PAN 2.0 Project: ನಿಮ್ಮ 'ಪ್ಯಾನ್ ಕಾರ್ಡ್' ಅಪ್‌ಗ್ರೇಡ್ ಗೊಂದಲಗಳಿಗೆ ಇಲ್ಲಿದೆ ಪರಿಹಾರ, ಶುಲ್ಕ ಇದೆಯೇ?, ನಿಯಮಗಳೇನು?
ನವದೆಹಲಿ, ನವೆಂಬರ್ 27: ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ 'PAN 2.0 Project' ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿದೆ. ಇದರಿಂದ ಭವಿಷ್ಯದಲ್ಲಿ ಐಟಿ ರಿಟನ್ಸ್ ಅಲ್ಲದವರ ಆರ್ಥಿಕ ಲೆಕ್ಕಾಚಾರಗಳು ಸರ್ಕಾರದ ಸುಪರ್ದಿಗೆ ಬರಲಿವೆ. ಅಲ್ಲದೇ ಹಾಲಿ ಎಲ್ಲ ಪ್ಯಾನ್ ಕಾರ್ಡ್ QR ಕೋಡ್ ಸಹಿತ PAN 2.0 ಕಾರ್ಡ್‌ಗೆ ಅಪ್‌ಗ್ರೇಡ್ ಆಗಲಿದೆ.
ಹಾಗಾದರೆ ಈಗಿರುವ ಕಾರ್ಡ್ ಕಥೆ ಮುಗಿಯಿತಾ? ಮತ್ತೊಂದು ಕಾರ್ಡ್ ಪಡೆಯಬೇಕಾ? ಅಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಾ? ಅದಕ್ಕೂ ಶುಲ್ಕವಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ದೇಶದಲ್ಲಿ ಹಾಲಿ ಇರುವ 78 ಕೋಟಿ ಪಾನ್ ಕಾರ್ಡ್‌ಗಳು ಶೀಘ್ರವೇ ಅಪ್‌ಗ್ರೇಡ್ ಆಗಲಿವೆ. ಹೇಗೆಂಬ ವಿವರ ಇಲ್ಲಿದೆ ನೋಡಿದೆ.

ಸಾಮಾನ್ಯ ಜನರಿಗೆ PAN Card ನಂತೆ ವಾಣಿಜ್ಯ ತೆರಿಗೆದಾರರಿಗೆ ಅಂದರೆ ವಹೀವಾಟು ಆಧಾರದಲ್ಲಿ ಬೃಹತ್ ತೆರಿಗೆ ಪಾವತಿದಾರರಿಗೆ TIN card (Taxpayer Identification Number) ಇರುತ್ತದೆ. ಇನ್ನೂ ದೊಡ್ಡ ದೊಡ್ಡ ಕಂಪನಿಗಳಿಗೆ, ಫರ್ಮ್ ಗಳು TAN card (Tax deduction and collection account number) ಬಳಸುತ್ತಾರೆ. ಈ ಮೇಲಿನ ಎರಡು ಕಾರ್ಡ್‌ಗಳ ಜಾಗದಲ್ಲಿ ಕೆಲವೇ ದಿನಗಳಲ್ಲಿ ಕ್ಯೂಆರ್ ಕೋಡ್ ಸಹಿತ PAN Card ಒಂದೇ ಇರಲಿದೆ.
ಇನ್ನೂ 2017ರ ನಂತರ ಹೊಸ ಪ್ಯಾನ್ ಕಾರ್ಡ್ ಮಾಡಿಸಿದವರಿಗೆ ಕ್ಯೂಆರ್ ಕೋಡ್ ಇದೆ. ಅದಕ್ಕೂ ಹಿಂದಿನ ಪ್ಯಾನ್‌ಗಳಿಗೆ ಕ್ಯೂಆರ್ ಕೋಡ್ ಇಲ್ಲ. ಈ ಎರಡು ಬಗೆಯ ಕಾರ್ಡ್‌ಗಳು 'ಪ್ಯಾನ್ 2.0 ಯೋಜನೆ' ವ್ಯಾಪ್ತಿಯಲ್ಲಿ ಅಪ್‌ಗ್ರೇಡ್ ಆಗಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಐಟಿ ರಿಟರ್ನ್ ಮಾಡದವರ ಸಣ್ಣ ಪುಟ್ಟ ವ್ಯವಹಾರಗಳು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಇದರಿಂದ ಹಣದ ವ್ಯವಹಾರದಲ್ಲಿ ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳದಂತೆ, ಅಕ್ರಮ ನಡೆದಂತೆ ಐಟಿ ಅಧಿಕಾರಿಗಳು ಕಣ್ಣಿಡುವ ಸಾಧ್ಯತೆ ಇದೆ ಎಂಬುದು ಸದ್ಯದ ಮಾಹಿತಿ.
ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ?
