ಮತದಾರರ ಪಟ್ಟಿಯಲ್ಲಿ 24,000 ಎನ್‌ಆರ್‌ಐಗಳಿಂದ ಹೆಸರು ನೋಂದಣಿ

Subscribe to Oneindia Kannada

ನವದೆಹಲಿ, ಆಗಸ್ಟ್ 13: ಭಾರತದಲ್ಲಿ ಮತದಾನ ಮಾಡಲು 24,000 ಅನಿವಾಸಿ ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ.

ಎನ್ನಾರೈಗಳಿಗೆ ಪರೋಕ್ಷ ಮತದಾನದ ಹಕ್ಕು ನೀಡಿದ ಮೋದಿ

ಇನ್ನೂ ಹೆಚ್ಚಿನ ಎನ್ಆರ್ ಐ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಿಶೇಷ ವೆಬ್ಸೈಟಿಗೂ ಚಾಲನೆ ನೀಡಿದ್ದು ಆನ್ಲೈನ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದೆ.

Only 24,000 overseas Indians have registered as voters

ಮತದಾರರಾಗಿ ನೋಂದಾವಣೆ ಮಾಡಿಕೊಡಲು ಸುಲಭವಾಗುವಂತೆ ವೆಬ್ಸೈಟನ್ನು ವಿನ್ಯಾಸ ಮಾಡಲಾಗಿದ್ದು, ಮೇಲಿಂದ ಮೇಲೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನೂ ವೆಬ್ಸೈಟಿನಲ್ಲಿ ನೀಡಲಾಗಿದೆ. ಈ ಮೂಲಕ ಹೆಚ್ಚಿನ ಜನರು ನೋಂದಾವಣೆ ಮಾಡಿಕೊಳ್ಳಲು ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿದೆ.

ಇಲ್ಲಿಯವರೆಗೆ ಒಟ್ಟು 24,348 ಜನರು ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 23,556 ಕೇರಳದವರಾಗಿದ್ದರೆ, 364 ಜನ ಪಂಜಾಬಿಗರು ಮತ್ತು 14 ಜನ ಗುಜಾರಾತ್ ಮೂಲದವರಾಗಿದ್ದಾರೆ.

ಭಾರತದ ಪೌರತ್ವ ಹೊಂದಿರುವ ಬೇರೆ ದೇಶದ ಪೌರರಲ್ಲದವರಿಗೆ ಭಾರತದ ಚುನಾವಣೆಗಳಲ್ಲಿ ಮತದಾನ ಮಾಡುವ ಅವಕಾಶ ಇದೆ. ಚುನಾವಣಾ ಆಯೋಗದ ವೆಬ್ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.

ಒಮ್ಮೆ ಮತದಾರರು ನೋಂದಣಿ ಮಾಡಿಕೊಂಡ ನಂತರ ಆಯಾ ಕ್ಷೇತ್ರಗಳಲ್ಲಿ ಮತದಾನ ಇದ್ದಾಗ ಪೋಸ್ಟ್ ಮೂಲಕ ಮತದಾರರನ್ನು ಚುನಾವಣಾ ಆಯೋಗ ಸಂಪರ್ಕಿಸಲಿದೆ.

B S Yeddyurappa Is Confident In winning Nanjangud

ಇನ್ನು ಎನ್ಆರ್'ಐಗಳಿಗೆ ಬದಲಿ ಮತದಾನಕ್ಕೆ ಅವಕಾಶ ಕೊಟಬೇಕು ಎಂಬ ಬೇಡಿಕೆ ಇದೆ. ಆದರೆ ಸದ್ಯಕ್ಕೆ ಸೇನೆಯ ಸಿಬ್ಬಂದಿಗಳಗೆ ಮಾತ್ರ ಈ ಅವಕಾಶ ಇದ್ದು ಮುಂದಿನ ದಿನಗಳಲ್ಲಿ ಅನಿವಾಸಿ ಭಾರತೀಯರಿಗೂ ಈ ಅವಕಾಶ ಸಿಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A little over 24,000 overseas Indians, who are entitled to cast their ballot in India, have registered themselves as voters. Now, in a bid to attract more such Indian citizens living abroad to become voters here, the Election Commission has launched a portal which allows them to register online.
Please Wait while comments are loading...