ಬಾಲಕನ ಕ್ಯಾನ್ಸರ್ ನೋವು ಮರೆಸಿದ 'ತೇಜಸ್'

ಬೆಂಗಳೂರು, ಫೆ. 3: ಭಾರತದ ಅತಿ ಕಿರಿಯ ಪೈಲಟ್ ಹೃದಯದಲ್ಲಿ ತೇಜಸ್ ಯುದ್ಧ ವಿಮಾನ ಹಾರಾಡಿದೆ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಬಾಲಕನ ಚಿಕ್ಕ ಆಸೆಯನ್ನು ಪೂರೈಸಿದ ತೃಪ್ತಿ ಎಡಿಎ (ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ) ಮತ್ತು ಒನ್ ಇಂಡಿಯಾದಲ್ಲಿ ಮನೆ ಮಾಡಿದೆ.

ಭಾರತದ ಶಕ್ತಿಶಾಲಿ ಯುದ್ಧ ನೌಕೆ ತೇಜಸ್ ನ ಮಾದರಿಯೊಂದನ್ನು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಚಂದನ್ ಗೆ ಹಸ್ತಾಂತರ ಮಾಡಲಾಯಿತು. ಕಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಬಾಲಕನಿಗೆ ತೇಜಸ್ ಹೊಸ ಹುರುಪು ತುಂಬಿದೆ.[ದೇವರ ಪ್ರಾರ್ಥನೆಯಾದರೂ ಬಾಲಕನನ್ನು ಬದುಕಿಸುವುದೆ?]

india

ಇಂದಿನಿಂದ ಚಂದನ್ ಬಳಿ ತೇಜಸ್ ಯುದ್ಧ ನೌಕೆಯ ಮಾಡೆಲ್ ವೊಂದು ಇರಲಿದ್ದು ಬಾಲಕನ ಆಕಾಂಕ್ಷೆಗೆ ಸ್ಪಂದಿಸಿದವರಿಗೆ ಮೊದಲಿಗೆ ಧನ್ಯವಾದ ಸಲ್ಲಿಸಬೇಕಿದೆ. ಕಳೆದ ನಬವೆಂಬರ್ ನಲ್ಲಿ ತೇಜಸ್ ಯುದ್ಧ ನೌಕೆ ಯ ಪೈಲಟ್ಆಗಿ ಆಕಾಶದಲ್ಲಿ ಹಾರಾಡಿದ್ದ ಬಾಲಕ ಈಗ ಅದರ ಒಡೆತನವನ್ನು ಹೊಂದಿದ್ದಾನೆ.

ಬಾಲಕ ಎದುರಿಸುತ್ತಿರುವ ಮಾರಕ ಕಾಯಿಲೆ ಮತ್ತು ಸ್ಥಿತಿಯ ಬಗ್ಗೆ ಒನ್ ಇಂಡಿಯಾ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯ ನಿರ್ದೇಶಕ ಪಿ.ಎಸ್.ಸುಬ್ರಮಣಿಯನ್ ಬಾಲಕನ ಆಸೆಗೆ ಸ್ಪಂದಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.[ಸಾವನ್ನು ಧಿಕ್ಕರಿಸಿ ಹಕ್ಕಿಯಂತೆ ಹಾರಾಡಿದ ಬಾಲಕ]

ಡಿಆರ್ ಡಿಒ ಕಚೇರಿಗೆ ತೆರಳುತ್ತಿದ್ದ ವೇಳೆ ತಮ್ಮ ಮೊಬೈಲ್ ನಲ್ಲಿ ವರದಿಯನ್ನು ಗಮನಿಸಿದ ಸುಬ್ರಮಣಿಯನ್ ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ನಾನು ಎಂದಿನಂತೆ ಗೂಗಲ್ ಅಲರ್ಟ್ ಬ್ರೌಸ್ ಮಾಡುತ್ತಿದ್ದೆ. ಈ ವರದಿಯನ್ನು ಇಂಡಿಯನ್ ಏರ್ ಫೋರ್ಸ್ ಟ್ಯಾಗ್ ಮೂಲಕ ನೋಡಿದೆ. ತಕ್ಷಣ ಬಾಲಕನ ಆಸೆ ಪೂರೈಸುವ ನಿರ್ಧಾರಕ್ಕೆ ಬಂದೆ ಎಂದು ಒನ್ ಇಂಡಿಯಾದೊಂದಿಗೆ ಮಾತನಾಡಿದ ವೇಳೆ ತಿಳಿಸಿದರು.

