Online Food: ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡೋರು ತಪ್ಪದೆ ಓದಬೇಕಾದ ಸುದ್ದಿ: ರೆಸ್ಟೋರೆಂಟ್ಗೆ ಹೋಗೋದೇ ವಾಸಿ!
ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಸ್ವಿಗ್ಗಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಆನ್ಲೈನ್ (Online Food Delivery) ಆಹಾರ ಆರ್ಡರ್ ಮಾಡುವವರ ಸಂಖ್ಯೆ ದೊಡ್ಡದಿದೆ. ಇದೀಗ ಹೈದರಾಬಾದ್ನ ವ್ಯಕ್ತಿಯೊಬ್ಬರು ರೆಸ್ಟೋರೆಂಟ್ ಬಿಲ್ ಅನ್ನು ಸ್ವಿಗ್ಗಿ ಆರ್ಡರ್ನೊಂದಿಗೆ ಹೋಲಿಕೆ ಮಾಡಿದ್ದಾರೆ. ಇದರಲ್ಲಿ ಆಗಿರುವ ವ್ಯತ್ಯಾಸ ಮೊತ್ತವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಹೈದರಾಬಾದ್ನ ವ್ಯಕ್ತಿಯೊಬ್ಬ ರೆಸ್ಟೋರೆಂಟ್ ಬಿಲ್ ಅನ್ನು ಸ್ವಿಗ್ಗಿ ಆರ್ಡರ್ನೊಂದಿಗೆ ಹೋಲಿಕೆ ಮಾಡಿ ನೋಡಿದ್ದಾರೆ. ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡುವುದರಿಂದ ಆಗುವ ಹೆಚ್ಚುವರಿ ಶುಲ್ಕದ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಹೈದರಾಬಾದ್ನ ರೆಸ್ಟೋರೆಂಟ್ನಲ್ಲಿ 230 ರೂಪಾಯಿ ಬೆಲೆಗೆ ಸಿಗುವ ಊಟವು ಯಾವುದೇ ರಿಯಾಯಿತಿ ಅಥವಾ ಕೂಪನ್ ಅನ್ವಯಿಸುವ ಮೊದಲು ಸ್ವಿಗ್ಗಿಯಲ್ಲಿ 436 ರೂಪಾಯಿ ಇದೆ ಎಂದು ತೋರಿಸಿತು ಎಂದು idlebrainjeevi ಎನ್ನುವ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಪಂಚಕಟ್ಟು ಎನ್ನುವ ರೆಸ್ಟೋರೆಂಟ್ನ ದೋಸೆಯ ಮೆನುವಿನ ವಿವರಗಳನ್ನು ತೋರಿಸಿದ್ದಾರೆ. ವಿವಿಧ ಆಹಾರದ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಿರುವುದು ಈ ಹೋಲಿಕೆಯಲ್ಲಿ ಬಹಿರಂಗವಾಗಿದೆ.

Online Food: ವಿವಿಧ ಫುಡ್ ಬೆಲೆಯಲ್ಲಿ ಭಾರೀ ವ್ಯತ್ಯಾಸ
ಇನ್ನು ರೆಸ್ಟೋರೆಂಟ್ ಬಿಲ್ ಪ್ರಕಾರ, ನೆಯ್ಯಿ ಕಾರಮ್ (ತುಪ್ಪ ಮತ್ತು ಕಾರ ಮಿಶ್ರಿತ) ಈರುಳ್ಳಿ ದೋಸೆಯ ಬೆಲೆ 104 ರೂ., ಪೊಂಗಲ್ನ ಬೆಲೆ 85 ರೂ. ಮತ್ತು ಫಿಲ್ಟರ್ ಕಾಫಿಯ ಬೆಲೆ 28 ರೂ. ಆಗಿತ್ತು. ಜಿಎಸ್ಟಿ ನಂತರ ಒಟ್ಟು ಬಿಲ್ 230 ರೂಪಾಯಿ ಆಗಿತ್ತು. ಆದರೆ ಇದೇ ಫುಡ್ ಆನ್ಲೈನ್ನಲ್ಲಿ ಆರ್ಡರ್ ಮಾಡಿದರೆ 436 ರೂಪಾಯಿ ಒಟ್ಟು ಬೆಲೆ ವ್ಯತ್ಯಾಸವು 219.04 ರೂಪಾಯಿ ವ್ಯತ್ಯಾಸ ಎನ್ನುವುದು ಬಹಿರಂಗವಾಗಿದೆ. ಸ್ವಿಗ್ಗಿಯಲ್ಲಿಯೂ ಅದೇ ಹೋಲಿಕೆ ವಿಭಿನ್ನವಾಗಿ ಕಾಣುತ್ತಿತ್ತು. ಈರುಳ್ಳಿ ದೋಸೆ 149 ರೂಪಾಯಿ ಮತ್ತು ಪೊಂಗಲ್ 115 ರೂಪಾಯಿ ಎಂದು ದರ ನಮೂದಿಸಲಾಗಿತ್ತು. ಸ್ಪೆಷಲ್ ಫಿಲ್ಟರ್ ಕಾಫಿಯ ಬೆಲೆ 120 ರೂಪಾಯಿ ಯಾವುದೇ ಕೂಪನ್ ಅಥವಾ ರಿಯಾಯಿತಿ ಅನ್ವಯಿಸುವ ಮೊದಲು ಒಟ್ಟು 436 ರೂಪಾಯಿ ಎಂದು ತೋರಿಸಿತ್ತು.
