Get Updates
Get notified of breaking news, exclusive insights, and must-see stories!

ಎನ್‌ಡಿಎ ಬೆಂಬಲಿಸಿದ 38 ಪಕ್ಷಗಳಲ್ಲಿ 24 ಪಕ್ಷಗಳಲ್ಲಿ ಒಬ್ಬ ಸಂಸದರೂ ಇಲ್ಲ!

ನವದೆಹಲಿ, ಜುಲೈ 19: ಲೋಕಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣ ರಂಗೇರಿದೆ. ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ 26 ವಿಪಕ್ಷಗಳು ಒಗ್ಗಟ್ಟಾಗಿ ಸಭೆ ನಡೆಸಿದ್ದು, ಇಂಡಿಯಾ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಇನ್‌ಕ್ಲೂಸಿವ್ ಅಲಯನ್ಸ್ ) ಹೆಸರಿನಲ್ಲಿ ಒಗ್ಗಟ್ಟಾಗಿ ಚುನಾವಣೆಗೆ ಹೋಗಲು ನಿರ್ಧರಿಸಿವೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಬಿಜೆಪಿಯನ್ನು ಸೋಲಿಸಲು ರಣತಂತ್ರ ರೂಪಿಸಿವೆ. 7 ರಾಜ್ಯಗಳ ಸಿಎಂ ಗಳು ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ಟಿಎಂಸಿ ಸೇರಿದಂತೆ ಪ್ರಮುಖ ಪಕ್ಷಗಳು ಭಾಗವಹಿಸಿವೆ.

Opposition Reveals: Majority of NDA Meeting Parties Lack MPs

ವಿಪಕ್ಷಗಳ ಮೀಟಿಂಗ್‌ಗೆ ವಿರುದ್ಧವಾಗಿ ಬಿಜೆಪಿ ಕೂಡ ಎನ್‌ಡಿಎ ಸಭೆ ನಡೆಸಿದೆ. ಒಟ್ಟು 38 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಎನ್‌ಡಿಎಗೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ.

24 ಪಕ್ಷಗಳಲ್ಲಿ ಒಬ್ಬ ಸಂಸದರೂ ಇಲ್ಲ!

ಇನ್ನು ಎನ್‌ಡಿಎಯಲ್ಲಿ 38 ಪಕ್ಷಗಳು ಸಭೆ ನಡೆಸಿದ್ದು, ಇದರಲ್ಲಿ 24 ಪಕ್ಷಗಳು ಒಬ್ಬ ಸಂಸದರನ್ನೂ ಹೊಂದಿಲ್ಲ ಎಂದು ಯುಬಿಟಿ ಸಂಸದೆ ಪ್ರಿಯಾಂಕ ಚತುರ್ವೇದಿ ಕಾಲೆಳದಿದ್ದಾರೆ. ಏಳು ಪಕ್ಷಗಳು ಒಬ್ಬ ಲೋಕಸಭಾ ಸಂಸದರನ್ನು ಹೊಂದಿದ್ದು, ಎರಡು ಪಕ್ಷಗಳು ಮಾತ್ರ ಇಬ್ಬರು ಲೋಕಸಭಾ ಸಂಸದರನ್ನು ಹೊಂದಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸುಮ್ಮನೆ ಮಾಹಿತಿಗಾಗಿ ಹೇಳುತ್ತಿದ್ದೇನೆ, ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಸಭಗೆ ಒಬ್ಬ ಲೋಕಸಭಾ ಎಂಪಿಯೂ ಇಲ್ಲದ ಪಕ್ಷಗಳು ಹಾಜರಾಗುತ್ತಿರುವ ಬಗ್ಗೆ ಯಾರೋ ತಮಾಷೆ ಮಾಡಿದ್ದರು. ಆದರೆ ಈಗ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿರುವ 24 ಪಕ್ಷಗಳು ಒಬ್ಬ ಸಂಸದರನ್ನು ಹೊಂದಿಲ್ಲ" ಎಂದು ಕಾಲೆಳದಿದ್ದಾರೆ.

