ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಬಾಲಕನ ಕುಟುಂಬ

By ಡಾ. ಅನಂತ್ ಕೃಷ್ಣನ್ ಎಂ
|
Google Oneindia Kannada News

ಬೆಂಗಳೂರು, ಫೆ. 4 : ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನಾಚರಣೆ. ಅತ್ತ ದೆಹಲಿಯ ಆಸ್ಪತ್ರೆಯೊಂದರಲ್ಲಿ ದೇಶದ ಕಿರಿಯ ಪೈಲಟ್ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತ ಮಲಗಿದ್ದಾನೆ. ಕ್ಯಾನ್ಸರ್ ದಿನ ಸಾರ್ಥಕ ಕಾಣಲು ಸಹೃದಯಿಗಳು ಚಂದನ್ ನೆರವಿಗೆ ಧಾವಿಸಬೇಕಾಗಿದೆ.

ಬಿಹಾರದ ಬಾಲಕ ಚಂದನ್ ದೆಹಲಿಯ ಎಐಐಎಂಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉದಯ್ ಫೌಂಡೇಷನ್ ನೆರವಿನ ಹಸ್ತ ಚಾಚಿದ್ದರೂ ಕುಟುಂಬ ಹಣಕಾಸು ಸಮಸ್ಯೆ ಎದುರಿಸುತ್ತಿದೆ.[ದೇವರ ಪ್ರಾರ್ಥನೆಯಾದರೂ ಬಾಲಕನನ್ನು ಬದುಕಿಸುವುದೆ?]

chandan

ಚಿಕಿತ್ಸೆಗೆ ಹಣ ಬೇಕು
ಈ ಬಗ್ಗೆ ಒನ್ ಇಂಡಿಯಾದೊಂದಿಗೆ ಮಾತನಾಡಿದ ಚಂದನ್ ತಂದೆ ಗಿರೀಶ್ ಮಂಡಲ್, ಯಾವ ಬಗೆಯ ಹಣಕಾಸು ನೆರವು ಸಿಕ್ಕರೂ ಸಂತೋಷವೇ. ನಮ್ಮ ಉಳಿತಾಯವನ್ನು ಚಂದನ್ ಚಿಕಿತ್ಸೆಗೆ ವ್ಯಯ ಮಾಡಿದ್ದೇವೆ. ಚಿಕಿತ್ಸೆಗಾಗಿ ದೆಹಲಿಗೆ ಬಂದಿರುವುದರಿಂದ ಬಿಹಾರದಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟು ನಿಂತು ಹೋಗಿದೆ. ಉದಯ್ ಫೌಂಡೇಶನ್ ಸಾಕಷ್ಟು ನೆರವು ನೀಡುತ್ತಿರುವುದನ್ನು ಸ್ಮರಿಸುತ್ತೇನೆ ಎಂದು ವಾಸ್ತವ ಬಿಚ್ಚಿಟ್ಟರು.

ವೈದ್ಯರು ತಮ್ಮ ಎಲ್ಲ ಪ್ರಯತ್ನಗಳನ್ನು ಮಾಡಿ ಮುಗಿಸಿದ್ದಾರೆ. ಪ್ರಾರ್ಥನೆಯೊಂದೇ ನಮ್ಮ ಮುಂದಿರುವ ದಾರಿ ಎಂಬುದು ಗೊತ್ತಿದೆ. ಎಳೆಯ ಜೀವದ ಒಂದು ಕಣ್ಣು ಈಗಾಗಲೇ ಶಕ್ತಿ ಕಳೆದುಕೊಂಡಿದ್ದು ಬಾಲಕ ಮಾತನಾಡುವುದನ್ನು ನಿಲ್ಲಿಸಿದ್ದಾನೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹ ಬಾಲಕನ ಉಳಿವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಬಾಲಕನ ತಂದೆ ನೋವಿನಿಂದ ನುಡಿದರು.[ಬಾಲಕನ ಕ್ಯಾನ್ಸರ್ ನೋವು ಮರೆಸಿದ 'ತೇಜಸ್']

chandan 2

ಕಲಾಂ ಎದೆ ಕಲುಕಿದ ಚಂದನ್ ಕಥೆ
ಬಾಲಕ ಚಂದನ್ ಕಥೆ ಓದಿದ ಅಬ್ದುಲ್ ಕಲಾಂ, ಆತನ ಆರೋಗ್ಯ ಸುಧಾರಿಸಲು ಎಲ್ಲರೂ ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದಾರೆ. ಒನ್ ಇಂಡಿಯಾದ ವರದಿ ಓದಿದ ಕಲಾಂ ಬಾಲಕ ಶೀಘ್ರ ಗುಣಮುಖವಾಗಲಿ ಎಂದು ಕೇಳಿಕೊಂಡಿದ್ದಾರೆ.
ಕೇವಲ ಪ್ರಾರ್ಥನೆ ಸಾಕಾಗಲ್ಲ
ಬಾಲಕನ ಉಳಿವಿಗೆ ಪ್ರಾರ್ತನೆಯೊಂದೆ ಸಾಕಾಗಲ್ಲ. ಕುಟುಂಬಕ್ಕೆ ಹಣಕಾಸು ನೆರವು ನೀಡುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ನೀವು ನೀಡುವ ಹಣ ನೇರವಾಗಿ ಬಾಲಕನ ಜೀವ ಉಳಿಸಲು ನೆರವಾಗುತ್ತದೆ.



ಬಾಲಕನ ಬ್ಯಾಂಕ್ ಖಾತೆ ವಿವರಗಳು
Master Chandan Kumar
Account No. 600510110003936 (Savings Account),
Bank of India, Hauz Khas Branch,
A-21, Green Park Main, New Delhi,
PIN: 110 016 IFSC Code: BKID0006005 (Please note: It's BKI (I for India) D0006005).
Bank phone numbers: 011 28866060/26563713

English summary
Chandan, the 14-year-old ‘young fighter' and die hard devotee of Indian Air Force (IAF) who is waging a valiant battle against an acute stage of cancer is in need of your help. Coincidentally, the appeal for help comes on a day when February 4 is being observed as World Cancer Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X