ವಿವಾಹಿತೆ ಮೇಲೆ ಆಪ್ ಮುಖಂಡ ಅತ್ಯಾಚಾರ; ಸೆರೆ

ರಮಣ ಸ್ವಾಮಿ ಬಂಧಿತ ಆಪ್ ಮುಖಂಡ. ಈತ ವಿವಾಹಿತ ಮಹಿಳೆಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಆಕೆಯ ಮೇಲೆ ಜನವರಿ 25ರಂದು ರೇಪ್ ಮಾಡಿದ್ದಾರೆ. ಆರೋಪಿ ರಮಣ ಸ್ವಾಮಿಗೆ ಫೆ. 8ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆ ನಡೆದ ದಿನದಂದೇ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅತ್ಯಾಚಾರ ನಡೆದಿರುವುದು ದೃಢಪಡುತ್ತಿದ್ದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ರಮಣ ಸ್ವಾಮಿ, ಓಕ್ಲಾ ಕ್ಷೇತ್ರದಿಂದ ಟಿಕೆಟ್ ಸಹ ಕೇಳಿದ್ದರು.
ಕೆಲ ದಿನಗಳ ಹಿಂದೆ ದೆಹಲಿಯ ದಕ್ಷಿಣ ಭಾಗದಲ್ಲಿರುವ ಹೃಷಿಕೇಶ ನಗರದಲ್ಲಿರುವ ರಮಣ ಸ್ವಾಮಿಯ ಪರಿಚಯವಾಯಿತು. ಸ್ನೇಹದಿಂದಿದ್ದ ಸ್ವಾಮಿಗೆ 'ನನಗೊಂದು ಕೆಲಸ ಕೊಡಿಸಿ, ಪ್ಲೀಸ್' ಎಂದು ಮನವಿ ಮಾಡಿಕೊಂಡೆ. ಅದಾದನಂತರ ಓಕ್ಲಾ ಪ್ರದೇಶದಲ್ಲಿ ತನ್ನನ್ನು (ಜ. 25 ರಂದು) ಭೇಟಿಯಾಗುವಂತೆ ಸೂಚಿಸಿದ.
ಅದರಂತೆ ತಾನು ಸ್ಥಳಕ್ಕೆ ಹೋದಾಗ ಆತನ ನನ್ನನ್ನು ಕಾರಿನಲ್ಲಿ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ' ಎಂದು ಬಾಧಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅತ್ಯಾಚಾರದ ಬಗ್ಗೆ ಯಾರಿಗಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರದು ಎಂದೂ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಮಹಿಳೆ ಅಲವತ್ತುಕೊಂಡಿದ್ದಾರೆ.












Click it and Unblock the Notifications