ಅಜಿತ್ ದೋವಲ್ ಹಳೇ ಸಂದರ್ಶನ; ಕಾಂಗ್ರೆಸ್ ನಿಂದ ಹೊಸದಾಗಿ ವಾಗ್ದಾಳಿ

ನವದೆಹಲಿ, ಮಾರ್ಚ್ 12: ಭಾರತದ್ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ನ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಗ್ವಾದ ನಡೆಯುತ್ತಿದೆ. ಮಂಗಳವಾರದಂದು ಕಾಂಗ್ರೆಸ್ ಹೊಸದಾಗಿ ಆರೋಪ ಮಾಡಿದೆ. ಒಂಬತ್ತು ವರ್ಷಗಳ ಹಿಂದೆ ಅಜಿತ್ ದೋವಲ್ (ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ) ನೀಡಿದ್ದ ಸಂದರ್ಶನವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದೆ.

ಎರಡು ದಶಕಗಳ ಹಿಂದೆ ಭಯೋತ್ಪಾದಕ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಿದ್ದಕ್ಕೆ ಆಗಿನ ಬಿಜೆಪಿ ಸರಕಾರವನ್ನು ನಿಂದನೆ ಮಾಡಿದ್ದರು ಎಂದು ಹೇಳಿದೆ. " ದೋವಲ್ ಮಾತನಾಡುತ್ತಾ, ಮಸೂದ್ ಅಜರ್ ನ ಬಿಡುಗಡೆ ರಾಜಕೀಯ ನಿರ್ಧಾರ ಆಗಿತ್ತು" ಎಂದಿದ್ದರು. ಪ್ರಧಾನಿ ಮೋದಿ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅದನ್ನು ದೇಶದ್ರೋಹಿ ನಡವಳಿಕೆ ಎಂದು ಒಪ್ಪಿಕೊಳ್ಳುತ್ತಾರಾ? ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.

ಇನ್ನು ಅಜಿತ್ ದೋವಲ್ ನೀಡಿದ ಸಂದರ್ಶನದಲ್ಲಿ ಮಸೂದ್ ಅಜರ್ ಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಆರೋಪಿಸಿದ್ದಾರೆ ಸುರ್ಜೇವಾಲ. ಸುಧಾರಿತ ಸ್ಫೋಟಕ ಹೇಗೆ ತಯಾರಾಗುತ್ತದೆ ಎಂಬುದು ಅಜರ್ ಗೆ ಗೊತ್ತಿಲ್ಲ. ಕನಿಷ್ಠ ಒಳ್ಳೆ ಶೂಟರ್ ಕೂಡ ಅಲ್ಲ ಎಂದು ಅಜಿತ್ ದೋವಲ್ ಹೇಳಿದ್ದ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

NSA Ajit Dovals clean chit to Masood Azhar, Congress digs out old interview

ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ರಾಷ್ಟ್ರೀಯತಾ ನೀತಿಗಳನ್ನು ಆ ಸಂದರ್ಶನದಲ್ಲಿ ಅಜಿತ್ ಹೊಗಳಿದ್ದರು ಎಂದು ಸುರ್ಜೇವಾಲ ಹೇಳಿದ್ದಾರೆ. ಭಾರತೀಯ ವಿಮಾನ ಅಪಹರಿಸಿ, ಪ್ರಯಾಣಿಕರನ್ನು ಒತ್ತೆ ಇಟ್ಟುಕೊಂಡಾಗ ಮಸೂದ್ ಅಜರ್ ಹಾಗೂ ಮತ್ತಿಬ್ಬರು ಉಗ್ರರನ್ನು ಕಂದಹಾರ್ ಗೆ ತೆರಳಿ, ಬಿಡುಗಡೆ ಮಾಡಿ ಬಂದವರಲ್ಲಿ ಅಜಿತ್ ದೋವಲ್ ಕೂಡ ಇದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+