Zero-Waste Future: ಶೂನ್ಯ-ತ್ಯಾಜ್ಯ ಸಾಧನೆಗೆ ತಮಿಳುನಾಡು ಸರ್ಕಾರದ ಜೊತೆ ಕೈಜೋಡಿಸಿದ ಒನ್‌ಇಂಡಿಯಾ
ಚೆನ್ನೈ: ತ್ಯಾಜ್ಯ ನಿರ್ವಹಣೆ ಆಧುನಿಕ ಕಾಲದಲ್ಲಿ ದೊಡ್ಡ ಸವಾಲಾಗಿದ್ದು, ತಮಿಳುನಾಡು ಸರ್ಕಾರ ಈ ಸವಾಲು ಸೂಕ್ತವಾಗಿ ನಿರ್ವಹಿಸಲು ಮಹತ್ವದ ಯೋಜನೆ ಜಾರಿಗೆ ತಂದಿದೆ. 'ಥೂಯಿಮೈ ಮಿಷನ್' ಮೂಲಕ ತಮಿಳುನಾಡು ಸರ್ಕಾರ ಶೂನ್ಯ-ತ್ಯಾಜ್ಯ ಸಾಧನೆ ಅಥವಾ ಝೀರೋ-ವೇಸ್ಟ್ ಸಾಧಿಸಲು ಮುಂದಾಗಿದೆ. ಈ ಮಹತ್ವದ ಯೋಜನೆಗೆ ಭಾರತದ ಪ್ರಮುಖ ಬಹುಭಾಷಾ ಡಿಜಿಟಲ್ ಸುದ್ದಿ ಮಾಧ್ಯಮವಾಗಿರುವ ಒನ್‌ಇಂಡಿಯಾ ಹೆಮ್ಮೆಯಿಂದ ಕೈಜೋಡಿಸಿದೆ. ದೇಶಾದ್ಯಂತ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿರುವ ಈ 'ಥೂಯಿಮೈ ಮಿಷನ್' ತಮಿಳುನಾಡು ರಾಜ್ಯವನ್ನು ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯ ರಾಜ್ಯವಾಗಿ ಮಾಡುವ ಮಹತ್ವದ ಗುರಿ ಇಟ್ಟುಕೊಂಡಿದೆ.
ಒನ್‌ಇಂಡಿಯಾ, ಡೈಲಿಹಂಟ್, ಫಿಲ್ಮಿಬೀಟ್ ಹಾಗೂ ಜೋಶ್ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ಲಕ್ಷ ಲಕ್ಷ ಬಳಕೆದಾರರು ಪ್ರತಿದಿನ ಸಕ್ರಿಯರಾಗಿದ್ದು, ಈಗ ಒನ್‌ಇಂಡಿಯಾ ಗ್ರೂಪ್ ತ್ಯಾಜ್ಯ-ಮುಕ್ತ ರಾಜ್ಯದ ಯೋಜನೆಗೆ ಕೈಜೋಡಿಸಿದೆ. ಈ ಯೋಜನೆಯನ್ನು ಮತ್ತಷ್ಟು ಯಶಸ್ವಿ ಮಾಡಲು ಈಗ ಒನ್‌ಇಂಡಿಯಾ ಗ್ರೂಪ್ ಕೈಜೋಡಿಸಿದ್ದು, ತಮಿಳುನಾಡಿನ ಪ್ರಜೆಗಳಲ್ಲಿ ಶಿಕ್ಷಣ ನೀಡುವ ಮೂಲಕ ಮತ್ತು ಜೀವನಶೈಲಿ ಬದಲಾವಣೆ ಅಗತ್ಯತೆಗಳನ್ನು ಮನವರಿಕೆ ಮಾಡಿಕೊಡಲಿದೆ. ಇದರ ಜೊತೆಗೆ ತ್ಯಾಜ್ಯ ವಿಭಜನೆ, ಪ್ಲಾಸ್ಟಿಕ್ ಕಡಿತದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಲು ಪ್ರಯತ್ನವನ್ನು ಮಾಡಲಿದೆ. ಅಲ್ಲದೆ ಸುಸ್ಥಿರ ಅಭ್ಯಾಸಗಳ ಪ್ರಚಾರಕ್ಕೆ ಕೂಡ ಸರ್ಕಾರದ ಜೊತೆಗೆ ಕೈಜೋಡಿಸಲಿದೆ.

