Impeachment Motion: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗದ ಪ್ರಸ್ತಾವನೆಗೆ ಮುಂದಾದ ವಿಪಕ್ಷಗಳು
ನವದೆಹಲಿ, ಆಗಸ್ಟ್ 18: ಮತಗಳ್ಳತನ ಪ್ರಕರಣದ ಬಗ್ಗೆ ದೊಡ್ಡ ಪ್ರಮಾಣದ ಚಳುವಳಿಗೆ ಇಂಡಿಯಾ ಒಕ್ಕೂಟ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಯೋಜಿಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗದ ಪ್ರಸ್ತಾವನೆ ಸಲ್ಲಿಸಲು ವಿಪಕ್ಷಗಳು ಮುಂದಾಗಿವೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಮತ ಕಳ್ಳತನ ಆರೋಪ ಮಾಡಿದ ನಂತರ, ಆಯೋಗವು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ಮತದಾರರ ಡೇಟಾವನ್ನು ತಿರುಚುತ್ತಿದೆ ಎಂದು ಆರೋಪಿಸಿದರು. ಆಗಸ್ಟ್ 7 ರಂದು, ಬೆಂಗಳೂರು ಕೇಂದ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತ ಕಳ್ಳತನ ಮತಗಳು ಬಿಜೆಪಿಯ ಲೋಕಸಭಾ ಗೆಲುವಿಗೆ ಕಾರಣವಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷದ ನಾಯಕರು ಮಹಾಭಿಯೋಗ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯ ಮತ ಕಳವು ಆರೋಪದ ನಂತರ, ಚುನಾವಣಾ ಆಯೋಗವು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪ್ರತಿಕ್ರಿಯಿಸಿತ್ತು. ಈ ವಿಷಯದಲ್ಲಿ ರಾಜಕೀಯವು ಉತ್ತುಂಗಕ್ಕೇರಿದೆ. ಭಾನುವಾರ, ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ರಾಹುಲ್ ಗಾಂಧಿ ಅವರ ಆರೋಪಗ ಕುರಿತಿ ಪ್ರತಿಕ್ರಿಯಿಸಿದ ಸಿಇಸಿ ಜ್ಞಾನೇಶ್ ಕುಮಾರ್ ಭಾನುವಾರ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು "ಆಧಾರರಹಿತ" ಮತ್ತು "ಸಂವಿಧಾನಕ್ಕೆ ಮಾಡಿದ ಅವಮಾನ" ಎಂದು ತಳ್ಳಿಹಾಕಿದರು. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿಯವರು ತಮ್ಮ ಆರೋಪಗಳನ್ನು ದೃಢೀಕರಿಸುವ ಸಹಿ ಮಾಡಿದ ಅಫಿಡವಿಟ್ ಅನ್ನು ಸಲ್ಲಿಸಬೇಕು ಅಥವಾ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಅಫಿಡವಿಟ್ ನೀಡಬೇಕು ಅಥವಾ ದೇಶಕ್ಕೆ ಕ್ಷಮೆಯಾಚಿಸಬೇಕು. ಏಳು ದಿನಗಳಲ್ಲಿ ಅಫಿಡವಿಟ್ ಸ್ವೀಕರಿಸದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದರ್ಥ ಎಂದು ಜ್ಞಾನೇಶ್ ಕುಮಾರ್ ಹೇಳಿದರು.
ಇಂದು ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಇಂಡಿಯಾ ಮೈತ್ರಿಕೂಟದ ನಾಯಕರು ಮಲ್ಲಿಕಾರ್ಜುನ್ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ, ಸದನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳು ಮತ್ತು ಉಪರಾಷ್ಟ್ರಪತಿ ಅಭ್ಯರ್ಥಿಯ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಸಿಇಸಿ ವಿರುದ್ದ ಮಹಾಭಿಯೋಗದ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಹಲವಾರು ರಾಷ್ಟ್ರೀಯ ಮಾಧ್ಯಮ ವಾಹಿನಿಗಳು ವರದಿ ಮಾಡಿವೆ.












Click it and Unblock the Notifications