ಚತುರ್ವೇದಿಯವರಂತೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ವಕ್ತಾರ ಡೆರೆಕ್ ಒ'ಬ್ರೇನ್ ಕೂಡ ಎನ್‌ಡಿಎ ಸಭೆಯನ್ನು ಲೇವಡಿ ಮಾಡಿದರು. ಟ್ವೀಟ್‌ ಮಾಡಿರುವ ಅವರು, ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಸ್ಪಷ್ಟವಾದ ನಿರ್ಧಾರ ಮಾಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಜೂನ್ 18 ರಂದು 30ಕ್ಕಿಂತ ಹೆಚ್ಚು ಪಕ್ಷಗಳ ಜೊತೆ ಸಭೆ ನಡೆಸಿದೆ. ಆದರೆ ಆ ಪಕ್ಷಗಳ ಸಂಸದರ ಸಂಖ್ಯೆ ಎಷ್ಟಿವೆ" ಎಂದು ಲೇವಡಿ ಮಾಡಿದ್ದಾರೆ.

ವಿಪಕ್ಷಗಳ ಸಂಸದರ ಲೆಕ್ಕಾಚಾರ

ಎಂಟು ಎನ್‌ಡಿಎ ಪಕ್ಷಗಳು ಶೂನ್ಯ ಸಂಸದರನ್ನು ಹೊಂದಿದ್ದು, ಒಂಬತ್ತು ಎನ್‌ಡಿಎ ಪಕ್ಷಗಳು ತಲಾ ಒಬ್ಬ ಸಂಸದರನ್ನು ಹೊಂದಿದ್ದರೆ ಮೂರು ಎನ್‌ಡಿಎ ಪಕ್ಷಗಳು ತಲಾ ಇಬ್ಬರು ಸಂಸದರನ್ನು ಹೊಂದಿವೆ ಎಂದು ಡೆರೆಕ್ ಹೇಳಿದರು. ಇದಕ್ಕೆ ಟ್ವಿಟರ್ ಬಳಕೆ ದಾರರು ಪ್ರತಿಕ್ರಿಯೆ ನೀಡಿದ್ದು, 26 ವಿರೋಧ ಪಕ್ಷಗಳ ಸಂಸದರ ಸಂಖ್ಯೆಯನ್ನು ನೋಡಿ ಎಂದು ತಿರುಗೇಟು ನೀಡಿದ್ದಾರೆ.

26 ವಿರೋಧ ಪಕ್ಷಗಳ ಪೈಕಿ ಒಂಬತ್ತು ಆರ್‌ಜೆಡಿ, ಪಿಡಿಪಿ, ಆರ್‌ಎಲ್‌ಡಿ, ಸಿಪಿಐಎಂಎಲ್, ಎಫ್‌ಬಿ, ಎಡಿ(ಕೆ), ಕೆಸಿ(ಜೆ), ಕೆಡಿಎಂಕೆ, ಎಂಎಂಕೆ ಪಕ್ಷಗಳು ಶೂನ್ಯ ಸಂಸದರನ್ನು ಹೊಂದಿವೆ ಎಂದು ಡೆರೆಕ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಆರು ಪಕ್ಷಗಳು (ಸಿಪಿಐ, ಎಎಪಿ, ಜೆಎಂಎಂ, ಎಂಡಿಎಂಕೆ, ಆರ್ ಎಸ್‌ಪಿ, ಕೆಸಿಎಂ) ತಲಾ ಒಬ್ಬ ಸಂಸದರನ್ನು ಹೊಂದಿವೆ.

ಎರಡು ಪಕ್ಷಗಳು (ವಿಸಿಕೆ, ಐಯುಎಂಎಲ್) ತಲಾ ಇಬ್ಬರು ಸಂಸದರನ್ನು ಹೊಂದಿವೆ. ಎರಡು ಪಕ್ಷಗಳು (ಸಿಪಿಎಂ ಮತ್ತು ಎನ್‌ಸಿ) ತಲಾ ಮೂವರು ಸಂಸದರನ್ನು ಹೊಂದಿದ್ದರೆ ಒಂದು ಪಕ್ಷ (ಎನ್‌ಸಿಪಿ) ಐದು ಸಂಸದರನ್ನು ಹೊಂದಿದೆ. "ಆದ್ದರಿಂದ, 26 ರಲ್ಲಿ 20 ಪಕ್ಷಗಳು 21 ಸಂಸದರನ್ನು ಹೊಂದಿವೆ" ಎಂದು ಒಬ್ಬರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+