Operation Sindoor 2: ಭಾರತ ಬೆಂಬಲಕ್ಕೆ ನಿಂತ ಮತ್ತೊಂದು ರಾಷ್ಟ್ರ, ಪಾಕ್‌ಗೆ ಖಡಕ್ ಎಚ್ಚರಿಕೆ

India Pakistan Tensions: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಗುರುವಾರ ಮತ್ತೆ ಯುದ್ಧ ಮುಂದುವರಿದಿದೆ. Operation Sindoor 2 ಹೆಸರಿನಲ್ಲಿ ಪಾಕಿಸ್ತಾನ ನಡೆಸಿ ಕೃತ್ಯಗಳನ್ನು ಭಾರತ ತಡೆಯುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಭಾರತದ ಗಡಿಯೊಳಗೆ ಪಾಕ್ ಮಿಸೈಲ್‌ಗಳು ಬರದಂತಾಗಿದೆ. ಈಗಾಗಲೇ ಭಾರತಕ್ಕೆ ವಿವಿಧ ಬೃಹತ್ ರಾಷ್ಟ್ರಗಳು ಬೆಂಬಲ ನೀಡಿದ್ದರ ಮಧ್ಯೆ ನೇಪಾಳ ಸಹ ಭಾರತದ ಪರವಾಗಿ ನಿಂತಿದೆ. ಈ ಸಂಬಂಧ ನೇಪಾಳ ಸರ್ಕಾರ ಪತ್ರ ಬರೆದಿದೆ.

ನೇಪಾಳ ಸರ್ಕಾರದ ಪತ್ರದಲ್ಲಿ ಉಲ್ಲೇಖಿಸಿದ್ದನ್ನು ನೋಡುವುದಾದರೆ, ''ಏಪ್ರಿಲ್ 22, 2025 ರಂದು ಭಾರತದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಕೊಲ್ಲಲಾಗಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಕುರಿತು ನೇಪಾಳ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ದುರಂತದ ಸಮಯದಲ್ಲಿ, ನೇಪಾಳವು ಭಾರತದೊಂದಿಗೆ ಒಗ್ಗಟ್ಟಿನಿಂದ ಇರಲಿದೆ. ದುಃಖ ಸಂಕಟಗಳಲ್ಲಿ ಜೊತೆ ನಿಲ್ಲುವುದಾಗಿ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದ ಉಗ್ರ ಕೃತ್ಯಗಳನ್ನು ನೇಪಾಳ ಬಹಿರಂಗವಾಗಿಯೇ ಖಂಡಿಸಿದೆ.

Operation Sindoor 2 Nepal Stand With India Amid India-Pakistan Tensions War

ಯಾವುದೇ ರೀತಿಯ ಭಯೋತ್ಪಾದನೆಯು ದೇಶಕ್ಕೆ ಪೂರಕವಲ್ಲ. ಅದರ ವಿರುದ್ಧದ ದೃಢ ನಿಲುವು ನೇಪಾಳ ಸರ್ಕಾರ ಹೊಂದಿದೆ. ನೇಪಾಳವು ಅನಾಗರಿಕ ಕೃತ್ಯಗಳು, ಉಗ್ರ ದಾಳಿ ನಡೆದಾಗಲೂ ತಕ್ಷಣವೇ ಸ್ಪಂದಿಸಿದೆ. ಬಹಿರಂಗವಾಗಿ ಪಾಕ್ ಉಗ್ರರ ದಾಳಿಯನ್ನು ಖಂಡಿಸಿದೆ. ಭಯೋತ್ಪಾದನೆಯ ವಿರುದ್ಧದ ಯಾವುದೇ ದೇಶ ಹೋರಾಡಿದರೂ ಅವರೊಂದಿಗೆ ನೇಪಾಳ ಒಟ್ಟಾಗಿ ನಿಲ್ಲುತ್ತದೆ. ಕಷ್ಟು ಸುಃಖ ಹಂಚಿಕೊಳ್ಳಲದೆ. ಈ ತತ್ವಕ್ಕೆ ಬದ್ಧವಾಗಿ ನೇಪಾಳ ಇರಲಿದೆ. ನೇಪಾಳವು ಯಾವುದೇ ಶತ್ರು ಶಕ್ತಿಗಳು ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ತನ್ನ ನೆಲವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಖಡಕ್ ಆಗಿದೆ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸದ್ಯ ಭಾರತ ಪಾಕಿಸ್ತಾನ ದಾಳಿಯು ಮುಂದುವರಿದಿದೆ. ಯಾವುದೇ ಯುದ್ಧವಾದರೂ ಮನುಕುಲಕ್ಕೆ ಒಳಿತಲ್ಲ ಎಂಬ ಆಶಯದೊಂದಿಗೆ ನೇಪಾಳವು ಭಾರತ ಪಾಕಿಸ್ತಾನ ಉದ್ವಿಗ್ನತೆಯನ್ನು ಕಡಿಮೆಯಾಗಬೇಕೆಂದು ಬಯಸಿದೆ. ಭಾರತ ಹಾಗೂ ಗಡಿ ಪ್ರದೇಶಗಳಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಗೆ ತನ್ನ ಬದ್ಧತೆ ಎದುರು ನೋಡುತ್ತದೆ ಎಂದು ನೇಪಾಳ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪತ್ರದಲ್ಲಿ ತಿಳಿಸಿದೆ.

ಸದ್ಯ ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಕಾಶ್ಮೀರಗಳ ಪ್ರದೇಶಗಳಲ್ಲಿ ಗುರುವಾರ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಯನ್ನು ವಿಫಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದಕ್ಕೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ಭಾರತ ಯುದ್ಧ ಮುಂದುವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+