ಬೆಂಗಳೂರಿನಲ್ಲಿ ಸಭೆ ಸೇರಲಿರುವ ವಿರೋಧ ಪಕ್ಷಗಳು ಹಾಗೂ ಅದರ ನಾಯಕರು
ಬೆಂಗಳೂರು, ಜುಲೈ 17: 2024ರ ಲೋಕಸಭಾ ಚುನಾವಣೆಗೆ ಕೇಂದ್ರದ ಆಡಳಿತರೂಢ ಬಿಜೆಪಿ ಪಕ್ಷವನ್ನು ಸೋಲಿಸಲು ಹಲವಾರು ವಿರೋಧ ಪಕ್ಷಗಳು ಸೋಮವಾರ ಹಾಗೂ ಮಂಗಳವಾರ (ಜುಲೈ 7,8) ಸಭೆ ಸೇರಲಿದ್ದು, ಈ ಸಭೆಗೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸುತ್ತಿರುವುದು ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಸೈದ್ದಾಂತಿಕವಾಗಿ ಹಾಗೂ ರಾಜಕೀಯವಾಗಿ ಸವಾಲೊಡ್ಡಲು ಸಮಾನ ವೇದಿಕೆಯೊಂದನ್ನು ಸೃಷ್ಟಿಸಿ ಗಟ್ಟಿಗೊಳಿಸುವ ಆಶಯದಿಂದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿ ಈ ನಾಯಕರು ಇಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಎರಡು ದಿನಗಳ ಸಭೆ ನಡೆಸಲಿದ್ದಾರೆ.

ಈ ಸಭೆಗೆ ಭಾಗವಹಿಸುವ ನಾಯಕರು ಹಾಗೂ ಅವರ ಪಕ್ಷಗಳ ಪಟ್ಟಿ ಇಂತಿದೆ.
1. ಕಾಂಗ್ರೆಸ್- ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್,
2. ಟಿಎಂಸಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒಬ್ರಯಾನ್,
3. ಸಿಪಿಐ- ಡಿ ರಾಜಾ
4. ಸಿಪಿಎಂ- ಸೀತಾರಾಮ್ ಯಚೂರಿ
5. ಎನ್‌ಸಿಪಿ- ಶರದ್ ಪವಾರ್, ಜಿತೇಂದ್ರ ಅವ್ಹಾದ್, ಸುಪ್ರಿಯಾ ಸುಳೆ,''
6. ಜೆಡಿಯು- ನಿತಿಶ್ ಕುಮಾರ್, ಲಲ್ಲನ್ ಸಿಂಗ್, ಸಂಜಯ್ ಕುಮಾರ್ ಝಾ
7. ಡಿಎಂಕೆ- ಎಂಕೆ ಸ್ಟಾಲಿನ್, ಟಿಆರ್ ಬಾಲು
8. ಎಎಪಿ- ಅರವಿಂದ ಕೇಜ್ರಿವಾಲ್,
9. ಜಿಎಂಎಂ- ಹೇಮಂತ್ ಸೊರೇನ್
10. ಶೀವಸೇನಾ (ಯುಬಿಟಿ)- ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್,
11. ಆರ್‌ಜೆಡಿ- ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್,
12. ಸಮಾಜವಾದಿ ಪಕ್ಷ- ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಜಾವೇದ್ ಅಲಿಖಾನ್, ಲಾಲ್ ಜಿ ವರ್ಮಾ, ರಾಮ್ ಅಚಲ್, ರಾಹ್ ಭರ್, ಅಶೀಷ್ ಯಾದವ್,
13. ನ್ಯಾಷನಲ್ ಕಾನ್ಪರೆನ್ಸ್- ಒಮರ್ ಅಬ್ದುಲ್ಲಾ
14. ಪಿಡಿಪಿ- ಮೆಹಬೂಬಾ ಮುಫ್ತಿ
15. ಸಿಪಿಐ(ಎಂಎಲ್)- ದೀಪಂಕರ್ ಭಟ್ಟಾಚಾರ್ಯ
16. ಆರ್‌ಎಲ್‌ಡಿ- ಜಯಂತ್ ಸಿಂಗ್ ಚೌಧರಿ
17. ಐಯುಎಂಎಲ್- ಕೆಎಂ ಖಾದರ್ ಮೊಯ್ದಿನ್, ಪಿಕೆ ಕುಂಞಲಿಕುಟ್ಟಿ
18. ಕೇರಳ ಕಾಂಗ್ರೆಸ್ (ಎಂ)- ಜೋಸ್ ಕೆ ಮಣಿ
19. ಎಂಡಿಎಂಕೆ- ವೈಕೋ, ಜಿ ರೇಣುಕಾದೇವಿ
20. ವಿಸಿಕೆ- ಟಿ ತಿರುಮಾವಳನ್, ರವಿಕುಮಾರ್
21. ಆರ್‌ಎಸ್‌ಪಿ- ಎನ್‌ಕೆ ಪ್ರೇಮಚಂದ್ರನ್
22. ಕೇರಳ ಕಾಂಗ್ರೆಸ್- ಪಿಜೆ ಜೋಸೆಫ್, ಫ್ರಾನ್ಸಿಸ್ ಜಾರ್ಜ್ ಕೆ
23. ಕೆಎಂಡಿಕೆ- ಇಆರ್ ಈಶ್ವರನ್, ಎಕೆ ಜಿನ್‌ರಾಜ್
24. ಎಐಎಫ್‌ಬಿ- ಜಿ ದೇವರಾಜನ್.

ಬೆಂಗಳೂರಿನಲ್ಲಿ ನಡೆಯುವ ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರ ಉಪಸ್ಥಿತಿಯು ವಿಶೇಷ ಮಹತ್ವ ಪಡೆದುಕೊಂಡಿದೆ. ತಮ್ಮ ಛಾಪು ಮೂಡಿಸಲು ಹವಣಿಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ಪರವಾಗಿ ನೈತಿಕ ಬೆಂಬಲವನ್ನು ಘೋಷಿಸಲು ಈ ಸಭೆ ಎಲ್ಲರಿಗೂ ಒಂದು ಕರೆಗಂಟೆಯಾಗಿದೆ ಎಂದು ಬಿಹಾರದ ಮೈತ್ರಿ ನಾಯಕರೊಬ್ಬರು ಹೇಳಿದ್ದಾರೆ.
ದೆಹಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವ ಪಕ್ಷದ ನಿರ್ಧಾರದೊಂದಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಕಾಂಗ್ರೆಸ್‌ನ ಎಚ್ಚರಿಕೆ ಆಟದಿಂದ ಕಾಂಗ್ರೆಸ್ ಮತ್ತು ಎಎಪಿ ನಡುವಿನ ಭಾಂಧವ್ಯದಿಂದ ಈಗ ಎಎಪಿ ಕೂಡ ಭಾಗವಹಿಸುತ್ತಿದೆ. ಬೆಂಗಳೂರು ಸಭೆಗೂ ಮುನ್ನ ಕಾಂಗ್ರೆಸ್ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಒಗ್ಗಟ್ಟಿನ ಪ್ರಯತ್ನಗಳನ್ನು ಬಹಿಷ್ಕರಿಸುವುದಾಗಿ ಅದು ತಿಳಿಸಿತ್ತು.












Click it and Unblock the Notifications