Online Food: ರೆಸ್ಟೋರೆಂಟ್ ಹಾಗೂ ಆನ್ಲೈನ್ ಯಾವುದು ಬೆಸ್ಟ್
ಇನ್ನು ರೆಸ್ಟೋರೆಂಟ್ ನಲ್ಲಿ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್ನಲ್ಲಿ ಆರ್ಡರ್ ಮಾಡುವುದಕ್ಕೂ ಇರುವ ವ್ಯತ್ಯಾಸದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. 206 ರೂ.ಗಳ ವ್ಯತ್ಯಾಸ ಮೊತ್ತವು ತ್ವರಿತವಾಗಿ ಆನ್ಲೈನ್ನಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವು ಬಳಕೆದಾರರು ಹೆಚ್ಚುವರಿ ವೆಚ್ಚವು ಆನ್ಲೈನ್ ಆಹಾರ ವಿತರಣೆಯನ್ನು ಸಮರ್ಥನೆ ಮಾಡಿಕೊಳ್ಳುವುದು ಕಷ್ಟಕರವೆಂದರೆ, ಇನ್ನೂ ಕೆಲವು ನೆಟ್ಟಿಗರು ಅನುಕೂಲಕ್ಕಾಗಿ ಮತ್ತು ಒಳಗೊಂಡಿರುವ ಸೇವೆಗಾಗಿ ಶುಲ್ಕ ವಿಧಿಸುವುದು ಸಾಮಾನ್ಯ ಎಂದಿದ್ದಾರೆ.
Online Food: ವೈರಲ್ ಪೋಸ್ಟ್ ಬಗ್ಗೆ ನೆಟ್ಟಿಗರು ಹೇಳಿದ್ದೇನು ?
ಈ ವೈರಲ್ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಹಾರ ವಿತರಣಾ ಕಂಪನಿಗಳು ಲಾಭ ಗಳಿಸಬಾರದು ಮತ್ತು ರೆಸ್ಟೋರೆಂಟ್ನಂತೆಯೇ ಅದೇ ಬೆಲೆಗೆ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಬೇಕೆಂದು ನೀವು ಬಯಸುತ್ತೀರಾ? ಎಂದೂ ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಜನರು ಅನುಕೂಲಕ್ಕಾಗಿ ಖರ್ಚು ಮಾಡುತ್ತಾರೆ ಎಂದು ಹೇಳುತ್ತಾರೆ. 100 ರೂಪಾಯಿ ಹೆಚ್ಚುವರಿಯಾಗಿ ವಿಧಿಸುವುದು ಅನುಕೂಲಕ್ಕಾಗಿ ಖರ್ಚು, 200 ರೂಪಾಯಿ ಹೆಚ್ಚು ವಿಧಿಸುವುದು ಮುಕ್ತವಾಗಿ ಮಾಡುವ ದರೋಡೆ ಮತ್ತು ಅಂತಹ ವೆಚ್ಚಗಳನ್ನು ಸಮರ್ಥಿಸುವ ಜನರು ನಿಮಗೆ ಕಂಪನಿಗಳಿಗೆ ಮಾರುಕಟ್ಟೆಗೆ ಹಣ ನೀಡಲಾಗುತ್ತಿದೆಯೇ ಎಂದು ಕೆಲವು ನೆಟ್ಟಿಗರು ಈ ದುಬಾರಿ ಬೆಲೆ ವ್ಯತ್ಯಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Difference between visiting the outlet and using Swiggy! pic.twitter.com/mH4exEGu67
— idlebrain jeevi (@idlebrainjeevi) September 13, 2026


Click it and Unblock the Notifications
