ಪ್ರಯಾಣಿಕರೇ ಗಮನಿಸಿ: ಈಗ ರೈಲು ಟಿಕೆಟ್‌ನಲ್ಲಿ ಹೆಸರು, ದಿನಾಂಕ ಬದಲಿಸಬಹುದು

ನವದೆಹಲಿ, ನವೆಂಬರ್ 28: ಪ್ರತಿದಿನ ಕೋಟ್ಯಾಂತರ ಜನರು ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ರೈಲು ಸಂಚಾರ ನಡೆಸುವ ಜನರು ಟಿಕೆಟ್ ಬುಕ್ಕಿಂಗ್, ಕ್ಯಾನ್ಸಲ್ ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಾರೆ. ಇಂತಹ ಸಮಸ್ಯೆಗಳಲ್ಲಿ ಬುಕ್ ಆಗಿರುವ ಟಿಕೆಟ್‌ನಲ್ಲಿ ಹೆಸರು ಮತ್ತು ಪ್ರಯಾಣದ ದಿನಾಂಕ ಬದಲಾವಣೆ ಮಾಡುವುದು ಸಹ ಒಂದು. ಇದು ಸಾಧ್ಯವಾಗದೇ ಟಿಕೆಟ್ ರದ್ದುಗೊಳಿಸುವ ಹಲವು ಪ್ರಯಾಣಿಕರಿದ್ದಾರೆ.

ಭಾರತೀಯ ರೈಲ್ವೆ ಈಗ ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಲು ಮುಂದಾಗಿದೆ. ಸೀಟು ಖಚಿತವಾದ ಟಿಕೆಟ್‌ನಲ್ಲಿ ಪ್ರಯಾಣಿಕರ ಹೆಸರು ಬದಲಾವಣೆ ಮತ್ತು ಪ್ರಯಾಣದ ದಿನಾಂಕ ಬದಲಾವಣೆ ಮಾಡಲು ಅವಕಾಶವನ್ನು ನೀಡಿದೆ. ಇದರಿಂದಾಗಿ ರೈಲು ಪ್ರಯಾಣಿಕರು ಟಿಕೆಟ್ ರದ್ದುಗೊಳಿಸದೇ ಪ್ರಯಾಣಿಕರ ಹೆಸರು ಬದಲಾವಣೆ ಮಾಡಬಹುದು.

Now You Can Change Traveller Name And Date Of Journey In Railway Ticket

ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ತಮ್ಮ ಕುಟುಂಬದ ವ್ಯಕ್ತಿಗೆ ಅದನ್ನು ಹಸ್ತಾಂತರ ಮಾಡುವಾಗ ಹೆಸರು ಬದಲಿಸಬೇಕು. ಆದರೆ ಈ ವ್ಯವಸ್ಥೆ ಇಲ್ಲದ ಕಾರಣ ಟಿಕೆಟ್ ರದ್ದುಗೊಳಿಸಬೇಕಿತ್ತು. ಆದರೆ ಈಗ ಟಿಕೆಟ್ ರದ್ದುಗೊಳಿಸದೇ ರಿ-ಬುಕ್ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ರೈಲ್ವೆ ಟಿಕೆಟ್ ಹೆಸರು, ಪ್ರಯಾಣದ ದಿನಾಂಕ ಬದಲಾಯಿಸಿ: ಈಗ ಭಾರತೀಯ ರೈಲ್ವೆ ಖಚಿತಗೊಂಡಿರುವ ಟಿಕೆಟ್‌ ಅನ್ನು ರದ್ದುಗೊಳಿಸದೇ ಪ್ರಯಾಣಿಕರ ಹೆಸರು, ಪ್ರಯಾಣದ ದಿನಾಂಕ ಬದಲಾವಣೆ ಮಾಡಲು ಅವಕಾಶವನ್ನು ನೀಡಿದೆ. ಆದರೆ ಸದ್ಯಕ್ಕೆ ಈ ಆಯ್ಕೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿದವರಿಗೆ ಇಲ್ಲ. ಆಫ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ಕೌಂಟರ್‌ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಲಭ್ಯವಿದೆ.

