ಹೆಣ್ಣು ಮಗುವಿನ ಅಸಾಧಾರಣ ಸಾಧನೆ ಗುರುತಿಸೋಣ : ಮೋದಿ

Posted By:
Subscribe to Oneindia Kannada

ನವದೆಹಲಿ , ಜನವರಿ 24: ದೇಶದಲ್ಲಿ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆಯಂಥ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪ ಕೈಗೊಳ್ಳೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಸಂದರ್ಭದಲ್ಲಿ ಇಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ನಾವು ಹೆಮ್ಮೆ ಪಡುವಂತೆ ಮಾಡಿದ ಹೆಣ್ಣು ಮಗುವಿನ ಅಸಾಧಾರಣ ಸಾಧನೆಯನ್ನು ಸಂಭ್ರಮಿಸುವ ಆಚರಣೆಯ ದಿನವಾಗಿದೆ.

On National Girl Child Day, PM salutes achievements of girls

ಹೆಣ್ಣು ಮಗುವಿನ ವಿರುದ್ಧ ತಾರತಮ್ಯವನ್ನು ಕಡ್ಡಾಯವಾಗಿ ತಿರಸ್ಕರಿಸಿ ಮತ್ತು ಹೆಣ್ಣು ಮಗುವಿಗೆ ಸಮಾನ ಅವಕಾಶ ಖಾತ್ರಿ ಪಡಿಸಬೇಕಾಗಿದೆ. ಪದೇ ಪದೇ ಎದುರಾಗುವ ಲಿಂಗಾಧಾರಿತವಾದ ಸವಾಲುಗಳ ವಿರುದ್ಧ ಹೋರಾಟ ಮತ್ತು ಲಿಂಗ ಸಮಾನತೆ ಮತ್ತು ಲಿಂಗ ಸೂಕ್ಷ್ಮತೆಯನ್ನು ಉತ್ತೇಜಿಸುವ ಬದ್ಧತೆಯನ್ನು ನಾವು ಪುನರುಚ್ಚರಿಸಬೇಕಿದೆ ಎಂದು ಮೋದಿ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಹುಬ್ಬಳ್ಳಿಯ ಬಾಲಕಿ ಸಿಯಾ ವಾಮನಸಾ ಖೋಡೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿದ್ಯುತ್ ಆಘಾತಕ್ಕೆ ಸಿಲುಕಿದ್ದ ತಮ್ಮನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸಿಯಾಗೆ. ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್​ಫೇರ್ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Tuesday took to his twitter handle and said that National Girl Child Day is a day to celebrate the exceptional achievements of the girl child, whose "excellence in many fields makes us proud".
Please Wait while comments are loading...