Hair Transplant: ಕೂದಲು ಕಸಿ ಚಿಕಿತ್ಸೆಗೆ ಟರ್ಕಿಗಿಂತ ಭಾರತವೇ ಬೆಸ್ಟ್ ಆಯ್ಕೆ, ಹೇಗೆ ಅಂತಿರಾ ಇಲ್ನೋಡಿ
ನವದೆಹಲಿ: ಭಾರತ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಗಂಭೀರ ಸ್ವರೂಪ ಪಡೆದುಕೊಂಡಿದೆ. ಎಲ್ಲ ವಯಸ್ಕರಲ್ಲೂ ಸರ್ವೇ ಸಾಮಾನ್ಯ ಎಂಬಂತಾಗಿದೆ. 2023ರಲ್ಲಿ ನಡೆದ ಅಧ್ಯಯನದ ಪ್ರಕಾರ, ಶೇಕಡಾ 50 ರಷ್ಟು ಭಾರತೀಯ ಪುರುಷರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂದಲು ಕಸಿ (Hair Transplant) ಚಿಕಿತ್ಸೆಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಭಾರತವು ಟರ್ಕಿಗೆ ಪೈಪೋಟಿ ಒಡ್ಡಿ ವೇಗವಾಗಿ ಬೆಳೆಯುತ್ತಿದೆ.
ಟರ್ಕಿ ದೇಶವು ಒಂದು ಕಾಲದಲ್ಲಿ ಕೂದಲು ಕಸಿಗೆ ಜಗತ್ತಿನ ಪ್ರಮುಖ ತಾಣವಾಗಿತ್ತು. ಪ್ರಸ್ತುತದಲ್ಲಿ ಭಾರತದಿಂದ ಈ ಕೂದಲು ಕಸಿ ಚಿಕಿತ್ಸೆಯಲ್ಲಿ ಟರ್ಕಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ಕೂದಲು ಕಸಿ ಚಿಕಿತ್ಸೆಗೆ ನೆಚ್ಚಿನ ತಾಣವಾಗಿ ಹೊರ ಹೊಮ್ಮುತ್ತಿದೆ. ಇದಕ್ಕೆ ಹಲವು ಕಾರಣಗಳಲ್ಲಿ ಸೂಕ್ತ ಆಧುನಿಕ ತಂತ್ರಜ್ಞಾನ ಮತ್ತು ಹೆಚ್ಚುವರಿ ವೈದ್ಯಕೀಯ ಪರಿಣಿತಿಯು ಪ್ರಮುಖ ಕಾರಣ ಎನ್ನಲಾಗಿದೆ.

ಟರ್ಕಿಯಲ್ಲಿ ಬಳಸಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳಾದ FUE, DHI ಮತ್ತು ಸಫೈರ್ FUE (Sapphire FUE) ಈಗ ಭಾರತದಲ್ಲಿಯೂ ವ್ಯಾಪಕವಾಗಿ ಲಭ್ಯವಾಗಿವೆ. ಕರ್ನಾಟಕದ ಬೆಂಗಳೂರು, ರಾಜಧಾನಿ ದೆಹಲಿ, ಮುಂಬೈ ಮತ್ತು ಚೆನ್ನೈ ನಂತಹ ಪ್ರಮುಖ ಮಹಾನಗರಗಳಲ್ಲಿ ಈ ತಂತ್ರಜ್ಞಾನ ಆಧಾರಿತ ಚಿಕಿತ್ಸೆಗೆ ನೀಡಲಾಗುತ್ತಿದ್ದು, ಬೇಡಿಕೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಭಾರತದಲ್ಲಿ ನುರಿತ ಚರ್ಮರೋಗ ತಜ್ಞರು ಮತ್ತು ಪ್ಲಾಸ್ಟಿಕ್ ಸರ್ಜನ್‌ಗಳ ದೊಡ್ಡ ಸಂಖ್ಯೆ ಇರುವುದು ಕೂದಲು ಸಮಸ್ಯೆಗಳ ವ್ಯಕ್ತಿಗಳಿಗೆ ಹಾಗೂ ಕೂದಲು ಕಸಿ ಚಿಕಿತ್ಸೆ ಪಡೆಯುವವರಲ್ಲಿ ಭರವಸೆ ಮೂಡಿಸಿದೆ.
ಕಟ್ಟುನಿಟ್ಟಿನ ಕ್ರಮ ಮತ್ತು ಸುರಕ್ಷತಾ ಭರವಸೆ
ಭಾರತದಲ್ಲಿ ಕೇಂದ್ರ ಸರ್ಕಾರವು ಈ ಕೂದಲು ಕಸಿಯನ್ನು ಕೇವಲ ಸೌಂದರ್ಯವರ್ಧಕ ಚಿಕಿತ್ಸೆ ಎಂದು ಪರಿಗಣಿಸಿಲ್ಲ. ಬದಲಾಗಿ ಅದನ್ನು ಇತರ ಶಸ್ತ್ರ ಚಿಕಿತ್ಸೆಗಳಂತೆ ಪ್ರಮುಖ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಾಗಿ ವರ್ಗೀಕರಿಸಲು ಮುಂದಾಗಿದೆ. ಹೀಗಾಗಿಯೇ ಅರ್ಹ ವೈದ್ಯರು ಮಾತ್ರ ಈ ಚಿಕಿತ್ಸೆ ನೀಡಲು ಅವಕಾಶ ಸಿಗುತ್ತಿದೆ. ಈ ಕ್ರಮ ರೋಗಿಗಳ ಸುರಕ್ಷತೆ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಟರ್ಕಿ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೂದಲು ಕಸಿಯ ವೆಚ್ಚ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಭಾರತದಲ್ಲಿ ಈ ಚಿಕಿತ್ಸೆಗೆ ಒಳಗಾಗುವುದರಿಂದ ಟರ್ಕಿ ಅಥವಾ ಮೊದಲಾದ ದೇಶಕ್ಕೆ ತೆರಳುವ ಅಂತಾರಾಷ್ಟ್ರೀಯ ಪ್ರಯಾಣ, ವೀಸಾ ಹಾಗೂ ವಸತಿ ವೆಚ್ಚಗಳಿಗೆ ವ್ಯಯಿಸುವ ಹಣ ಉಳಿತಾಯವಾಗುತ್ತದೆ. ಇತ್ತೀಚೆಗೆ ಕೂದಲು ಕಸಿ ಮೇಲಿನ ಜಿಎಸ್‌ಟಿ (GST) ದರವನ್ನು ಶೇ. 18 ರಿಂದ ಶೇಕಡಾ 5ಕ್ಕೆ ಇಳಿಕೆ ಮಾಡಿರುವುದು ರೋಗಿಗಳಿಗೆ ದೊಡ್ಡ ರಿಲೀಫ್ ಕೊಟ್ಟಂತಾಗಿದೆ.
