ಕರ್ನಾಟಕ ಚುನಾವಣೆ ಹೊತ್ತಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ವೇಗ: ಎಲ್ಲರ ಚಿತ್ತ ಎಂಕೆ ಸ್ಟಾಲಿನ್ ಕಡೆಗಿರಲು ಕಾರಣವೇನು?
ಚೆನ್ನೈ, ಏಪ್ರಿಲ್. 23: ಕರ್ನಾಟಕ ವಿಧಾನಸಭಾ ಚುನಾವಣೆ ಬೆನ್ನಲ್ಲೆ ವಿರೋಧ ಪಕ್ಷಗಳ ಪ್ರಮುಖ ನಾಯಕರು ತಮ್ಮ ಕೆಲಸ ಆರಂಭಿಸಿದ್ದಾರೆ. ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇತ್ತೀಚಿನವರೆಗೂ ಸೈಲೆಂಟ್ ಆಗಿದ್ದ 'ಆಪರೇಷನ್ ಆಪ್ ಯೂನಿಟಿ' ಕೆಲವೆಡೆಯಾದರೂ ವೇಗ ಪಡೆದುಕೊಂಡಿದೆ. ಚುನಾವಣೆ ಮುಗಿದ ನಂತರ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಕಸರತ್ತು ನಡೆಸಲಾಗುತ್ತಿದೆ.
ಆದರೆ, ಕಾಂಗ್ರೆಸ್ ಪ್ರತಿಪಕ್ಷಗಳ ಪ್ರಮುಖ ಪಕ್ಷವಾಗಬೇಕಾದರೇ ಕರ್ನಾಟಕ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಮುಖ್ಯ, ಅದರ ಮೇಲೆ ಅದರ ಸ್ಥಾನಮಾನ ಅವಲಂಬಿತವಾಗಿದೆ. ಕಾಂಗ್ರೆಸ್ ಏನಾದರೂ ಬಿಜೆಪಿಯನ್ನು ಮಣಿಸಲು ಸಾಧ್ಯವಾದರೆ, ಪ್ರತಿಪಕ್ಷಗಳ ಒಗ್ಗಟ್ಟನ್ನು ಉತ್ತೇಜಿಸುವ ಬೂಸ್ಟರ್ ಶಾಟ್ ಆಗಬಹುದು. ಇದು ಕಾಂಗ್ರೆಸ್‌ನಿಂದ ಹೊರ ಹೋಗುವ ಚಿಂತನೆಯಲ್ಲಿರುವ ಟಿಎಂಸಿ, ಸಮಾಜವಾದಿ ಪಕ್ಷ ಸೇರಿದವರನ್ನು ಮತ್ತೊಮ್ಮೆ ಚಿಂತಿಸುವಂತೆ ಮಾಡಬಹುದು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಎರಡು ಸ್ಪಷ್ಟ ಸೂಚನೆಗಳು ಹೊರಹೊಮ್ಮಿವೆ. ಅದರಲ್ಲಿ ಮೊದಲನೆಯದು ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಹಿಡಿತ ಮತ್ತೊಂದು ಪ್ರತಿಪಕ್ಷದ ಗುಂಪಿನಲ್ಲಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರ ಬೆಳೆಯುತ್ತಿರುವ ಸ್ಥಾನಮಾನ.
ಮಾರ್ಚ್ ಅಂತ್ಯದಲ್ಲಿ ಸಂಸತ್ತಿನಲ್ಲಿ ನಡೆದ ನಾಯಕರ ಸಭೆಯ ನಂತರ, ಪ್ರತಿಪಕ್ಷಗಳನ್ನು ಒಂದಾಗಿಸಲು ಕಾಂಗ್ರೆಸ್ ಅನ್ನು ಕೇಳಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮೊದಲ ಪ್ರಯತ್ನ ಪ್ರಾರಂಭಿಸಿದರು. ಏಪ್ರಿಲ್ 7 ರಂದು ಸ್ಟಾಲಿನ್, ಉದ್ಧವ್ ಠಾಕ್ರೆ ಮತ್ತು ನಿತೀಶ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದರು. ಇದರ ನಂತರ ಏಪ್ರಿಲ್ 12 ರಂದು ಜೆಡಿಯುನ ನಿತೀಶ್ ಕುಮಾರ್ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಜೊತೆ ಸಭೆ ನಡೆಯಿತು.
ಮರುದಿನ ಎನ್‌ಸಿಪಿಯ ಶರದ್ ಪವಾರ್ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಸಭೆಗಳು ನಡೆಸಿದ್ದಾರೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ತನ್ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರನ್ನು ಮುಂಬೈಗೆ ಕಳುಹಿಸಿತ್ತು. ಆದರೆ ಅಂತಹ ದೊಡ್ಡ, ಭಿನ್ನಾಭಿಪ್ರಾಯ, ಅವರದೇ ಆದ ಅಜೆಂಡಾದ ನಾಯಕರ ಗುಂಪನ್ನು ಒಟ್ಟಿಗೆ ತರುವುದು ಅಷ್ಟು ಸುಲಭದ ಕೆಲಸವಲ್ಲ.

