ಭಾನುವಾರ ಕತ್ತಲಾಗುತ್ತಿದ್ದಂತೆ ಜಮ್ಮು- ಕಾಶ್ಮೀರದ ಬಳಿ ಪಾಕಿಸ್ತಾನದ ಡ್ರೋನ್‌ಗಳ ಹಾರಾಟ: ಭದ್ರತಾ ಪಡೆಗಳಿಂದ ಕಟ್ಟೆಚ್ಚರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾನುವಾರ (ಜನವರಿ 11) ಸಂಜೆ ಪಾಕಿಸ್ತಾನದ ಡ್ರೋನ್‌ಗಳ ಹಾರಾಟವನ್ನು ಪತ್ತೆ ಮಾಡಲಾಗಿದೆ. ಭಾರತೀಯ ಸೇನಾ ಯೋಧರು ಈ ಡ್ರೋನ್‌ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಇನ್ನೂ ಹಲವಾರು ಡ್ರೋನ್‌ಗಳು ಗಡಿ ದಾಟಿ ಭಾರತದತ್ತ ಬರುತ್ತಿವೆ ಎಂದು ಮಳಗಳಿಂದ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಸಾಂಬಾ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿ (ಐಬಿ) ಹಾಗೂ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನದ ಡ್ರೋನ್‌ಗಳ ಹಾರಾಟವನ್ನು ಪತ್ತೆಯಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಭಾನುವಾರ ಎಲ್‌ಒಸಿ ಬಳಿ ಪಾಕ್ ಡ್ರೋನ್‌ಗಳು ಪತ್ತೆಯಾಗಿದ್ದು, ಇವು ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಗಡಿ ಭಾಗದ ಒಳಗೆ ನುಗ್ಗಲು ಯತ್ನಿಸಿವೆ. ಆದರೆ, ಇದೇ ವೇಳೆ ಅಲರ್ಟ್ ಆಗಿದ್ದ ಭಾರತೀಯ ಸೇನಾ ಪಡೆ ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿಯಾಗಿದೆ. ಇದೀಗ ಆ ಡ್ರೋನ್‌ಗಳಿ ಹೊತ್ತು ತಂದಿರಬಹುದಾದ ವಸ್ತುಗಳ ಕುರಿತು ಪರಿಶೀಲನೆ ಕಾರ್ಯ ಮುಂದುವರೆಸಿದೆ.
ಪಂಜಾಬ್ ಗಡಿಯಲ್ಲಿ ಪಾಕಿಸ್ತಾನ ಡ್ರೋನ್‌ಗಳು ಹೆಚ್ಚು ಕಂಡುಬರುತ್ತವೆ. ಇವು ಹೆಚ್ಚಾಗಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕ ವಸ್ತುಗಳನ್ನು ಹೊತ್ತುತಂದಿದ್ದು, ಇವುಗಳನ್ನು ಹಲವು ಸಂದರ್ಭಗಳಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದ ಉದಾಹರಣೆಗಳಿವೆ. ಮೊನ್ನೆ ಶನಿವಾರ ಪಿಒಕೆ ಕಡೆಯಿಂದ ಬಂದ ಡ್ರೋನ್‌ವೊಂದು, ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳ ಸರಕನ್ನು ಬೀಳಿಸಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
"ಅದೇ ರೀತಿಯಲ್ಲಿ ರಾಜೌರಿ ಜಿಲ್ಲೆಯಲ್ಲಿ ಸಂಜೆ 6.35ಕ್ಕೆ ಮತ್ತೊಂದು ಡ್ರೋನ್ ಪತ್ತೆಯಾಗಿದ್ದು, ಮಿನುಗುವ ಬೆಳಕನ್ನು ಹೊಂದಿರುವ ಹಾರುವ ವಸ್ತು ಕಲಕೋಟ್‌ನ ಧರ್ಮಸಾಲ್ ಗ್ರಾಮದಿಂದ ಬಂದು ಭರಖ್ ಕಡೆಗೆ ಚಲಿಸಿದೆ. ಮತ್ತೊಂದು ಡ್ರೋನ್ 7:15ರ ಸುಮಾರಿಗೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದೆ" ಎಂದು ಭಾರತೀಯ ಸೇನೆಯ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ "ಸಂಜೆ 6.25ಕ್ಕೆ ಪೂಂಚ್ ಜಿಲ್ಲೆಯ ಮಂಕೋಟೆ ಸೆಕ್ಟರ್‌ನ ಟೋಪಾ ಕಡೆಗೆ ಮತ್ತೊಂದು ಪಾಕ್ ಡ್ರೋನ್ ಚಲನೆ ಕಂಡುಬಂದಿದೆ. ಆದರೆ, ಈ ಎಲ್ಲಾ ಡ್ರೋನ್‌ಗಳನ್ನು ಮಷಿನ್ ಗನ್‌ಗಳಿಂದ ಹೊಡೆದುರುಳಿಸಲಾಗಿದೆ. ಅವು ಹೊತ್ತು ತಂದಿರಬಹುದಾದ ವಸ್ತುಗಳ ಶೋಧಕಾರ್ಯ ಮುಂದುವರೆದಿದೆ" ಎಂದು ತಿಳಿಸಿವೆ.
ಕಳೆದ ವರ್ಷ ಪೆಹಲ್ಗಾಮ್‌ನಲ್ಲಿ ಪಾಕ್ ಉಗ್ರರು ದಾಳಿ ನಡೆಸಿದ್ದು, ಇದಕ್ಕೆ ಭಾರತರ ತಕ್ಕ ಪ್ರತ್ಯುತ್ತರ ಕೊಡುವ ಮೂಲಕ ತಿರುಗೇಟಿ ನೀಡಿತ್ತು. ಈ ವೇಳೆ 'ಆಪರೇಷನ್ ಸಿಂಧೂರ್' ಆಪರೇಷನ್‌ಗಿಳಿದ ಭಾರತ ಪಾಕಿಸ್ತಾನದ ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಬಳಿಕ ಡ್ರೋನ್ ನುಗ್ಗುವಿಕೆ ತೀವ್ರವಾಗಿ ಕಡಿಮೆ ಆಗಿದೆ. ಆದರೂ, ಇಷ್ಟೆಲ್ಲಾ ಹೊಡೆತ ಬಿದ್ದರೂ ಸಹ ಪಾಪಿ ಪಾಕಿಸ್ತಾನ ಮತ್ತೆ ಡ್ರೋನ್ ಹಾರಾಟ ನಡೆಸಿದೆ. ಇವುಗಳನ್ನು ನಮ್ಮ ಸೈನಿಕರು ಹೊಡೆದುರುಳಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದೆ.












Click it and Unblock the Notifications