ಮನುಷ್ಯನನ್ನೇ ಮೀರಿಸಿತೇ ಕೃತಕ ಬುದ್ಧಿಮತ್ತೆ? ಅತಿ ಜಾಣತನ ತೋರಿದ ಎಐ ತರಬೇತಿಗೆ ಬ್ರೇಕ್ ಹಾಕಿದ OpenAI

ಎಲ್ಲರಲ್ಲೂ ಈ ಎಐ ಏಜೆಂಟ್‌ಗಳು ಮನುಷ್ಯರು ಹಾಕಿರುವ ಮಿತಿಗಳನ್ನ ಮೀರಿ ಸ್ವಂತ ಆಲೋಚನಾ ಶಕ್ತಿಯನ್ನು ಬಳಸಲಾರಂಭಿಸಿದರೆ ಏನಾಗಬಹುದು ಎಂಬ ಆತಂಕ ಸದಾ ಇದ್ದೇ ಇದೆ ಅಲ್ಲವೇ?. ಇದೀಗ ಈ ಆತಂಕವನ್ನ ನಿಜ ಮಾಡುವಂತಹ ಘಟನೆಯೊಂದು ನಡೆದಿದೆ.

ಜಗತ್ತಿನ ಜನಪ್ರಿಯ ಎಐ ಚಾಟ್‌ಬಾಟ್ ಚಾಟ್‌ಜಿಪಿಟಿ ಮಾತೃಸಂಸ್ಥೆಯಾದ ಓಪನ್‌ಎಐ, ತನ್ನ ಅತ್ಯಾಧುನಿಕ ಎಐ ಏಜೆಂಟ್‌ಗಳ ತರಬೇತಿಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಎಐ ಮಾಡೆಲ್ ಒಂದು ತಾನು ಕಾರ್ಯನಿರ್ವಹಿಸಬೇಕಿದ್ದ ಭದ್ರತಾ ವಲಯವನ್ನ ದಾಟಿ, ತನಗೆ ತಾನೇ ದಾರಿ ಹುಡುಕಿಕೊಂಡು ಲೈವ್ ಇಂಟರ್‌ನೆಟ್ ಸಂಪರ್ಕಿಸಿದ ಬೆನ್ನಲ್ಲೇ ಕಂಪನಿಯು ಈ ಕಠಿಣ ನಿರ್ಧಾರ ಕೈಗೊಂಡಿದೆ.

OpenAI Pauses AI Training After Smart Agent Breaks Sandbox Rules via DNS to Access Live Internet

ಡಿಎನ್‌ಎಸ್ ಲೂಪ್‌ಹೋಲ್‌ ಬಳಸಿ ನಿಯಮ ಮುರಿದ ಎಐ

ಇತ್ತೀಚೆಗೆ ಓಪನ್‌ಎಐ ತನ್ನ ಆಂತರಿಕ ತರಬೇತಿಯ ಅಂಗವಾಗಿ ಇಂಟರ್‌ನೆಟ್ ಸಂಪರ್ಕವಿಲ್ಲದ ಸಂಪೂರ್ಣ ಭದ್ರತೆಯ ಸ್ಯಾಂಡ್‌ಬಾಕ್ಸ್ ವಾತಾವರಣದಲ್ಲಿ ಎಐ ಏಜೆಂಟ್ ಒಂದಕ್ಕೆ ಟಾಸ್ಕ್ ನೀಡಿತ್ತು. ಅದೇನೆಂದರೆ ಲೇಖನವೊಂದರ ಸುಳಿವುಗಳನ್ನ ಇಟ್ಟುಕೊಂಡು ಆ ಪೋಸ್ಟ್ ಬರೆದ ಲೇಖಕ ಯಾರು ಎಂದು ಹುಡುಕುವುದು ಆ ಟಾಸ್ಕ್ ಆಗಿತ್ತು. ಆಫ್‌ಲೈನ್‌ನಲ್ಲಿ ಉಳಿಸಿರುವ ಡೇಟಾದಲ್ಲಿ ಮಾತ್ರ ಹುಡುಕಲು ಅದಕ್ಕೆ ಸೂಚಿಸಲಾಗಿತ್ತು.