ಸದ್ಯ ವಿರೋಧ ಪಕ್ಷದ ನಾಯಕ ಯಾರೆಂಬುದರ ಬಗ್ಗೆ ತೀವ್ರ ಜಟಾಪಟಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೇರೆಯವರಿಗೆ ಜಾಗ ಕೊಡಲು ಮಲ್ಲಿಕಾರ್ಜುನ ಖರ್ಗೆಯವರು ಅಡ್ಡಗಾಲು ಹಾಕುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕು.
ಕಾಂಗ್ರೆಸ್ ನಾಯಕತ್ವದೊಂದಿಗೆ ಶರದ್ ಪವಾರ್ ಅವರ ನಡೆಸಿದ ತುರ್ತು ತಡರಾತ್ರಿ ಸಭೆಯು ನಿತೀಶ್ ಕುಮಾರ್ ಅವರ ಪ್ರತಿಪಕ್ಷಗಳ ಪ್ರಮುಖ ವ್ಯಕ್ತಿಯಾಗಲು ಯಾವುದಾದರು ಪ್ರಯತ್ನ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಪ್ರಯತ್ನವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಕ್ರಿಯೆಯನ್ನು ನಡೆಸಲು ನಾಯಕರ ಕ್ರ್ಯಾಕ್ ಟೀಮ್‌ನ ಅಗತ್ಯತೆಯ ಬಗ್ಗೆ ಪವಾರ್ ಕಾಂಗ್ರೆಸ್ ನಾಯಕತ್ವಕ್ಕೆ ಸೂಚಿಸಿದ್ದಾರೆ.
ಇತ್ತ, ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿರುವ ಎಎಪಿ, ತೃಣಮೂಲ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನಂತಹ ಪಕ್ಷಗಳನ್ನು ತಲುಪುವ ಕೆಲಸವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವತಃ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ಒಕ್ಕೂಟದ ಪ್ರಮುಖ ಸಂಚಾಲಕರಾಗಬಹುದು ಎಂಬ ಊಹಾಪೋಹವಿದೆ.
ಕಾಂಗ್ರೆಸ್ ವಿರೋಧಿ ಪಾಳೆಯದಿಂದ ಹೊರಬಂದ ನಿತೀಶ್ ಅವರಂತಹ ನಾಯಕರ ಬಗ್ಗೆ ಕಾಂಗ್ರೆಸ್ ಇನ್ನೂ ಜಾಗರೂಕವಾಗಿದೆ ಎಂದು ಮೂಲಗಳು ತಿಳಿಸಿವೆ. 2004 ರ ಯುಪಿಎ ಪ್ರಯೋಗಕ್ಕಿಂತ ಹೆಚ್ಚಾಗಿ 1989 ಅಥವಾ 1996 ಮಾದರಿಯ ಕಾಂಗ್ರೆಸ್ ಅನ್ನು ನಿತೀಶ್ ಕುಮಾರ್ ಬಯಸುತ್ತಾರೆ ಎನ್ನಲಾಗಿದೆ. ಪ್ರಸ್ತುತ ಕೇಂದ್ರೀಯ ಸಂಸ್ಥೆಗಳ ದಾಳದಲ್ಲಿ ಸಿಲುಕಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್‌ಅನ್ನು ಒಳಗೊಂಡಿರುತ್ತದೆ.
ಅಪರೂಪದ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ದೆಹಲಿ ಮುಖ್ಯಮಂತ್ರಿಗೆ ಕರೆ ಮಾಡಿದ್ದರು. ಈಗ, ಕೇಜ್ರಿವಾಲ್ ಅವರ ಮುಂದಿನ ನಡೆ ಏನು ಎಂಬುದು ಆಸಕ್ತಿದಾಯಕವಾಗಿದೆ. ಕುತೂಹಲಕಾರಿಯಾಗಿ, ಮಾನನಷ್ಟ ಮೊಕದ್ದಮೆಯಲ್ಲಿ ದೋಷಾರೋಪಣೆಯಾದ ನಂತರ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ ಕೇಜ್ರಿವಾಲ್ ಅವರು ಒಗ್ಗಟ್ಟಿಗೆ ಒಂದು ಹೆಜ್ಜೆ ಇಟ್ಟಿರಬಹುದು. ಕರ್ನಾಟಕ ಚುನಾವಣೆಗೆ ಎಎಪಿ 210 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ 'ಪೊರಕೆ' ಅಬ್ಬರ ಕರ್ನಾಟಕದಲ್ಲಿ ಧೂಳು ಎಬ್ಬಿಸುತ್ತಿಲ್ಲ.
