Breaking: ಗಮನಿಸಿ, 5 ದಿನ ಪಾಸ್‌ಪೋರ್ಟ್‌ಗೆ ಹೊಸ ಅಪಾಯಿಂಟ್‌ಮೆಂಟ್ ಇಲ್ಲ
ಬೆಂಗಳೂರು, ಆಗಸ್ಟ್ 29: ಪಾಸ್‌ಪೋರ್ಟ್ ಪಡೆಯಲು ಅರ್ಜಿ ಹಾಕುವ ಜನರಿಗೆ ಮಹತ್ವದ ಸುದ್ದಿಯೊಂದಿದೆ. ಆಗಸ್ಟ್ 29ರಿದ 5 ದಿನಗಳ ಕಾಲ ಹೊಸ ಪಾರ್ಟ್‌ಪೋರ್ಟ್ ಪಡೆಯಲು ಅಪಾಯಿಂಟ್‌ಮೆಂಟ್ ನೀಡಲಾಗುವುದಿಲ್ಲ. ಸರ್ವರ್ ಕೆಲಸಗಳ ಹಿನ್ನಲೆಯಲ್ಲಿ ಈಗ ನೀಡಿರುವ ಅಪಾಯಿಂಟ್‌ಗಳಲ್ಲಿಯೂ ಬದಲಾವಣೆಯನ್ನು ಮಾಡಲಾಗುತ್ತಿದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಹೊಸ ಅಪಾಯಿಂಟ್‌ಮೆಂಟ್ ಪಡೆಯುವವರು ಸೆಪ್ಟೆಂಬರ್ 2ರ ಬಳಿಕ ಪ್ರಯತ್ನಿಸಿ ಎಂದು ಕರೆ ನೀಡಲಾಗಿದೆ.
ಈ ಕುರಿತು ಪಾಸ್‌ಪೋರ್ಟ್ ಸೇವಾ ಕೇಂದ್ರ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. 29 ಆಗಸ್ಟ್ 20245ರ ಗುರುವಾರ 20:00 ಗಂಟೆಯಿಂದ, ಸೆಪ್ಟೆಂಬರ್ 2ರ ಸೋಮವಾರ 6:00 ಗಂಟೆಯ ತನಕ (ಭಾರತೀಯ ಕಾಲಮಾನ) ಆನ್‌ಲೈನ್ ಪಾಸ್‌ಪೋರ್ಟ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ. ಹಿಂದಿ ಮತ್ತು ಇಂಗ್ಲಿಶ್ ಭಾಷೆಯಲ್ಲಿ ಈ ಕುರಿತು ಪಾಸ್‌ಪೋರ್ಟ್ ವೆಬ್‌ಸೈಟ್‌ನಲ್ಲಿ ಅಲರ್ಟ್ ಮಾಹಿತಿಯನ್ನು ಹಾಕಲಾಗಿದೆ.

ನಿಗದಿತ ನಿರ್ವಹಣೆ ಕಾರ್ಯದ ಹಿನ್ನಲೆಯಲ್ಲಿ 5 ದಿನಗಳ ಕಾಲ ಆನ್‌ಲೈನ್ ಸೇವೆಗಳು ಲಭ್ಯವಿಲ್ಲ. ಆದ್ದರಿಂದ ಹೊಸ ಅಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ. ಅಲ್ಲದೇ ಈಗ ಬುಕ್ ಆಗಿರುವ ಅಪಾಯಿಂಟ್‌ಮೆಂಟ್‌ಗಳ ಸಮಯದಲ್ಲಿಯೂ ಬದಲಾವಣೆ ಮಾಡಲಾಗುತ್ತದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ವೆಬ್‌ಸೈಟ್‌ನಲ್ಲಿ ಅಲರ್ಟ್ ಮಾಹಿತಿ ಬರುತ್ತಿದೆ.
ತಾಂತ್ರಿಕ ನಿರ್ವಹಣೆ ಅವಧಿಯಲ್ಲಿ ಪಾಸ್‌ಪೋರ್ಟ್ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ. ಆಗಸ್ಟ್ 30ರಂದು ಬುಕ್ ಆಗಿರುವ ಅಪಾಯಿಂಟ್‌ಮೆಂಟ್‌ಗಳನ್ನು ಮರು ಹೊಂದಾಣಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಈ ಅವಧಿಯಲ್ಲಿ ಜನರಿಗೆ ಹಾಗೂ ಎಲ್ಲಾ ಎಂಇಎ, ಆರ್ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸೇವೆಗಳು ಲಭ್ಯವಿರುವುದಿಲ್ಲ.
ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಸರಳಗೊಳಿಸಲು ಈ ಆನ್‌ಲೈನ್ ಮೂಲಕ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಈಗ ವಾರ್ಷಿಕ ತಾಂತ್ರಿಕ ನಿರ್ವಹಣೆಯ ಕಾರಣ ಆನ್‌ಲೈನ್ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಅಪಾಯಿಂಟ್‌ಮೆಂಟ್ ಪಡೆದವರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಹೇಗಿರುತ್ತದೆ ಈ ಸೇವೆ?; ಪಾಸ್‌ಪೋರ್ಟ್ ಪಡೆಯಲು ಇಚ್ಚಿಸುವ ಜನರು ಪಾಸ್‌ಪೋರ್ಟ್ ಕಛೇರಿಯ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಾಸವಿರುವ ವಿಳಾಸ ಪುರಾವೆ, ಹುಟ್ಟಿದ ದಿನಾಂಕ ಹಾಗೂ ವಿದ್ಯಾರ್ಹತೆ ಹಾಗೂ ಇತರೆ ಮಾಹಿತಿಯನ್ನು ನಮೂದಿಸಬೇಕು. ನಂತರ ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಬೇಕು. ದಾಖಲಾತಿಗಳ ಪರಿಶೀಲನೆಗೆ ಖುದ್ದು ಪಾಸ್‌ಪೋರ್ಟ್ ಕಛೇರಿಗೆ ಹಾಜರಾಗಲು ದಿನಾಂಕವನ್ನು ಪಡೆದುಕೊಳ್ಳಬೇಕು.
ದಿನಾಂಕ ನಿಗದಿಪಡಿಸಿದ ಬಳಿಕ ವಿಳಾಸದ ಪುರಾವೆ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ತಮ್ಮ ಭಾವಚಿತ್ರದೊಂದಿಗೆ ಪಾಸ್‌ಪೋರ್ಟ್ ಕಛೇರಿಗೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹೊಸ ಅಥಾವ ನಕಲು ಪಾಸ್‌ಪೋರ್ಟ್ ಪಡೆಯಲು ತತ್ಕಾಲ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬೇಕು.












Click it and Unblock the Notifications