Get Updates
Get notified of breaking news, exclusive insights, and must-see stories!

ಸಂಸತ್ತಿನ ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿರುವ ವಿಪಕ್ಷಗಳು

ನವದೆಹಲಿ, ಜುಲೈ. 25: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ಮೂರು ದಿನಗಳು ರದ್ದಾದ ನಂತರ, ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (ಇಂಡಿಯಾ) ಗುಂಪು ನಿರ್ಧರಿಸಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮಂಗಳವಾರ ಹೇಳಿದ್ದಾರೆ.

ಮಣಿಪುರ ವಿಷಯದ ಕುರಿತು ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. "ನಮ್ಮ ವಿವಿಧ ಮನವಿಗಳ ಹೊರತಾಗಿಯೂ, ಮೇ 3 ರ ನಂತರ ಮಣಿಪುರದಲ್ಲಿ ನಡೆದ ಬೆಳವಣಿಗೆಗಳು ಮತ್ತು ಅದನ್ನು ತಡೆಯಲು ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರವಾಗಿ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿಯನ್ನು ಒತ್ತಾಯಿಸಲು ನಮಗೆ ಲಭ್ಯವಿರುವ ಏಕೈಕ ಸಂಸದೀಯ ಸಾಧನ ಇದಾಗಿದೆ" ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

lok-sabha-on-manipur-issue

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಂಖ್ಯೆ ಸ್ಪಷ್ಟವಾಗಿಲ್ಲದಿದ್ದರೂ, ಈ ವಿಷಯವನ್ನು ಪ್ರಸ್ತಾಪಿಸಲು ಇದು ಸರಿಯಾದ ವೇದಿಕೆ ಎಂದು ಪಕ್ಷಗಳು ಭಾವಿಸಿವೆ. ಮಣಿಪುರದ ಬಗ್ಗೆ ಚರ್ಚೆಯ ನಂತರ ಪ್ರಧಾನಿ ಹೇಳಿಕೆ ನೀಡಿದಾಗ ಮಾತ್ರ ಸಂಸತ್ತು ಕಾರ್ಯನಿರ್ವಹಿಸುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ. ರಾಜ್ಯಸಭೆಯಲ್ಲಿ, ಪ್ರತಿಪಕ್ಷಗಳು ನಿಯಮ 267 ರ ಅಡಿಯಲ್ಲಿ 51 ನೋಟಿಸ್‌ಗಳನ್ನು ಮಂಡಿಸಿವೆ. ಇದು ಪ್ರಸ್ತುತ ವಿಷಯವಾದ ಮಣಿಪುರದ ಬಗ್ಗೆ ಚರ್ಚೆಯನ್ನು ನಡೆಸಲು ದಿನದ ವ್ಯವಹಾರವನ್ನು ಅಮಾನತುಗೊಳಿಸುವ ಅಗತ್ಯವಿದೆ.

ಏನಿದು ಅವಿಶ್ವಾಸ ನಿರ್ಣಯ...?

ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮತ್ತು ಸದನದ ಯಾವುದೇ ಸದಸ್ಯರು ಮಾತ್ರ ಮಂಡಿಸಬಹುದು. ಸದಸ್ಯರು ಬೆಳಗ್ಗೆ 10 ಗಂಟೆಗೆ ಮೊದಲು ಲಿಖಿತ ಸೂಚನೆಯನ್ನು ನೀಡಬೇಕು. ಕನಿಷ್ಠ 50 ಸದಸ್ಯರು ಪ್ರಸ್ತಾವನೆಯನ್ನು ಅಂಗೀಕರಿಸಬೇಕು. ನಂತರ ಸಭಾಧ್ಯಕ್ಷರು ಪ್ರಸ್ತಾವನೆಯ ಚರ್ಚೆಯ ದಿನಾಂಕವನ್ನು ನಿರ್ಧರಿಸುತ್ತಾರೆ. ಲೋಕಸಭೆಯಲ್ಲಿ ಬಹುಮತದ ಬೆಂಬಲವನ್ನು ಹೊಂದಿರುವಾಗ ಮಾತ್ರ ಸರ್ಕಾರವು ಕಾರ್ಯನಿರ್ವಹಿಸುತ್ತದೆ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿರುವ ಪಕ್ಷವು ರಾಜೀನಾಮೆ ನೀಡಬೇಕಾಗುತ್ತದೆ.

lok-sabha-on-manipur-issue

ಅವಿಶ್ವಾಸ ನಿರ್ಣಯದ ಬಗ್ಗೆ ತಿಳಿಯಬೇಕಾದ ಎಂಟು ವಿಷಯಗಳು

1. ಸ್ವಾತಂತ್ರ್ಯ ನಂತರ ಲೋಕಸಭೆಯಲ್ಲಿ 27 ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲಾಗಿದೆ.