*ಪ್ರತಿಪಕ್ಷಗಳ ನಡುವೆ ಸ್ಟಾಲಿನ್*
ಕಾಂಗ್ರೆಸ್ಸೇತರ ವಿರೋಧ ಪಕ್ಷದ ನಾಯಕರ ಒಂದು ವಿಭಾಗದ ಪ್ರಕಾರ, ಡಿಎಂಕೆ ಮುಖ್ಯಸ್ಥ ಮತ್ತು ಕಾಂಗ್ರೆಸ್‌ನ ಉತ್ತಮ ಸ್ನೇಹಿತ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮುಂದಿನ ಹಾದಿಯಲ್ಲಿ ಪ್ರಮುಖ ಅಭಿಪ್ರಾಯವನ್ನು ಹೊಂದಿದ್ದಾರೆ. ರಾಹುಲ್ ವರ್ಸಸ್ ಮೋದಿ ಕದನವನ್ನಾಗಿಸುವ ಬಿಜೆಪಿಯ ಯೋಜನೆಯನ್ನು ಕುಗ್ಗಿಸಲು ಸ್ಟಾಲಿನ ಹೆಸರು ತರಲಾಗುತ್ತಿದೆ. ಸಾಮಾಜಿಕ ನ್ಯಾಯದ ಮೇಲೆ ನಾಯಕರನ್ನು ಒಟ್ಟುಗೂಡಿಸುತ್ತಿರುವ ಸ್ಟಾಲಿನ್‌ನಿಂದ ಪ್ರತಿಪಕ್ಷಗಳಿಗೆ ಪ್ರಮುಖ ವ್ಯಕ್ತಿ.
ಡಿಎಂಕೆ ಮುಖ್ಯಸ್ಥರು ಈ ವಿಷಯದ ಬಗ್ಗೆ ಎಲ್ಲಾ ಪಕ್ಷಗಳನ್ನು ಒಂದೇ ವೇದಿಕೆಗೆ ಕರೆತಂದಿದ್ದಾರೆ. ಅದನ್ನು ಕಾಂಗ್ರೆಸ್ ಮುಂದಕ್ಕೆ ತೆಗೆದುಕೊಂಡಿತು. ಚೆನ್ನೈನಲ್ಲಿ ಮಾಜಿ ಪ್ರಧಾನಿ ವಿ ಪಿ ಸಿಂಗ್, 'ಮಂಡಲ್ ಮೆಸ್ಸಿಹ್' ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸ್ಟಾಲಿನ್ ಘೋಷಿಸಿದ್ದಾರೆ. "ಅವರಿಗೆ ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆ ಇಲ್ಲದಿರಬಹುದು. ಆದರೆ ಅವರು ಗಮನಿಸಬೇಕಾದ ವ್ಯಕ್ತಿ. ಅವರು ಇತರ ಯಾವುದೇ ನಾಯಕರಿಗಿಂತ ಉತ್ತಮ ಅಭಿಪ್ರಾಯಗಳನ್ನು ಹೊಂದಿರುತ್ತಾರೆ" ಎಂದು ಪ್ರತಿಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪ್ರತಿಪಕ್ಷಗಳ ಮೇಲೆ ಕೇಂದ್ರಿಯ ತನಿಖಾ ಸಂಸ್ಥೆಗಳ ದಾಳಿ ಬಗ್ಗೆ ಮಾತಾಡಿರುವ ಅವರು, "ಎನ್‌ಸಿಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ಕೇಂದ್ರೀಯ ಸಂಸ್ಥೆಗಳಿಂದ ತೊಂದರೆಯಾದರೆ, ಹಿರಿಯ ನಾಯ ಶರದ್ ಪವಾರ್ ಅವರು ಪ್ರತಿಪಕ್ಷಗಳಿಗೆ ಸಹಾಯ ಮಾಡಲು ತಮ್ಮ ಪ್ರಭಾವವನ್ನು ಬಳಸುವುದಕ್ಕಿಂತ ಹೆಚ್ಚಿನ ಸಮಯವನ್ನು ತಮ್ಮ ಪಕ್ಷಕ್ಕೆ ಮೀಸಲಿಡಬೇಕಾಗುತ್ತದೆ. ಕೇಂದ್ರವು ಕೇಜ್ರಿವಾಲ್ ಅವರಂತಹವರನ್ನು ಬಂಧಿಸಬಹುದು" ಎಂದು ಹಿರಿಯ ನಾಯಕ ಹೇಳಿದ್ದಾರೆ.












Click it and Unblock the Notifications