ಸದ್ಯ ಪ್ಯಾನ್ ಕಾರ್ಡ್ ಬಳಕೆದಾರರು PAN 2.0 ಯೋಜನೆಯ ಅಡಿ ಮತ್ತೊಮ್ಮೆ ಪ್ಯಾನ್‌ಗಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸ PAN 2.0 ಕಾರ್ಡ್‌ಗೆ ಅಪ್‌ಗ್ರೇಡ್ ಆಗಬೇಕಿರುತ್ತದೆ. ಅಪ್‌ಗ್ರೇಡ್ ಆದ ಬಳಿಕ ಇದೇ ಸಂಖ್ಯೆಯ ಕಾರ್ಡ್ ಮಾನ್ಯವಾಗುತ್ತದೆ. ಹೊಸ ಸಂಖ್ಯೆ, ಹೊಸದಾಗಿ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ ಎಂದು ಕೇಂದ್ರ ಅಧಿಕೃತಪಡಿಸಿದೆ.
ಅಪ್‌ಗ್ರೇಸ್ ಕಾರ್ಡ್‌ಗೆ ಶುಲ್ಕ ವಿಧಿ ಇದೆಯೇ?
ಕೇಂದ್ರದ ಸೂಚನೆಯಂತೆ ನೀವು ಅಪ್‌ಗ್ರೇಡ್ ಮಾಡುವ ಕಾರ್ಡ್ ಸಂಖ್ಯೆ ಅದೇ ಇರುತ್ತದೆ. ಹೊಸ ಕಾರ್ಡ್ ಉಚಿತವಾಗಿ ಬರಲಿದೆ. ಅದಕ್ಕಾಗಿ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ. ಯಾವ ಶುಲ್ಕವನ್ನು ನೀವು ಭರಿಸಬೇಕಾಗಿಲ್ಲ. ಅಪ್‌ಗ್ರೇಡ್ ಆಗಿ ನಿಮ್ಮ ಕೈಗೆ ಸಿಗಲಿರುವ ಕಾರ್ಡ್ ಕ್ಯೂಆರ್ ಕೋರ್ಡ್ ವೈಶಿಷ್ಯತೆ ಹೊಂದಿರುತ್ತದೆ. ಅದನ್ನು ಉಚಿತವಾಗಿ ನಿಮಗೆ ನೀಡಲಾಗುತ್ತದೆ.
ಹಾಲಿ ಪ್ಯಾನ್ ಕಾರ್ಡ್ ಬಳಕೆದಾರರ ಮಾಹಿತಿ
ಬಳಕೆದಾರರ ಹಳೆಯ ಪ್ಯಾನ್ ಕಾರ್ಡ್‌ಗಳು ಮಾನ್ಯವಾಗಿರುತ್ತವೆ. ಕ್ಯೂಆರ್ ಕೋಡ್ ಸಹಿತ ನಿಮಗೆ ಉಚಿತವಾಗಿ ಬರುವ ಹೊಸ ಅಪ್‌ಗ್ರೇಡ್ ಕಾರ್ಡ್‌ಗಳನ್ನು ಸರ್ಕಾರವೇ ಎಲ್ಲ ಹೋಲ್ಡರ್‌ಗಳಿಗೆ ನೀಡಲಿದೆ. ಅದನ್ನು ಹಳೆಯ ಕಾರ್ಡ್‌ಗೆ ಬದಲಾವಣೆ ಅನಗತ್ಯ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ.
ಈ 2.0 ಪ್ಯಾನ್ ಕಾರ್ಡ್ ಕೇವಲ ಸಾಮಾನ್ಯ ಜನರಿಗೆ, ವ್ಯಾಪಾರಿಗಳಿಗೆ ಮಾತ್ರವಲ್ಲದೇ, ದೊಡ್ಡ ದೊಡ್ಡ ತೆರಿಗೆದಾರರಿಗೆ, ಕಂಪನಿಗಳಿಗೆ, ಎಲ್ಲ ವಾಣಿಜ್ಯ ಕಾರ್ಯಾಚರಣೆಗಳಿಗೂ ಅನುಕೂಲವಾಗುತ್ತದೆ. ಇದೊಂದೆ ಕಾರ್ಡ್ ಎಲ್ಲ ವರ್ಗದವರಿಗೆ ವಾಣಿಜ್ಯ ಐಡೆಂಟಿಫೈ ಆಗಿಯೂ ಕೆಲಸಕ್ಕೆ ಬರಲಿದೆ. ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಗೆ ಎಲ್ಲ ವಾಣಿಜ್ಯ ಕಾರ್ಯಚಟುವಟಿಕೆಗಳು ಬರಲಿವೆ.
ವೇತನ, ಐಟಿ ವ್ಯವಹಾರ, ಇತರ ವಹೀವಾಟುಗಳಲ್ಲಿ ಈ ಹೊಸ ಕಾರ್ಡ್ ಮಹತ್ವದ ಪಾತ್ರವಹಿಸುವಂತೆ ಪ್ಯಾನ್ 2.0 ಯೋಜನೆಗೆ ಜಾರಿಗೆ ತರಲು ಮುಂದಾಗಿದೆ.












Click it and Unblock the Notifications