ಭವಿಷ್ಯಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು
ತಮಿಳುನಾಡು ಸರ್ಕಾರದ 'ಥೂಯಿಮೈ ಮಿಷನ್'ಗೆ ಕೈಜೊಡಿಸಿರುವ ಒನ್‌ಇಂಡಿಯಾ ಗ್ರೂಪ್, ಜಾಗೃತಿ ಮೂಡಿಸುವ ಬಗ್ಗೆ ಮಾತ್ರವಲ್ಲದೆ ಅದರನ್ನು ಜಾರಿಗೆ ತರಲು ಅಗತ್ಯವಿರುವ ಕ್ರಮಗಳನ್ನು ಜನಕ್ಕೆ ತಿಳಿಸಲು ಪ್ರಯತ್ನಿಸಲಿದೆ. ಒನ್ಇಂಡಿಯಾ ತನ್ನ ಡಿಜಿಟಲ್ ಪರಿಸರ ವ್ಯವಸ್ಥೆ ಬಳಸಿಕೊಂಡು ನಾಗರಿಕರನ್ನು ಅರ್ಥಪೂರ್ಣ ಸಂಭಾಷಣೆ ಹಾಗೂ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲಾ ರೀತಿ ಯೋಜನೆ ರೂಪಿಸಿದೆ. ಈ ಮಹತ್ವದ ಹಾಗೂ ಭವಿಷ್ಯದ ಯೋಜನೆಯಲ್ಲಿ ಪ್ರಜೆಗಳು ಭಾಗವಹಿಸಿ, ಯಶಸ್ವಿಗೊಳಿಸಲು ಬೆಂಬಲವಾಗಿ ನಿಲ್ಲಲಿದೆ.
ಹಾಗೂ ಕಾರ್ಪೊರೇಟ್ ಭಾರತವನ್ನ ಒಂದುಗೂಡಿಸಿ ಈ ಯೋಜನೆಯು ಇನ್ನಷ್ಟು ಯಶಸ್ವಿ ಆಗಲು ಬಲ ತುಂಬಲಿದೆ. ಕಾರ್ಪೊರೇಟ್ ನೇತೃತ್ವದ ತ್ಯಾಜ್ಯ ನಿರ್ವಹಣಾ ವೇದಿಕೆಗಳಿಂದ ಹಿಡಿದು ನಗರ-ನಿರ್ದಿಷ್ಟ ಸುಸ್ಥಿರತೆಯ ಅಗತ್ಯ ಕ್ರಮಗಳ ತನಕವೂ ಈ ಯೋಜನೆಯ ಭಾಗವಾಗಲಿದೆ. ಈ ಮೂಲಕ ತಮಿಳುನಾಡು ರಾಜ್ಯವನ್ನು ಪರಿಸರ ಜವಾಬ್ದಾರಿಯ ವಿಚಾರ ವೇದಿಕೆಯಲ್ಲಿ ಮಾದರಿ ರಾಜ್ಯವಾಗಿ ಪರಿವರ್ತಿಸಲು ಸರ್ಕಾರದ ಜೊತೆಗೆ ನಿಲ್ಲಲಿದೆ ಒನ್‌ಇಂಡಿಯಾ ಗ್ರೂಪ್.

ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ
ಜೂನ್ 5, 2025 'ಥೂಯಿಮೈ ಮಿಷನ್' ಶುರುವಾಗಿದ್ದು, ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಯೋಜನೆಯ ಯಶಸ್ಸಿಗಾಗಿ ಮೊದಲನೇ ಹಂತದಲ್ಲಿ 85,000 ಸರ್ಕಾರಿ ಕಚೇರಿಗಳಲ್ಲಿ ಪ್ರಭಾವಶಾಲಿ ರೀತಿಯಲ್ಲಿ ತರಬೇತಿ ನೀಡಲಾಯಿತು. ಹಾಗೂ ಇದರ ಜೊತೆಗೆ ಜನಪ್ರಿಯ ನಟ ಯೋಗಿ ಬಾಬು ನಟಿಸಿರುವ, "ಇದು ಕುಪ್ಪಾ ಮ್ಯಾಟರ್ ಇಲ್ಲಾ!" ಮತ್ತು "ಕೊಟ್ಟುನ ವಾಲಿಕುಮಾ" ಎಂಬ ಎರಡು ಅದ್ಭುತವಾದ ಡಿಜಿಟಲ್ ಚಲನಚಿತ್ರಗಳ ಬಿಡುಗಡೆ ಕೂಡ ನಡೆಯಿತು. ತ್ಯಾಜ್ಯ ವಿಂಗಡಣೆಯಂತಹ ಸರಳ ಆದರೆ ಶಕ್ತಿಯುತ ಜೀವನಶೈಲಿ ಬದಲಾವಣೆಗಳ ಮೇಲೆ ಕೇಂದ್ರೀಕರಿಸುವ ಈ ಚಲನಚಿತ್ರಗಳು, ಈಗಾಗಲೇ ಒನ್ಇಂಡಿಯಾ, ಡೈಲಿಹಂಟ್ & ಫಿಲ್ಮಿಬೀಟ್ ಡಿಜಿಟಲ್ ವೇದಿಕೆಯಲ್ಲಿ ವ್ಯಾಪಕವಾಗಿ ಪ್ರದರ್ಶನ ಗೊಂಡಿದ್ದು, ರಾಜ್ಯಾದ್ಯಂತ ಲಕ್ಷ ಲಕ್ಷ ಪ್ರಜೆಗಳನ್ನ ತೊಡಗಿಸಿಕೊಳ್ಳಲು ಸಹಕರಿಸುವಂತೆ ಮಾಡಿದೆ.












Click it and Unblock the Notifications