Pune Bandh : ಡಿ.13ರಂದು ಪುಣೆ ಬಂದ್: ಏನಿರುತ್ತೆ ಮತ್ತು ಏನಿರಲ್ಲ ತಿಳಿಯಿರಿ
ಪುಣೆ, ಡಿಸೆಂಬರ್ 12: ಮರಾಠ ಯೋಧ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಹೇಳಿಕೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಮತ್ತು ಇತರ ಸಾಮಾಜಿಕ ಸಂಘಟನೆಗಳು ಡಿಸೆಂಬರ್ 13 ಮಂಗಳವಾರದಂದು 'ಬಂದ್'ಗೆ ಕರೆ ನೀಡಿವೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ವ್ಯಾಪಾರಿಗಳ ಸಂಘಟನೆಯು ಡಿಸೆಂಬರ್ 13ರ 'ಬಂದ್'ಗೆ ಬೆಂಬಲ ನೀಡಲು ನಿರ್ಧರಿಸಿದೆ. ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಶಿವಸೇನೆ, ಸಂಭಾಜಿ ಬ್ರಿಗೇಡ್ ಮತ್ತು ಇತರ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿ ಕರೆ ನೀಡಿರುವ ಬಂದ್‌ಗೆ ಬೆಂಬಲ ನೀಡುವಂತೆ ಮೂರು ಪಕ್ಷಗಳ ಪದಾಧಿಕಾರಿಗಳು ಮತ್ತು ಸ್ಮಭಾಜಿ ಬ್ರಿಗೇಡ್‌ನ ಪದಾಧಿಕಾರಿಗಳು ವರ್ತಕರ ಸಂಘಕ್ಕೆ ಮನವಿ ಮಾಡಿದ್ದಾರೆ ಎಂದು ಪುಣೆಯ ವರ್ತಕರ ಸಂಘಗಳ ಒಕ್ಕೂಟದ (ಎಫ್‌ಎಟಿಪಿ) ಅಧ್ಯಕ್ಷ ಫತೇಚಂದ್ ರಂಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರು ನೀಡಿದ್ದ ಹೇಳಿಕೆಯಲ್ಲಿ ಏನಿದೆ?:
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದರು. "ಈ ಹಿಂದೆ, ನಿಮ್ಮ ಆದರ್ಶಪ್ರಾಯರು ಯಾರು ಎಂದರೆ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಎಂಬ ಹೆಸರು ಬರುತ್ತಿದ್ದವು. ಮಹಾರಾಷ್ಟ್ರದಲ್ಲಿ ನೀವು ಎಲ್ಲಿಯೂ ನೋಡಬೇಕಾದ ಅಗತ್ಯವಿಲ್ಲ, ಎಲ್ಲ ಕಡೆಯೂ ಅನೇಕ ಐಕಾನ್‌ಗಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಗತಕಾಲದ ಐಕಾನ್ ಆಗಿದ್ದರು. ಈಗ ಬಿಆರ್ ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇದ್ದಾರೆ" ಎಂದು ಮಹಾರಾಷ್ಟ್ರ ರಾಜ್ಯಪಾಲ ಹೇಳಿದ್ದರು.

ಪುಣೆ ಬಂದ್ ದಿನದ ಎಫೆಕ್ಟ್ ಹೇಗಿರುತ್ತೆ?:
* ದಿನಸಿ ಅಂಗಡಿಗಳು, ಬೇಕರಿಗಳು ಮತ್ತು ಹಾಲಿನ ಅಂಗಡಿಗಳಂತಹ ಅಗತ್ಯ ಸೇವೆಗಳನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಯವರೆಗೆ ತೆರೆಯಲು ಅನುಮತಿಸಲಾಗುವುದು
* ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಪಕ್ಷಗಳು ತಿಳಿಸಿವೆ.
* ಮೆಡಿಕಲ್ ಶಾಪ್‌ಗಳು ದಿನವಿಡೀ ತೆರೆದಿರುತ್ತವೆ.
* ಪೆಟ್ರೋಲ್ ಪಂಪ್‌ಗಳು ಮತ್ತು ಸಿಎನ್‌ಜಿ ಪಂಪ್‌ಗಳು ಪುಣೆಯಲ್ಲಿ ಕಾರ್ಯನಿರ್ವಹಿಸಲಿವೆ
* ನಗರದಾದ್ಯಂತ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ
* ಪುಣೆ ಪೊಲೀಸರು ನಗರದಾದ್ಯಂತ ಸುಮಾರು 100 ಹಿರಿಯ ಅಧಿಕಾರಿಗಳು, 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅನೇಕ ಕಾನ್‌ಸ್ಟೆಬಲ್‌ಗಳನ್ನು ಸಾಮಾನ್ಯ ಸಮವಸ್ತ್ರದಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.












Click it and Unblock the Notifications