ಪ್ಯಾರಾಸಿಟಮಾಲ್ ಸೇರಿದಂತೆ 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ
ಭಾರತದಂತಹ ದೇಶದಲ್ಲಿ ಸಣ್ಣ ಪುಟ್ಟ ಕಾಯಿಲೆಗೆಲ್ಲ ವೈದ್ಯರ ಬಳಿ ಹೋಗದೇ ಮೆಡಿಕಲ್‌ಗೆ ಹೋಗಿ ಅವರು ಕೊಡುವ ಔಷಧ, ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ವೈದ್ಯರ ಶಿಫಾರಸ್ಸು ಇಲ್ಲದೇ ಇದ್ದರೂ, ಕೆಲವು ಮೆಡಿಕಲ್‌ಗಳು ಮಾತ್ರೆ, ಔಷಧಿಗಳನ್ನು ಕೊಡುತ್ತಾರೆ. ಇದೀಗ ಬಂದಿರುವ ವರದಿಯೊಂದು ಔಷಧಿ ವಿಚಾರದಲ್ಲಿ ಎಚ್ಚರಿಕೆಯ ಸಂದೇಶ ಕೊಟ್ಟಿದೆ.
ಮಾಸಿಕ ಔಷಧ ಎಚ್ಚರಿಕೆ ಪಟ್ಟಿಯನ್ನು ಪ್ರಕಟಿಸಿರುವ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಹೇಳಿದೆ. ಹೆಚ್ಚಾಗಿ ಬಳಕೆ ಮಾಡುವ ಪ್ಯಾರಾಸಿಟಮಾಲ್, ಕ್ಯಾಲ್ಸಿಯಂ ಮತ್ತು ವೈಟಮಿನ್ ಡಿ3 ಸೇರಿದಂತೆ ಹಲವು ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಧುಮೇಹ ಔಷಧಗಳು, ಅಧಿಕ ರಕ್ತದೊತ್ತಡದ ನಿವಾರಕ ಔಷಧಿಗಳು ಸೇರಿದಂತೆ ಒಟ್ಟು 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಔಷಧಗಳನ್ನು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಸುರಕ್ಷಿತವಲ್ಲ ಎಂದು ಘೋಷಿಸಿದೆ.
ರಾಜ್ಯ ಔಷಧ ಅಧಿಕಾರಿಗಳು ನಡೆಸಿದ ಅಧ್ಯಯನವನ್ನು ಆಧರಿಸಿ ಈ ವರದಿಯನ್ನು ರಚಿಸಲಾಗಿದೆ. ವೈಟಮಿನ್ ಸಿ ಮತ್ತು ಡಿ ಮಾತ್ರೆಗಳು, ವೈಟಮಿನ್ ಬಿ ಕಾಂಪ್ಲೆಕ್ಸ್, ಐಪಿ 500 ಎಂಜಿ, ಟೆಲ್ಮಿಸಾರ್ಟನ್ ಸೇರಿ 53 ಅಧಿಕ ಮಾರಾಟವಾಗುವ ಔಷಧಿಗಳು ಔಷಧ ನಿಯಂತ್ರಕರಿಂದ ಗುಣಮಟ್ಟದ ತಪಾಸಣೆಯಲ್ಲಿ ವಿಫಲವಾಗಿವೆ ಎಂದು ಹೇಳಿದೆ.
ದೇಶದ ಪ್ರಮುಖ ಔಷಧಗಳ ತಯಾರಕರಾದ ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಕರ್ನಾಟಕ ಆಂಟಿಬಯೋಟಿಕ್ಸ್ & ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಮೆಗ್ ಲೈಫ್ ಸೈನ್ಸಸ್, ಪ್ಯೂರ್ & ಕ್ಯೂರ್ ಹೆಲ್ತ್‌ಕೇರ್ ಸೇರಿದಂತೆ ಹಲವು ತಯಾರಕರ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.
ಹೊಟ್ಟೆಯ ಸೋಂಕು ನಿವಾರಣೆಗೆ ಬಳಸಲಾಗುವ ಮೆಟ್ರೋನಿಡಜೋಲ್ ಔಷಧವನ್ನು ಪಿಎಸ್‌ಯು ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದನೆ ಮಾಡುತ್ತಿದ್ದು, ಈ ಔಷಧಿ ಕೂಡ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.
ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸುವ ಜ್ವರ ಸೇರಿದಂತೆ ಹಲವು ರೋಗ ಲಕ್ಷಣಗಳಿಗೆ ಸಾಮಾನ್ಯವಾಗಿ ಬಳಕೆ ಮಾಡುವ ಪ್ಯಾರಸಿಟಮಾಲ್ ಮಾತ್ರೆಗಳು ಕೂಡ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಹೇಳಿದೆ.
ಆದರೆ ಔಷಧ ತಯಾರಿ ಕಂಪನಿಗಳು ಈ ವರದಿಯನ್ನು ನಿರಾಕರಿಸಿವೆ. ಈ ಔಷಧಗಳ ಅಸಲಿ ತಯಾರಕರು, ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ತಯಾರಕರು ನಾವಲ್ಲ, ಅವು ನಕಲಿ ಔಷಧಿಗಳು ಎಂದು ಹೇಳಿಕೊಂಡಿವೆ. ತನಿಖೆಯಲ್ಲಿ ಕೂಡ ಇದೇ ವಿಚಾರ ಬೆಳಕಿಗೆ ಬಂದಿದೆ ಎಂದು ಸಮರ್ಥಿಸಿಕೊಂಡಿವೆ.
ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ ಆಗಸ್ಟ್‌ನಲ್ಲಿ 156ಕ್ಕೂ ಹೆಚ್ಚು ಸ್ಥಿರ-ಡೋಸ್ ಔಷಧಿಗಳು ಹೆಚ್ಚಿನ ಅಪಾಯ ಉಂಟುಮಾಡುತ್ತವೆ ಎಂದು ಹೇಳಿ ತಯಾರಿ-ಮಾರಾಟವನ್ನು ನಿಷೇಧಿಸಿತ್ತು.
-
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications