Get Updates
Get notified of breaking news, exclusive insights, and must-see stories!

Odisha TV AI Lisa: ರಾಜ್ಯಕ್ಕೆ ಮೊದಲ ಕೃತಕ ಬುದ್ಧಿಮತ್ತೆ ಸುದ್ದಿ ನಿರೂಪಕಿ 'ಲಿಸಾ' ಪರಿಚಯಿಸಿದ ಒಟಿವಿ

ಭುವನೇಶ್ವರ, ಜುಲೈ 11: ಕೃತಕ ಬುದ್ಧಿಮತ್ತೆ (Artificial intelligence - AI) ವಿಶ್ವದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಳ್ಳಬಹುದು ಪ್ರಮುಖ ತಂತ್ರಜ್ಞಾನವಾಗಿದೆ. ಇದರಿಂದ ಲಾಭವು ಇದ್ದು, ಹಾನಿಯು ಇದೆ. ಎಐ ಯಾವ ಕ್ಷೇತ್ರ ಉದ್ಯೋಗಕ್ಕೆ ಕಾಲಿಟ್ಟರು ಅಲ್ಲಿನ ಉದ್ಯೋಗಸ್ಥರಿಗೆ ಕುತ್ತು ಬರಬಹುದು.

ಸದ್ಯ ಓಡಿಶಾ ಖಾಸಗಿ ಸುದ್ದಿವಾಹಿನಿಯಾದ 'ಒಡಿಶಾ ಟಿವಿ'ಯು ಈ ಕೃತಕ ಬುದ್ಧಿಮತ್ತೆಯಿಂದ (AI) ಸೃಷ್ಟಿಸಲಾದ ಓಡಿಶಾದ ಮೊಟ್ಟ ಮೊದಲ ಎಐ ಸುದ್ದಿ ನಿರೂಪಕಿಯನ್ನು ಪರಿಚಯಿಸಿದೆ. ಈಕೆಯ ಹೆಸರು 'ಲೀಸಾ'. ಈಕೆಯು ಇಂಗ್ಲೀಷ್‌ ಮತ್ತು ಒಡಿಯಾ ಭಾಷೆಯಲ್ಲಿ ಸುದ್ದಿ ಹೇಳುತ್ತಾಳೆ.

Odish Tv Introduced First AI

ಇಷ್ಟು ದಿನ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಆವಿಷ್ಕಾರ ಕುರಿತು ಸುದ್ದಿ ಹೇಳುತ್ತಿದ್ದ ನ್ಯೂಸ್ ಆಂಕರ್‌ಗಳ ಉದ್ಯೋಗಕ್ಕೆ ಕುತ್ತು ಬರುವ ದಿನಗಳು ಬಹಳ ದೂರ ಉಳಿದಿಲ್ಲ. ಇದ ಕೇವಲ ಮಾಧ್ಯಮ ಕ್ಷೇತ್ರಗಳಿಗೆ ಮಾತ್ರ ಅನ್ವಯಿಸುವುದಿಲ್ಲ.

ಎಐ ನಿರ್ಮಿತ ಲೀಸಾಳನ್ನು ಓಡಿಶಾ ಸುದ್ದಿ ವಾಹಿನಿ ಸಂಸ್ಥೆಯ ಡಿಜಿಟಲ್‌ ವೇದಿಕೆ ಸೇರಿದಂತೆ ತನ್ನೆಲ್ಲ ವೇದಿಕೆಗಳಲ್ಲಿ ಸುದ್ದಿ ನಿರೂಪಕಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಇದು ಒಡಿಶಾದ ಟಿವಿ ಪತ್ರಿಕೋದ್ಯಮಕ್ಕೆ ಸಂಸ್ಥೆಯ ಉಡುಗೊರೆಯೂ ಹೌದು ಎಂದು ಒಡಿಶಾ ಟಿವಿ' ಹೇಳಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಮಾತನಾಡುವ ತರಬೇತಿ ನೀಡುವುದೇ ಒಂದು ಸವಾಲು

ಎಐ ಲೀಸಾಗೆ ಒಡಿಯಾ ಭಾಷೆಯಲ್ಲಿ ಮಾತನಾಡಲು ತರಬೇತಿ ಕೊಡುವುದೇ ಒಂದು ದೊಡ್ಡ ಸವಾಲಾಗಿತ್ತು. ನಿರಂತರ ಪ್ರಯತ್ನಗಳ ಮೂಲಕ ಒಂದು ಹಂತದ ಪ್ರಗತಿ ಸಾಧಿಸಲಾಗಿದೆ. ಆದರೆ ಇದಿಷ್ಟೇ ಸಾಲದು ಇದರ ಮೇಲೆಯೆ ಇನ್ನಷ್ಟು ಕೆಲಸಗಳು, ಪ್ರಯೋಗಗಳು ನಡೆಯುತ್ತಿವೆ.

ಲೀಸಾ ಸುದ್ದಿ ವಾಚನ ಮಾಡುವುದರ ಜೊತೆಗೆ ಇತರರೊಂದಿಗೆ ಸುಲಲಿತವಾಗಿ ಮಾತನಾಡುವಂತೆ ತರಬೇತಿ ನೀಡಲು ಪ್ರಯತ್ನಿಸಲಾಗುವುದು ಎಂದು ಒಟಿವಿಯ ಡಿಜಿಟಲ್​ ಬಿಸಿನೆಸ್ ಹೆಡ್ ಲಿತಿಶಾ ಮಂಗತ್​ ಪಾಂಡಾ ಅವರು ಮಾಹಿತಿ ನೀಡಿದರು.

Odish Tv Introduced First AI

ಒಡಿಶಾ ಟಿವಿ ಸುದ್ದಿ ಮಾಧ್ಯಮವು ಈ ರಾಜ್ಯದಲ್ಲಿಯೇ ತಲೆ ಎತ್ತಿದ ಮೊದಲ ಸುದ್ದಿ ವಾಹಿನಿ ಆಗಿದೆ. 1997ರಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಪ್ರಾರಂಭಿವಾಯಿತು. ಅಲ್ಲಿಂದ ಹಂತ ಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ವಿಸ್ತರಿಸುತ್ತಾ ಬಂತು. ಆರಂಭಿಕದ ಹಂತದಲ್ಲಿ ಕೇಬಲ್ ಟಿವಿ ಆಗಿದ್ದ ಒಡಿಶಾ ಟಿವಿಯು 2006 ರಲ್ಲಿ ಸ್ಯಾಟಲೈಟ್​ ಚಾನೆಲ್​ ಆಗಿ ಬದಲಾಯಿತು.

ಈಗಾಗಲೇ ಬಂದ ಎಐ ನಿರೂಪಕಿಯರ ಮಾಹಿತಿ

ಇದೇ ವರ್ಷ 2023ರ ಮಾರ್ಚ್ ತಿಂಗಳಲ್ಲಿ 'ಆಜ್‌ ತಕ್‌' ಸುದ್ದಿ ವಾಹಿನಿಯು ಭಾರತದ ಮೊದಲ ಎಐ ನ್ಯೂಸ್‌ ಆಂಕರ್ 'ಸನಾ'ಳನ್ನು ಪರಿಚಯ ಮಾಡಿತ್ತು. ಅದರ ಬೆನ್ನಲ್ಲೆ ಬ್ಲ್ಯಾಕ್‌ ಅಂಡ್‌ ವೈಟ್‌' ಕಾರ್ಯಕ್ರಮದಲ್ಲಿ 'ಸನಾ' ಪರಿಚಯವಾಯಿತು. ನಂತರ ಕಳೆದ ಏಪ್ರಿಲ್‌ನಲ್ಲಿ 'ಕುವೈತ್‌ ನ್ಯೂಸ್‌' ಎಂಬ ಕುವೈತ್‌ನ ಮೂಲದ ಮಾಧ್ಯಮ ಸಂಸ್ಥೆ 'ಫೆದಾಹ್‌' ಎಂಬ ಎಐ ಸುದ್ದಿ ನಿರೂಪಕಿಯನ್ನು ಪರಿಚಯ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+