2. 1962 ರ ಯುದ್ಧದಲ್ಲಿ ಚೀನಾಕ್ಕೆ ಸೋತ ತಕ್ಷಣ, ಆಗಸ್ಟ್ 1963 ರಲ್ಲಿ ಕಾಂಗ್ರೆಸ್ ನಾಯಕ ಆಚಾರ್ಯ ಕೃಪಲಾನಿ ಅವರು ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ಮೊದಲ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು.

3. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಅತಿ ಹೆಚ್ಚು ಅವಿಶ್ವಾಸ ನಿರ್ಣಯಗಳನ್ನು ಎದುರಿಸಿದ್ದಾರೆ. ಬರೋಬ್ಬರಿ 15 ಅವಿಶ್ವಾಸ ನಿರ್ಣಯಗಳನ್ನು ಅವರ ವಿರುದ್ಧ ಮಂಡಿಸಲಾಗಿದೆ. ಆದರೆ, ಅವರು ಪ್ರತಿ ಬಾರಿಯು ಗೆದಿದ್ದಾರೆ.. ಪಶ್ಚಿಮ ಬಂಗಾಳದ ಮಾಜಿ ಸಿಎಂ ಸಿಪಿಐ(ಎಂ)ನ ಜ್ಯೋತಿರ್ಮಯ್ ಬಸು ಅವರು ನಾಲ್ಕು ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

4. ನರಸಿಂಹರಾವ್ ಮೂರು ಅವಿಶ್ವಾಸ ನಿರ್ಣಯಗಳನ್ನು ಎದುರಿಸಬೇಕಾಯಿತು. ಮೊರಾರ್ಜಿ ದೇಸಾಯಿ ಎರಡು ಮತ್ತು ಜವಾಹರಲಾಲ್ ನೆಹರು, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಎಲ್ಲರೂ ಒಂದನ್ನು ಎದುರಿಸಿದ್ದಾರೆ.

5. 2003 ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾಜಪೇಯಿ ವಿರುದ್ಧದ ನಿರ್ಣಯವನ್ನು ಮಂಡಿಸಿದ್ದರು.

6. ಸದನದ ಬಹುಮತವನ್ನು ಮೂರು ಬಾರಿ ಸಾಬೀತುಪಡಿಸಬೇಕಾದ ಲಾಲ್ ಬಹದ್ದೂರ್ ಶಾಸ್ತ್ರಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಸುದೀರ್ಘ ಚರ್ಚೆಯ ಅವಧಿ 24.34 ಗಂಟೆಗಳು.

7. 1979ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ರಾಜೀನಾಮೆ ನೀಡಬೇಕಾಯಿತು. 1999ರಲ್ಲಿ ತಮ್ಮ ಮಿತ್ರಪಕ್ಷವಾದ ಎಐಎಡಿಎಂಕೆ ಮೈತ್ರಿಕೂಟದಿಂದ ಹಿಂದೆ ಸರಿದ ನಂತರ ವಾಜಪೇಯಿ ಸರ್ಕಾರ ಅಧಿಕಾರ ಕಳೆದುಕೊಂಡಿದ್ದು, ಹೊರತುಪಡಿಸಿ ಹೆಚ್ಚಿನ ಅವಿಶ್ವಾಸ ನಿರ್ಣಯಗಳು ಸೋಲು ಕಂಡಿವೆ.

8. 2018 ರಲ್ಲಿ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು 195 ಮತಗಳಿಂದ ಗೆಲುವು ಕಂಡಿತ್ತು. 135 ಸದಸ್ಯರು ಬೆಂಬಲಿಸಿದರೆ, 330 ಸಂಸದರು ಅದನ್ನು ತಿರಸ್ಕರಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+