ಒಂದು ವೇಳೆ ನೀವು ರೈಲ್ವೆ ಟಿಕೆಟ್ ಬುಕ್ ಮಾಡಿದ್ದರೆ ಹತ್ತಿರ ಕುಟುಂಬದ ಸದಸ್ಯರು (ಪೋಷಕರು, ಸಹೋದರ/ ಸಹೋದರಿ, ಮಕ್ಕಳು) ಹೆಸರಿಗೆ ಬದಲಾವಣೆ ಮಾಡಬಹುದು. ಒಂದು ವೇಳೆ ವಿದ್ಯಾರ್ಥಿಗಳು ಅಥವ ಕಛೇರಿಯವರು ಗ್ರೂಪ್ ಟಿಕೆಟ್ ಬುಕ್ ಮಾಡಿದ್ದರೆ ಗುಂಪಿನ ಸದಸ್ಯರ ಹೆಸರು ಸಹ ಬದಲಿಸಬಹುದು.

ಬದಲಾವಣೆ ಮಾಡುವುದು ಹೇಗೆ?

* ರೈಲು ಹೊರಡುವ 24 ಗಂಟೆ ಮೊದಲು ಹತ್ತಿರದ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗೆ ಭೇಟಿ ನೀಡಿ

* ಹೆಸರು ಬದಲಾವಣೆ ಮಾಡಲು ಲಿಖಿತ ಮನವಿ ಸಲ್ಲಿಸಿ

* ಟಿಕೆಟ್ ಬುಕ್ ಮಾಡಿದವರ, ಹೆಸರು ಬದಲಾವಣೆ ಮಾಡಬೇಕಾದ ಇಬ್ಬರದ್ದು ಅಧಿಕೃತ ಐಡಿ ನೀಡಿ

* ಕುಟುಂಬದ ಕೆಲವು ಸದಸ್ಯರು, ಗುಂಪು ಟಿಕೆಟ್‌ನಲ್ಲಿ ಸದಸ್ಯರ ಹೆಸರನ್ನು ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ.

ಪ್ರಯಾಣ ದಿನಾಂಕ ಬದಲಾವಣೆ ಹೇಗೆ?

ಆಫ್‌ಲೈನ್ ಟಿಕೆಟ್ ಕಾಯ್ದಿರಿಸುವ ಕೌಂಟರ್‌ನಲ್ಲಿ ರೈಲು ಪ್ರಯಾಣದ ದಿನಾಂಕವನ್ನು ಸಹ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಈ ವ್ಯವಸ್ಥೆ ಸಹ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ ಸದ್ಯಕ್ಕೆ ಲಭ್ಯವಿಲ್ಲ.

* ದಿನಾಂಕ ಬದಲಾವಣೆ ಮಾಡಲು ರೈಲು ಹೊರಡುವ 48 ಗಂಟೆಗಳ ಮೊದಲು ಕೌಂಟರ್‌ಗೆ ಭೇಟಿ ನೀಡಿ.

* ನಿಮ್ಮ ಕಾಯ್ದಿರಿಸಿದ ಟಿಕೆಟ್ ನೀಡಿ, ದಿನಾಂಕ ಬದಲಾವಣೆ ಮಾಡಲು ಮನವಿ ಸಲ್ಲಿಕೆ ಮಾಡಿ

* ಹೊಸ ದಿನಾಂಕವನ್ನು ನೀಡಿ. ಕೌಂಟರ್‌ನಲ್ಲಿರುವವರು ದಿನಾಂಕ ಬದಲಾವಣೆ ಮಾಡಿ ಹೊಸ ಟಿಕೆಟ್ ನೀಡುತ್ತಾರೆ.

ಪ್ರಯಾಣಿಕರಿಗೆ ಪ್ರಮುಖ ಮಾಹಿತಿ ಎಂದರೆ ದಿನಾಂಕ ಬದಲಾವಣೆ ಸೌಲಭ್ಯ ಸೀಟು ಖಚಿತವಾದ ಅಥವ ಆರ್‌ಎಸಿ ಟಿಕೆಟ್‌ಗಳಿಗೆ ಮಾತ್ರವಿದೆ. ತತ್ಕಾಲ್ ಟಿಕೆಟ್‌ಗಳಿಗೆ ಸೌಲಭ್ಯವಿಲ್ಲ. ಸೀಟು ಬದಲಾವಣೆ ಸಂಖ್ಯೆಗೆ ಪ್ರಯಾಣಿಕರು ಒಪ್ಪಿಗೆ ನೀಡಿದರೆ ಮಾತ್ರ ದಿನಾಂಕ ಬದಲಾವಣೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+