ಇನ್ನೂ ನೀವು ವಿದೇಶದಲ್ಲಿ ಚಿಕಿತ್ಸೆ ಪಡೆದರೆ ಮರಳಿ ನಿರಂತರ ಫಾಲೋ-ಅಪ್ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತದೆ. ಅದಕ್ಕಾಗಿ ಮರಳಿ ನೀವು ಅಲ್ಲಿಗೆ ತೆರಳಬೇಕಾಗುತ್ತದೆ. ಆದರೆ ಭಾರತದಲ್ಲಿ ಕೂದಲು ಕಸಿ ಮಾಡಿಕೊಂಡರೆ, ಯಾವುದೇ ಅಡ್ಡ ಪರಿಣಾಮಗಳು ಅಥವಾ ಗೊಂದಲಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮುಂದಿನ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಈ ಅಂಶವೂ ರೋಗಿಗಳನ್ನು ಭಾರತದತ್ತ ಆಕರ್ಷಿಸುತ್ತಿದೆ.
ವಿಶ್ವಾಸಾರ್ಹತೆ ಮತ್ತು ಜಾಗತಿಕ ನಂಬಿಕೆ
ಹೃದಯ ಚಿಕಿತ್ಸೆ, ಅಂಗಾಂಗ ಕಸಿ ಸೇರಿ ಇತರ ಚಿಕಿತ್ಸೆ ವಿಷಯದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ನಂಬಿಕೆ ಮತ್ತು ಹೆಸರು ಗಳಿಸಿದೆ. ಇದೇ ವಿಶ್ವಾಸಾರ್ಹತೆ ಇದೀಗ ಕೂದಲು ಕಸಿ ಕ್ಷೇತ್ರದಲ್ಲಿ ಕಂಡು ಬರುತ್ತಿದೆ. ಭಾರತದಲ್ಲಿ ವಿಶ್ವದರ್ಜೆಯ ಆಸ್ಪತ್ರೆಗಳು, ಅನುಭವಿ ವೈದ್ಯರು ಹಾಗೂ ಉತ್ತಮ ಸಂವಹನ ವ್ಯವಸ್ಥೆ ವಿದೇಶಿ ರೋಗಿಗಳನ್ನೂ ಭಾರತದತ್ತ ಸೆಳೆಯುತ್ತಿದೆ. ಕೂದಲು ಕಸಿ ಉದ್ಯಮವು ಒಂದು ಕಾಲದಲ್ಲಿ ಅದರ ನಿಯಮಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಆ ಬಗ್ಗೆ ಜಾಗೃತಿ, ಉತ್ತಮ ನಿಯಂತ್ರಣ ಮತ್ತು ರೋಗಿಗಳ ಸುರಕ್ಷತೆಯ ಮೇಲೆ ಗಮನ ಹರಿಸುವುದರಲ್ಲಿ ಭಾರತ ಮುಂದಿದೆ. ಇದು ರೋಗಿಗಳಿಗೆ ಹೆಚ್ಚು ಇಷ್ಟವಾಗುತ್ತಿದೆ.
ಕೊನೆಯದಾಗಿ ಟರ್ಕಿ ದೇಶ ಒಂದು ಕಾಲದಲ್ಲಿ ಕೂದಲು ಕಸಿಗೆ ಜನಪ್ರಿಯವಾಗಿತ್ತು. ಇಂದು ಭಾರತ ತಂತ್ರಜ್ಞಾನ, ವೈದ್ಯಕೀಯ ಪರಿಣತಿ ಮತ್ತು ಸುರಕ್ಷತೆಯ ಸಂಯೋಜನೆಯೊಂದಿಗೆ ಕೂಡಲು ಕಸಿಯಲ್ಲಿ ಹೊಸ ಮಾನದಂಡ ಸ್ಥಾಪಿಸಿದೆ, ಟಿರ್ಕಿಗೆ ಸೆಡ್ಡು ಹೊಡೆಯುತ್ತಿದೆ. ಕೇವಲ ಅಗ್ಗದ ಬೆಲೆಗಿಂತಲೂ ಉತ್ತಮ ಗುಣಮಟ್ಟ ಮತ್ತು ದೀರ್ಘಕಾಲದ ಭರವಸೆಯ ಚಿಕಿತ್ಸೆ ಬಯಸುವವರು ಈಗ ಭಾರತವನ್ನೇ ಮೊದಲ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ ಎಂಬುದು ವಾಸ್ತವ ಸತ್ಯವಾಗಿದೆ.
-
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral












Click it and Unblock the Notifications