ಡಿಸಿಎಂ ಪರ್ವೇಶ್ ವರ್ಮಾ ಕಪಾಳಮೋಕ್ಷ ವಿವಾದ! ರಾಹುಲ್ ಗಾಂಧಿ ತೀವ್ರ ತರಾಟೆ, ಬಂಧನಕ್ಕೆ ಎಎಪಿ ಆಗ್ರಹ

ನವದೆಹಲಿ: ದೆಹಲಿಯಲ್ಲಿ ರಸ್ತೆ ಕಾಮಗಾರಿ ಗುಣಮಟ್ಟ ತಪಾಸಣೆ ವೇಳೆ ಉಪ ಮುಖ್ಯಮಂತ್ರಿ ಡಿಸಿಎಂ ಪರ್ವೇಶ್ ವರ್ಮಾ ಅವರು ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದು ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಡುವೆ ವಾಕ್ಸಮರಕ್ಕೆ ಕಾರಣವಾದ ಬೆನ್ನಲ್ಲೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಡಿಸಿಎಂ ನಡೆ ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಸಿಎಂ ರಸ್ತೆ ತಪಾಸಣೆ ಪರ್ವೇಶ್ ವರ್ಮಾ ಅವರು ರಸ್ತೆ ಡಾಂಬರೀಕರಣದ ತಪಾಸಣೆ ನಡೆಸುವಾಗ ಅಲ್ಲಿಗೆ ಬಂದ ಎಎಪಿ ಶಾಸಕ ಜರ್ನೈಲ್ ಸಿಂಗ್ ಅವರ ಕೈಯಿಂದ ಡಾಂಬರ್ ಕಿತ್ತು ಕಾಮಗಾರಿ ಗುಣಮಟ್ಟ ಕುರಿತು ಆಕ್ರೋಶ ಹೊರ ಹಾಕಿದ್ದಾರೆ. ಜನರ ಗುಂಪು ಗೂಡುತ್ತಿದ್ದಂತೆ ಬಹುತೇಕ ಕೈಲಿ ಮೊಬೈಲ್ ಇತ್ತು. ಈ ವೇಳೆ ರಸ್ತೆ ಕಾಮಗಾರಿ, ಆಡಳಿತ ವಿರುದ್ಧ ಜನರು ಪ್ರಶ್ನಿಸುವಾಗ ವರ್ಮಾ ವ್ಯಕ್ತಿಯೊಬ್ಬ ಮೊಬೈಲ್ ಎಳೆದು ಕಪಾಳಕ್ಕೆ ಹೊಡೆದ ವಿಡಿಯೋ ವೈರಲ್ ಆಗಿದೆ.

Parvesh Verma Slap Row

ಘಟನೆ ಕುರಿತು ಡಿಸಿಎಂ ವರ್ಮಾ ಅವರು, ಆವೇಶದಲ್ಲಿ ನಡೆದ ಘಟನೆ ಇದಾಗಿದೆ. ದುರುದ್ದೇಶದಿಂದ ಅಲ್ಲ ಎಂದು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಎಎಪಿ ಬೆನ್ನಲ್ಲೆ ರಾಹುಲ್ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರದಲ್ಲಿರುವವರು ನಾಗರಿಕರೊಂದಿಗೆ ವರ್ತಿಸುವ ರೀತಿಗೆ 'ರಾಗಾ' ಟೀಕೆ

ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಇಂದಿನ ಘಟನೆಯಲ್ಲಿ ಡಿಸಿಎಂ ಅಧಿಕಾರದ ಬಳಕೆ, ಸಾರ್ವಜನಿಕರೊಂದಿಗೆ ನಡೆದುಕೊಂಡ ರೀತಿಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರದಾಯಿಗಳಾಗಿರಬೇಕು. ಬೆದರಿಕೆ ಹಾಕದೇ ಪ್ರಶ್ನೆಗಳು ಮತ್ತು ಟೀಕೆಗಳನ್ನು ಎದುರಿಸಬೇಕು ಎಂದರು.

ಇತ್ತೀಚೆಗೆ ಚುನಾವಣೆ ಎಸ್‌ಐ ಆರ್ ಕುರಿತು ಕೇಂದ್ರ ಚುನಾವಣೆ ಆಯೋಗ ವಿರುದ್ಧ ರಾಹುಲ್ ಗಾಂಧಿ ಅವರು ಸಾಕಷ್ಟು ಆರೋಪ ಮಾಡಿದ್ದರು. ಅದನ್ನು ಬಿಜೆಪಿ ತಿರಸ್ಕರಿಸುತ್ತಲೇ ಬಂದಿತ್ತು. ಇದೀಗ ದೆಹಲಿಯ ಡಿಸಿಎಂ ಕಪಾಳಮೋಕ್ಷ ಘಟನೆಯು ಬಿಜೆಪಿ ಕಾಲೆಳೆಯಲು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಆಡಳಿತ, ಬಿಜೆಪಿ ಅಧಿಕಾರ, ನಾಗರಿಕರೊಂದಿಗಿನ ವರ್ತನೆಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ವರ್ಮಾ ಬಂಧನಕ್ಕೆ ಅರವಿಂದ್ ಕೇಜ್ರಿವಾಲ್ ಒತ್ತಾಯ

ಯುವಕನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ವರ್ಮಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ನಾಯಕರು ಆಗ್ರಹಿಸಿದ್ದಾರೆ. ಇದಕ್ಕೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಧ್ವನಿಗೂಡಿಸಿದ್ದು, ಡಿಸಿಎಂ ವರ್ಮಾರನ್ನು ಕೂಡಲೇ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+