ಪಾನಿಪುರಿಯ ಮಸಾಲೆ ನೀರಿಗೆ ಈತ ಬೆರೆಸುತ್ತಿದ್ದ ಟಾಯ್ಲೆಟ್ ಕ್ಲೀನರ್!

Posted By:
Subscribe to Oneindia Kannada

ಅಹ್ಮದಾಬಾದ್, ಫೆಬ್ರವರಿ 6: ಪಾನಿಪುರಿ ಪ್ರಿಯರೆಲ್ಲಾ ದಂಗಾಗುವ ಸುದ್ದಿಯಿದು. ಪಾನಿ ತಿನಿಸಿನ ಬಹುಮುಖ್ಯ ಭಾಗವಾದ ಮಸಾಲೆ ನೀರಿಗೆ (ಪಾನಿ) ಟಾಯ್ಲೆಟ್ ಕ್ಲೀನರ್ ಬೆರೆಸುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚೇತನ್ ನಾಂಜಿ ಮಾರ್ವಾಡಿ ಎಂಬಾತನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಕಠಿಣ ಸಜೆ ವಿಧಿಸಿದೆ. ಸುಮಾರು ದಿನಗಳಿಂದ ನಡೆಯುತ್ತಿದ್ದ ಈ ಪ್ರಕರಣದ ತೀರ್ಪು ಸೋಮವಾರ ಹೊರಬಿದ್ದಿದೆ.

ಚೇತನ್ ನಾಂಜಿ, ಅಹ್ಮದಾಬಾದ್ ನ ಲಾಲ್ ದರ್ವಾಜಾ ಪ್ರಾಂತ್ಯದಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದ. ಸುತ್ತಮುತ್ತಲಿನ ನಿವಾಸಿಗಳೆಲ್ಲಾ ಈತನ ಪಾನಿಪುರಿಗೆ ಮುಗಿಬೀಳುತ್ತಿದ್ದರು.

'Panipuri wala' jailed for mixing toilet cleaner in 'paani'

ಆದರೆ, ಈತನ ಅಂಗಡಿಯ ಮೂಮೂಲು ಗಿರಾಕಿಗಳಾಗಿದ್ದ ಕೆಲವು ಗ್ರಾಹಕರಿಗೆ ಕಾಲಕಳೆದಂತೆ ಹೊಟ್ಟೆನೋವು ಹಾಗೂ ಇನ್ನಿತರ ಉದರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡವು. ಅದರ ಜತೆಜತೆಗೇ, ಬೇರೆಲ್ಲೂ ಕಾಣದ ದ್ರವವೊಂದನ್ನು ಆತ ಪಾನಿಗೆ ಬೆರೆಸುವುದನ್ನು ಕೆಲವಾರು ಗ್ರಾಹಕರು ನೋಡಿದ್ದರು. ಇದು ಮುಂದೆ, ಆ ದ್ರವವೇ ಹೊಟ್ಟೆನೋವಿಗೆ ಕಾರಣವಾಗುತ್ತಿರಬಹುದೆಂಬು ಗುಮಾನಿಯೂ ಗ್ರಾಹಕರಲ್ಲಿ ಮನೆಮಾಡಿತ್ತು.

ಹಾಗಾಗಿ, ಈ ಬಗ್ಗೆ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗೆ (ಎಎಂಸಿ) ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಎಎಂಸಿ, ಚೇತನ್ ನಾಂಜಿಯನ್ನು ಬಂಧಿಸಿತ್ತು.

ಆತ ಬಳಸುತ್ತಿದ್ದ ಪಾನಿಯ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿ, ಅದರಲ್ಲಿ ಆತ ಆಕ್ಸಾಲಿಕ್ ಆ್ಯಸಿಡ್ ಎಂಬ ರಾಸಾಯನಿಕವನ್ನು ಬೆರೆಸುತ್ತಿದ್ದುದು ಪತ್ತೆಯಾಗಿದೆ. ಸಾಮಾನ್ಯವಾಗಿ ಈ ರಾಸಾಯನಿಕವನ್ನು ಟಾಯ್ಲೆಟ್ ಕ್ಲೀನರ್ ಗಳಲ್ಲಿ ಬಳಸಲಾಗುತ್ತದೆ. ಇದು ಪತ್ತೆಯಾದ ಕೂಡಲೇ ಪ್ರಕರಣವು ನ್ಯಾಯಾಲಯದಲ್ಲಿ ದಾಖಲಾಗಿ, ಅದರ ವಿಚಾರಣೆ ದೀರ್ಘ ಕಾಲ ನಡೆದು ಸೋಮವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ ಚೇತನ್ ನಾಂಜಿಗೆ ಆಹಾರ ಕಲಬೆರಕೆ ನಿಯಮಗಳಡಿ ಆರು ತಿಂಗಳ ಕಠಿಣ ಸಜೆ ವಿಧಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A panipuri vendor named Chetan Nanji Marwad has been put behind bars because he used to mix toilet cleaner in 'paani' (panipuri water).
Please Wait while comments are loading...