Odisha Train: ರಾಯಘಡ ಬಳಿ ಮತ್ತೊಂದು ಅವಘಡ, ತಪ್ಪಿದ 4 ಬೋಗಿಗಳು

ಭುವನೇಶ್ವರ್, ಜೂನ್ 18: ಒಡಿಶಾದ ಬಾಲಾಸೂರ್ ಬಳಿ ಮಹಾ ರೈಲು ದುರಂತದ ಬಳಿಕ ಆ ರಾಜ್ಯದ ಯಾವ ಭಾಗದಲ್ಲಾದರೂ ರೈಲ್ವೆ ವಿಚಾರದ ಸುದ್ದಿಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಒಡಿಶಾದಲ್ಲಿ ಇತ್ತಿಚೆಗೆ ಗ್ಯಾಸ್ ತುಂಬಿದ್ದ ರೈಲು ಹಳಿ ತಪ್ಪಿದ ಬೆನ್ನಲ್ಲೆ ಇದೀಗ ಮತ್ತೊಂದು ಗೂಡ್ಸ್ ರೈಲಿನ ನಾಲ್ಕು ಬೋಗಿಗಳು (ವ್ಯಾಗನ್- ಬಂಡಿ) ತಪ್ಪಿದ ಘಟನೆ ಶನಿವಾರ ನಡೆದಿದೆ.

ಒಡಿಶಾ ರಾಜ್ಯದ ರಾಯಗಡ ಜಿಲ್ಲೆಯ ಅಂಬೋದಲ ಯಾರ್ಡ್‌ನಲ್ಲಿರುವ ವೇದಾಂತ ಲಿಮಿಟೆಡ್‌ನ ಸ್ಥಾವರಕ್ಕೆ ಶನಿವಾರ ಗೂಡ್ಸ್‌ ರೈಲೊಂದು ತೆಳುತ್ತಿತ್ತು. ಈ ವೇಳೆ ಆ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದು, ರೈಲಿನ ಚಾಲನೆಗೆ ಬ್ರೇಕ್ ಬಿದ್ದಿದೆ. ಘಟನೆಯ ಬಗ್ಗೆ ಪೂರ್ವ ಕರಾವಳಿ ರೈಲ್ವೆ ವಿಭಾಗದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

One More Goods Trains 04 Wagons Derails In Rayagada At Odisha On Saturday

ಈ ಗೂಡ್ಸ್ ರೈಲು ಒಡಿಶಾದ ರಾಯಗಡ ಸಮೀಪದ ಅಂಬಾಡೋಲಾದಿಂದ ವಿಶೇಷ ಮಾರ್ಗದಲ್ಲಿ ವೇದಾಂತ ಲಿಮಿಟೆಡ್‌ ಸ್ಥಾವರಕ್ಕೆ ತೆರಳುತ್ತಿತ್ತು. ಈ ವೇಳೆ ಅವಘಡ ನಡೆದಿದೆ.

ಜೂನ್ 02 ರಂದು ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲು ಅಪಘಾತ ಜರುಗಿತ್ತು. ಅಂದು ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರೆ, 291 ಜನರು ಸಾವನ್ನಪ್ಪಿದ್ದರು. ಅದರ ಬೆನ್ನಲೆ ಈ ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿದ್ದು ಸುದ್ದಿಯಾಗಿದೆ.

ತ್ರಿವಳಿ ರೈಲು ದುರಂತ

ಜೂನ್ 2 ರಂದು ನಡೆದ ಈ ದುರಂತ ಘಟನೆಯಲ್ಲಿ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಬಾಲಾಸೂರ್ ಬಳಿ ಲೂಪ್‌ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಡಿಕ್ಕಿ ಹೊಡೆದಿತ್ತು. ಇದಕ್ಕೆ ಸಿಗ್ನಲ್ ಪ್ರದರ್ಶನದಲ್ಲಿ ಉಂಟಾದ ಲೋಪದೋಷ ಎಂದು ಪ್ರಥಾಮಿಕ ತನಿಖೆಯಿಂದ ತಿಳಿದು ಬಂದಿತ್ತು.

One More Goods Trains 04 Wagons Derails In Rayagada At Odisha On Saturday

ಇದೇ ವೇಳೆ ಬೆಂಗಳೂರಿನ ಯಶವಂತಪುರದಿಂದ ಹೌರಾಗೆ ತೆರಳುತ್ತಿದ್ದ ಶಾಲಿಮಾರ್ ಎಕ್ಸ್‌ಪ್ರೆಸ್ ಕೋರಮಂಡಲ್ ಡಿಕ್ಕಿ ಹೊಡೆದ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಈ ಮೂಲಕ ದೇಶವೇ ಕಂಡು ಕೇಳರಿಯದ ಮಹಾ ರೈಲು ದುರಂತವೊಂದು ಬಳಿಕ ನಡೆದು ಹೋಗಿತ್ತು.

ಕೇಂದ್ರೆ ರೈಲ್ವೆ ಸಚಿವರಿಂದ ಜೂನ್ 21ಕ್ಕೆ ಬಾಲಾಸೂರ್‌ಗೆ ಭೇಟಿ

ಘಟನೆ ಕುರಿತು ತಿಳಿಯುತ್ತಿದ್ದಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ನೇತೃತ್ವದ ತಂಡ ಪರಿಹಾರ ಕಾರ್ಯಾಚರಣೆ ನಡೆಸಿದರು. ಸಚಿವರು ಮತ್ತೆ ಜೂನ್ 21ಕ್ಕೆ ಒಡಿಶಾದ ಬಾಲಸೋರ್‌ಗೆ ಭೇಟಿ ನೀಡಲಿದ್ದು, ರೈಲು ಅಪಘಾತದ ಕಠಿಣ ಸಮಯದಲ್ಲಿ ರಕ್ಷಣೆಗೆ ಬಂದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭೇಟಿ ಮಾಡಿ ಅಭಿನಂದಿಸಲಿದ್ದಾರೆ.

ಕೇಂದ್ರ ರೈಲ್ವೆ ಸಚಿವರು ಈ ಪ್ರದೇಶದ ಸಾರ್ವಜನಿಕ ಆಡಳಿತ ಇಲಾಖೆ ಭೇಟಿ ಮಾಡಿ ಪ್ರಶಂಸಿಲಿದ್ದಾರೆ. ದುರಂತದ ವೇಳೆ ಉದಾರವಾಗಿ ನೆರವು ನೀಡಿದ ಸ್ಥಳೀಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಒಡಿಶಾ ರೈಲಿನ ಸಂಖ್ಯೆ ಬಾಲಸೋರ್‌ನಲ್ಲಿ ಮೂರು ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 291ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+