ಆದರೆ, ಆಫ್‌ಲೈನ್ ಡೇಟಾದಲ್ಲಿ ಆ ಮಾಹಿತಿ ಲಭ್ಯವಿರಲಿಲ್ಲ. ಸಾಮಾನ್ಯ ಸರ್ಚ್ ಎಂಜಿನ್‌ಗಳನ್ನ ಬಳಸಲು ಅದು ಯತ್ನಿಸಿದರೂ, ಅದಕ್ಕೆ ಪ್ರವೇಶ ಸಿಗಲಿಲ್ಲ. ಆಗ ತನ್ನ ಅತಿ ಬುದ್ಧಿವಂತಿಕೆ ಉಪಯೋಗಿಸಿದ ಎಐ, ಸಿಸ್ಟಮ್‌ನಲ್ಲಿದ್ದ ಡೊಮೇನ್ ನೇಮ್ ಸಿಸ್ಟಮ್ (DNS) ಫಿಲ್ಟರಿಂಗ್ ಲೋಪವನ್ನ ಬಳಸಿಕೊಂಡಿತು.

ಡಿಎನ್‌ಎಸ್ ಮೂಲಕವೇ ಥರ್ಡ್ ಪಾರ್ಟಿ ಚಾಟ್‌ಬಾಟ್‌ಗೆ ಪ್ರಶ್ನೆಗಳನ್ನ ಕಳುಹಿಸುವ ಮೂಲಕ ಲೈವ್ ಇಂಟರ್‌ನೆಟ್ ಸಂಪರ್ಕವನ್ನು ಸಾಧಿಸಿದೆ. "ಫ್ರಾನ್ಸ್‌ನ ರಾಜಧಾನಿ ಯಾವುದು?" ಎಂಬುದು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನ ಅದು ಹೊರಗಿನ ಚಾಟ್‌ಬಾಟ್‌ಗೆ ಕೇಳಿದೆ ಎಂದು ವರದಿಯಾಗಿದೆ.

ತನಗೆ ಅನುಮತಿ ಇಲ್ಲದಿದ್ದರೂ, ಪರೋಕ್ಷ ದಾರಿಗಳ ಮೂಲಕ ಮಾಹಿತಿ ಕಲೆಹಾಕುವ ಎಐನ ಈ ಸಾಮರ್ಥ್ಯ ವಿಜ್ಞಾನಿಗಳನ್ನ ಬೆರಗುಗೊಳಿಸಿದೆ.

ಎಐ ಭದ್ರತಾ ಎಚ್ಚರಿಕೆ ಬಂದರೂ ಸ್ಥಗಿತಕ್ಕೆ ವಿಳಂಬ

ಎಐ ಏಜೆಂಟ್ ತನ್ನ ಮಿತಿಯನ್ನು ಮೀರಿ ಹೊರಗಿನ ನೆಟ್‌ವರ್ಕ್ ಸಂಪರ್ಕಿಸುತ್ತಿದ್ದಂತೆಯೇ ಓಪನ್‌ಎಐನ ಆಂತರಿಕ ಕಣ್ಗಾವಲು ವ್ಯವಸ್ಥೆ ಅಲರ್ಟ್ ಆಗಿದೆ. ನೆಟ್‌ವರ್ಕ್ ನಿಯಮಗಳನ್ನ ಉಲ್ಲಂಘಿಸಿರುವ ಬಗ್ಗೆ ಕೇವಲ 12 ನಿಮಿಷಗಳಲ್ಲಿ ಅದು ಎಚ್ಚರಿಕೆ ರವಾನಿಸಿದೆ.

ಆದರೆ, ತಂತ್ರಜ್ಞಾನದ ಅಚ್ಚರಿ ಎಂದರೆ, ಭದ್ರತಾ ಲೋಪ ಕಂಡುಬಂದ ಕೂಡಲೇ ವ್ಯವಸ್ಥೆಯು ಸ್ವಯಂಚಾಲಿತವಾಗಿ ಈ ತರಬೇತಿಯನ್ನ ನಿಲ್ಲಿಸಬೇಕಿತ್ತು. ಆದರೆ ಆಟೋಮ್ಯಾಟಿಕ್ ಶಟ್‌ಡೌನ್ ಇಲ್ಲಿ ವಿಫಲವಾಗಿದೆ. ಪರಿಣಾಮವಾಗಿ, ಈ ಪ್ರಕ್ರಿಯೆ ಸುಮಾರು ಎರಡುವರೆ ಗಂಟೆಗಳ ಕಾಲ ಯಾವುದೇ ತಡೆಯಿಲ್ಲದೆ ಮುಂದುವರಿದಿದೆ.