ಕೈಗೂಡಿದ ಚಂದನ್ ಆಸೆ
ಭಾರತದ ವಾಯುಸೇನೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಒನ್ ಇಂಡಿಯಾ ನೆರವಿನಲ್ಲಿ ಚಂದನ್ ಚಿಕಿತ್ಸೆ ಪಡೆಯುತ್ತಿರುವ ಜಾಗವನ್ನು ಪತ್ತೆಮಾಡಿದರು. ನಮಲ್ಲಿ ನಿಜಕ್ಕೂ ಧನ್ಯತಾ ಭಾವ ನೆಲೆಸಿದೆ. ಬಾಲಕನ ಆಸೆಯನ್ನು ಪೂರೈಸಿದ ತೃಪ್ತಿ ನಮಗಿದೆ. ಕಳೆದ ನವೆಂಬರ್ ನಲ್ಲಿ ಬಾಲಕ ಆಕಾಶದಲ್ಲಿ ಹಾರಾಡಿದ್ದ ಎಂಬುದನ್ನು ಓದಿ ತಿಳಿದುಕೊಂಡಿದ್ದೆ. ಆತನ ಮತ್ತೊಂದು ಚಿಕ್ಕ ಆಸೆ ಪೂರೈಸಿದ್ದು ತೃಪ್ತಿ ತಂದಿದೆ ಎಂದು ಸುಬ್ರಮಣಿಯನ್ ಹೇಳಿದರು.[10 ವರ್ಷದ ಬಾಲಕ ಹೈದರಾಬಾದಿನ ಪೊಲೀಸ್ ಕಮಿಷನರ್]

ಆಂಬುಲೆನ್ಸ್ ನಲ್ಲಿಯೇ 'ತೇಜಸ್' ಹಸ್ತಾಂತರ
ನಮಗೆ ಒಂದೊಂದು ನಿಮಿಷವೂ ಅಷ್ಟೇ ಮುಖ್ಯವಾಗಿತ್ತು. ಹಾಗಾಗಿ ತೇಜಸ್ ನ ಮಾಡೆಲ್ ನ್ನು ಅತಿ ಶೀಘ್ರವಾಗಿ ಬಾಲಕನಿಗೆ ತಲುಪಿಸಲು ನಿರ್ಧಾರ ಮಾಡಿದೆವು ಎಂದು ಉದಯ್ ಫೌಂಡೇಶನ್ ನ ರಾಹುಲ್ ವರ್ಮಾ ಘಟನಾವಳಿಗಳನ್ನು ಬಿಚ್ಚಿಟ್ಟರು.

ಬಾಲಕ ಚಂದನ್ ನನ್ನು ಆತನ ತಂದೆ ಎಐಐಎಂಎಸ್ ಗೆ ಆಂಬುಲೆನ್ಸ್‌ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆಯೇ ಅವರನ್ನು ಸಂಧಿಸಿ ತೇಜಸ್ ಮಾದರಿ ಹಸ್ತಾಂತರ ಮಾಡಲಾಯಿತು ಎಂದು ವರ್ಮಾ ತಿಳಿಸಿದರು.

ನೋವಿನಲ್ಲೂ ನಗೆ ಬೀರಿದ ಬಾಲಕ
ಕಳೆದ ಆರು ದಿನಗಳಿಂದ ಆಹಾರ ತ್ಯಜಿಸಿದ್ದ ಬಾಲಕನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ತೇಜಸ್ ಮಾದರಿಯನ್ನು ನೋಡುತ್ತಲೇ ಬಾಲಕನ ಕಣ್ಣುಗಳಲ್ಲಿ ಹೊಸ ಮಿಂಚು ಕಂಡುಬಂದಿತು. ಆ ನೋವಿನಲ್ಲೂ ಆತನ ಮುಗುಳ್ನಗೆ ನಮಗೆ ಸಾರ್ಥಕತೆ ಗಳಿಸಿಕೊಟ್ಟಿತು ಎಂದು ವರ್ಮಾ ಹೇಳುತ್ತಾರೆ.

ಆಸ್ಪತ್ರೆ ತಲುಪುವವರೆಗೂ ಬಾಲಕ ತೇಜಸ್ ಮಾಡೆಲ್ ಜತೆ ತನ್ನದೇ ಆದ ಭಾಷೆಯಲ್ಲಿ ಮಾತನಾಡುತ್ತಿದ್ದ. ಉದಯ್ ಫೌಂಡೇಶನ್ ನಂಥ ಸಾವಿರಾರು ಜನ ಮಗನ ಉಳಿವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ಅದು ಮಾತ್ರ ಮಗನನ್ನು ಬದುಕಿಸಬಹುದು ಎಂದು ಚಂದನ್ ತಂದೆ ಗಿರೀಶ್ ಮಂಡಲ್ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+