊರ ಬರುತ್ತಿಲ್ಲ. ಎದುರಿಗಿನ ಹತ್ತಿರದ ವ್ಯಕ್ತಿಗಳೇ ಕಾಣದಷ್ಟು ಮಂಜು ಕವಿಯುತ್ತಿದೆ. ಈ ತೀವ್ರ ಶೀತದಿಂದ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿತ್ತು. ಆದರೆ ಇದೇ ಕಾರಣದಿಂದ ಇದೀಗ ಕಾನ್ಪುರದಲ್ಲಿ ಸರಣಿ ಸಾವುಗಳು ಸಂಭವಿಸಿವೆ.

Breaking ತೀವ್ರ ಚಳಿ: ದೆಹಲಿ ಖಾಸಗಿ ಶಾಲೆಗಳಿಗೆ ಜ.15ರವರೆಗೆ ರಜೆ ಘೋಷಿಸಿದ ಶಿಕ್ಷಣ ನಿರ್ದೇಶನಾಲಯ Breaking ತೀವ್ರ ಚಳಿ: ದೆಹಲಿ ಖಾಸಗಿ ಶಾಲೆಗಳಿಗೆ ಜ.15ರವರೆಗೆ ರಜೆ ಘೋಷಿಸಿದ ಶಿಕ್ಷಣ ನಿರ್ದೇಶನಾಲಯ

ಒಟ್ಟು 98 ಸಾವುಗಳ ಪೈಕಿ 44 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, 54 ಮಂದಿ ಆಸ್ಪತ್ರೆಗೆ ಬರುವ ದಾರಿ ಮಧ್ಯದಲ್ಲೇ ಉಸಿರು ಚೆಲ್ಲಿದ್ದಾರೆ. ಈ ಬಗ್ಗೆ ಅಧಿಕೃತ ಕಾರಣ ತಿಳಿಸಿದ ಕಾನ್ಪುರದ ಎಲ್‌ಪಿಎಸ್ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞರ ಮತ್ತು ಕಾರ್ಡಿಯಾಕ್ ಸರ್ಜನ್ ಲಕ್ಷ್ಮೀಪಥ್ ಸಿಂಗಾನಿಯ ಅವರು ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

Past Five Days 98 people died from Heart attack in Kanpur

ಕಳೆದ ಒಂದು ವಾರದಲ್ಲಿ ನಮ್ಮ ಹೃದ್ರೋಗ ಸಂಸ್ಥೆಗೆ 723 ಮಂದಿ ಹೃದಯ ಸಂಬಂಧಿ ತೀವ್ರ ಅನಾರೋಗ್ಯಕ್ಕೆ ಒಳಗಾದವರು ಆಗಮಿಸಿದ್ದರು. ಅದರಲ್ಲಿ 14 ಮಂದಿ ತೀವ್ರ ಶೀತದಿಂದ ಬಳಲುತ್ತಿದ್ದರು. ಅದರಲ್ಲಿ ಆರು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದು ತಪಾಸಣೆ ವೇಳೆ ತಿಳಿದು ಬಂದಿದೆ. ಬಾಕಿ ಎಂಟು ಮಂದಿ ಆಸ್ಪತ್ರೆ ಬರುವ ಮುನ್ನವೇ ಮೃತಪಟ್ಟಿದ್ದರು ಎಂದು ಅವರು ತಿಳಿಸಿದರು.

ಶೀತದಿಂದ ತಪ್ಪಿಸಿಕೊಂಡರೆ ಆರೋಗ್ಯ ಸುರಕ್ಷಿತ

ಒಟ್ಟು 14 ಮಂದಿ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಒಟ್ಟು 604 ಮಂದಿ ರೋಗಿಗಳು ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದಾರೆ. ಅದರಲ್ಲಿ 54 ಮಂದಿ ಹೊಸ ರೋಗಿಗಳಿದ್ದು, 27ಮಂದಿ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆದ ಹಳೆ ರೋಗಿಗಳು ಇದ್ದಾರೆ.

ಹೃದ್ರೋಗ ಸಂಸ್ಥೆಯ ನಿರ್ದೇಶಕ ವಿನಯ ಕೃಷ್ಣ ಅವರು, ಜನರು ತೀವ್ರ ಶೀತದಿಂದ ರಕ್ಷಿಸಿಕೊಳ್ಳಬೇಕು. ಸದಾ ಬೆಚ್ಚಿನ ವಾತಾವರಣದಲ್ಲಿ ಇರುವ ಮೂಲಕ ಆರೋಗ್ಯವಾಗಿರಬೇಕು ಎಂದರು.

Past Five Days 98 people died from Heart attack in Kanpur

ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧ್ಯಾಪಕರೊಬ್ಬರು,ಈ ಶೀತ ವಾತಾವರಣದಲ್ಲಿ ಹೃದಯಾಘಾತವು ಕೇವಲ ವಯಸ್ಸಾದವರಿಗೆ ಸೀಮಿತವಾಗದೇ ಹದಿ ಹರೆಯದವರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಶೀತಕ್ಕೆ ಮೈಯೊಡ್ಡದೇ ಸದಾ ಬೆಚ್ಚಗಿದ್ದು, ಆರೋಗ್ಯವಾಗಿರಬೇಕು ಎಂದು ಅವರು ಸಲಹೆ ನೀಡಿದರು.

English summary
Past Five Days 98 people have died due to Heart attack, Brain stroke, Severe Cold and other reason in Kanpur at Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X