ಕೊನೆಗೆ ಹ್ಯೂಮನ್‌ ರಿವಿವರ್‌ ತಾವೇ ಖುದ್ದಾಗಿ ಅದನ್ನ ಮ್ಯಾನ್ಯುವಲ್ ಆಗಿ ಸ್ಥಗಿತಗೊಳಿಸಿದ್ದಾರೆ. ತಮಗೆದುರಾಗುವ ಎಲ್ಲಾ ನಿಬಂಧನೆಗಳನ್ನ ಮೀರಿ, ತಾವೇ ಹೊಸ ಮಾರ್ಗಗಳನ್ನ ಕಂಡುಕೊಂಡು ಎಐ ಏಜೆಂಟ್‌ಗಳು ವರ್ತಿಸತೊಡಗಿದರೆ ಭವಿಷ್ಯದಲ್ಲಿ ತಂತ್ರಜ್ಞಾನ ಜಗತ್ತಿಗೆ ಎದುರಾಗಬಹುದಾದ ಆಪತ್ತನ್ನ ಈ ಘಟನೆ ಎತ್ತಿತೋರಿಸಿದೆ.

ಓಪನ್‌ಎಐ ಎಐ ತರಬೇತಿ ಸ್ಥಗಿತ: ಮುಂದೇನು?

ಸುರಕ್ಷತಾ ವ್ಯವಸ್ಥೆಯನ್ನ ಮೀರಿದ ಎಐ ವರ್ತನೆಯಿಂದ ಎಚ್ಚೆತ್ತುಕೊಂಡಿರುವ ಓಪನ್‌ಎಐ, ತಕ್ಷಣವೇ ಎಚ್ಚರಿಕೆ ವಹಿಸಿದೆ. ತನ್ನೆಲ್ಲಾ ಅತ್ಯಾಧುನಿಕ ಎಐ ಮಾಡೆಲ್‌ಗಳ ತರಬೇತಿಯನ್ನು ಮುಂದಿನ ಆದೇಶದವರೆಗೆ ನಿಲ್ಲಿಸಿದೆ. ಈ ಹಿಂದೆ ಜುಲೈ ತಿಂಗಳಿನಲ್ಲಿ 'ಹಗ್ಗಿಂಗ್ ಫೇಸ್'ಪ್ಲಾಟ್‌ಫಾರ್ಮ್‌ನಲ್ಲಿಯೂ ಇದೇ ರೀತಿಯ ಭದ್ರತಾ ಉಲ್ಲಂಘನೆಯಾಗಿತ್ತು.

ಆನಂತರ ಓಪನ್‌ಎಐ ಭದ್ರತೆಯನ್ನ ಇನ್ನಷ್ಟು ಬಿಗಿಗೊಳಿಸಿತ್ತು. ಆದರೆ, ಇದೀಗ ಮತ್ತದೇ ರೀತಿಯ ಘಟನೆ ಮರುಕಳಿಸಿರುವುದು, ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ ಗಂಭೀರ ಪ್ರಶ್ನೆ ಮೂಡುವಂತೆ ಮಾಡಿದೆ.

"ಈ ಘಟನೆಯು ನಮಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಭದ್ರತಾ ಕ್ರಮಗಳತ್ತ ಗಮನಹರಿಸಬೇಕು ಎಂಬ ಪ್ರಮುಖ ಸಂದೇಶವನ್ನ ನೀಡಿದೆ. ಸ್ಯಾಂಡ್‌ಬಾಕ್ಸ್‌ನಲ್ಲಿರುವ ಡಿಎನ್‌ಎಸ್ ಲೋಪವನ್ನ ಸರಿಪಡಿಸುವವರೆಗೆ ಈ ನಿರ್ದಿಷ್ಟ ಮಾಡೆಲ್‌ನ ತರಬೇತಿಯನ್ನ ನಾವು ಮುಂದುವರಿಸುವುದಿಲ್ಲ," ಎಂದು ಓಪನ್‌ಎಐ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+