ಓಮಿಕ್ರಾನ್ ಬಿಕ್ಕಟ್ಟು ಎದುರಿಸಲು ಭಾರತೀಯ ರೈಲ್ವೆ ಸನ್ನದ್ಧ

ನವದೆಹಲಿ, ಡಿಸೆಂಬರ್ 2: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ವಿರುದ್ಧ ಹೋರಾಡುವುದಕ್ಕೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿಲ್ಲ. ಬದಲಿಗೆ ಭಾರತೀಯ ರೈಲ್ವೆ ಕೂಡ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಆ ಮೂಲಕ ಬಿಕ್ಕಟ್ಟು ನಿವಾರಣೆಗೆ ಕ್ರಮಗಳನ್ನು ತೆಗೆದುಕೊಂಡಿದೆ.

ರೈಲ್ವೆ ಪ್ರಯಾಣಿಕರ ಮೂಲಕ ಓಮಿಕ್ರಾನ್ ಸೋಂಕು ಹರಡದಂತೆ ತಡೆಗಟ್ಟಲು ಭಾರತೀಯ ರೈಲ್ವೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ. PSA ಸ್ಥಾವರಗಳ ಮೇಲ್ವಿಚಾರಣೆ, ಆಮ್ಲಜನಕ ಸಿಲಿಂಡರ್‌ಗಳ ಸಂಗ್ರಹದ ನಿರ್ವಹಣೆ, PPE ಕಿಟ್‌ಗಳು ಮತ್ತು ಪರೀಕ್ಷಾ ಸಾಮಗ್ರಿಗಳ ಲಭ್ಯತೆಯನ್ನು ದೃಢಪಡಿಸಿಕೊಳ್ಳಲಾಗುತ್ತಿದೆ. ರೈಲ್ವೆ ಸಿಬ್ಬಂದಿಗೆ ಲಸಿಕೆ ನೀಡುವುದು ಹಾಗೂ ಐಸಿಯು ಬೆಡ್ ಅನ್ನು ಸಿದ್ಧಪಡಿಸುವುದಕ್ಕೆ ರೈಲ್ವೆ ಇಲಾಖೆಯು ಒತ್ತು ನೀಡುತ್ತಿದೆ. ರೈಲ್ವೇಯು ಎಲ್ಲಾ ವಲಯಗಳು ಮತ್ತು ಉತ್ಪಾದನಾ ಘಟಕಗಳಿಗೆ ಆದೇಶವನ್ನು ನೀಡಲಾಗಿದೆ, ಎಂದು ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಕೆ ಶ್ರೀಧರ್ ತಿಳಿಸಿದ್ದಾರೆ.

ಪಿಎಸ್‌ಎ ಪ್ಲಾಂಟ್‌ಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಘಟಕದ ಮುಖ್ಯಸ್ಥರು ಮತ್ತು ಜನರಲ್ ಮ್ಯಾನೇಜರ್‌ಗಳಿಗೆ ತಿಳಿಸಿದ್ದೇವೆ. ಪಿಎಸ್‌ಎ ಪ್ಲಾಂಟ್‌ಗಳು ಮತ್ತು ವೆಂಟಿಲೇಟರ್‌ಗಳ ಸರಿಯಾದ ನಿರ್ವಹಣೆ ಮತ್ತು ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಡಾ ಶ್ರೀಧರ್ ಹೇಳಿದ್ದಾರೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೊವಿಡ್-19 ಪತ್ತೆಗೆ ಪ್ರತಿ ಹಂತದಲ್ಲೂ ಪರೀಕ್ಷೆ ನಡೆಸುವುದಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.

Omicron News: Indian Railways also Tighten Guidelines For Passengers amid New Variant Scare


ವಿಮಾನ ನಿಲ್ದಾಣಗಳಲ್ಲೂ ಕಟ್ಟುನಿಟ್ಟಿನ ನಿಯಮ:

ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 1ರಿಂದಲೇ ಅದು ಜಾರಿಗೆ ಬಂದಿದೆ. ಹೊಸ ಕೋವಿಡ್ ತಳಿಯ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳಾಗಿ ಹೊಸ ನಿಯಮಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಓಮ್ರಿಕಾನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಹೆಚ್ಚಿನ ಪರೀಕ್ಷೆಗೊಳಪಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೊವಿಡ್-19 ನಿರ್ವಹಣೆಯಲ್ಲಿ ಭಾರತೀಯ ರೈಲ್ವೆ:

ಕೋವಿಡ್-19 ಔಷಧಗಳು ಮತ್ತು ಅಗತ್ಯ ಪಿಪಿಇ ಕಿಟ್‌ಗಳು ಮತ್ತು ಪರೀಕ್ಷಾ ಸಾಮಗ್ರಿಗಳ ಸಮರ್ಪಕ ಪೂರೈಕೆ ಸೇರಿದಂತೆ ಬಫರ್ ಸ್ಟಾಕ್ ಅನ್ನು ನಿರ್ವಹಿಸಲಾಗುವುದು. "ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ ಕೊವಿಡ್-19 ಐಸಿಯು ಹಾಸಿಗೆ ಮತ್ತು ಐಸಿಯು ಅಲ್ಲದ ಹಾಸಿಗೆಗಳನ್ನು ನಿರ್ವಹಿಸಲಾಗುತ್ತಿದೆ," ಎಂದು ರೈಲ್ವೆ ಅಧಿಸೂಚನೆಯಲ್ಲಿ ತಿಳಿಸಿದೆ. ರೈಲ್ವೆ ನೌಕರರು, ಯೂನಿಯನ್ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ರೈಲ್ವೆ ಫಲಾನುಭವಿಗಳು ತ್ವರಿತವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಶ್ರೀಧರ್ ತಿಳಿಸಿದ್ದಾರೆ.

ಕೋವಿಡ್-19 ಶಿಷ್ಟಾಚಾರಗಳನ್ನು ಅನುಸರಿಸಲು ವಿವಿಧ ಸ್ಥಳಗಳಲ್ಲಿ IEC ಸಾಮಗ್ರಿಗಳನ್ನು ಲಭ್ಯವಾಗುವಂತೆ ಇರಿಸಿಕೊಳ್ಳಲು ಜನರಲ್ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಯಾವುದೇ ಸಲಹೆ ಸೂಚನೆಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕಿಸಬೇಕು ಎಂದು ಎಂದು ರೈಲ್ವೆ ಸೂಚಿಸಿದೆ. ಭಾರತೀಯ ರೈಲ್ವೆಯ ಸೂಚನೆ ಪ್ರಕಾರ, ಎಲ್ಲಾ ವೈದ್ಯಕೀಯ ಮೂಲಸೌಕರ್ಯಗಳನ್ನು ನಿಕಟವಾಗಿ ಪರಿಶೀಲಿಸಬೇಕು. ಯಾವುದೇ ಅಂತರವನ್ನು ಸರಿದೂಗಿಸಲು ಮೌಲ್ಯಮಾಪನ ಕೈಗೊಳ್ಳಬೇಕು. "COVID-19 ರೋಗಿಗಳಿಗೆ ಪ್ರಸ್ತುತ ನಿರ್ವಹಣೆ, ಪ್ರೋಟೋಕಾಲ್ ಕುರಿತು ಆರೋಗ್ಯ ಕಾರ್ಯಕರ್ತರಿಗೆ ನಿಯಮಿತ ತರಬೇತಿಯನ್ನು ನೀಡಬೇಕು" ಎಂದು ರೈಲ್ವೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+