ಹೊಸ ನಿಯಮ, ಮದ್ಯಪಾನ ಮಾಡಿ ಅಪಘಾತವಾದರೆ ವಿಮೆ ಸಿಗಲ್ಲ
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನು ಮುಂದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಅಪಘಾತವಾದರೆ ವಿಮೆ ಅನ್ವಯಿಸುವುದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ವರದಿ ಓದಿ
ಬೆಂಗಳೂರು, ಏಪ್ರಿಲ್ 8: ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆಗೆ ಕಠಿಣ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ಮದ್ಯಪಾನ ಮಾಡಿ ವಾಹನ ಓಡಿಸುವವರಿಗೆ ವಿಮಾ ಸೌಲಭ್ಯ ಸಿಗುವುದಿಲ್ಲ. ಮೋಟಾರು ವಾಹನ ಕಾಯ್ದೆಗೆ ಶುಕ್ರವಾರ ಲೋಕಸಭೆಯಲ್ಲಿ ತಿದ್ದುಪಡಿ ತರಲಾಗಿದೆ.
ಇದೀಗ ಆ ನಿಯಮವನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ವಿಮಾ ಕಂಪೆನಿಗಳು ತೊಡಗಿವೆ. ಹೊಸ ನಿಯಮದ ಪ್ರಕಾರ, ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಅಪಘಾತವಾದರೆ ವಿಮೆ ಅನ್ವಯಿಸುವುದಿಲ್ಲ. ಅಂಥ ಸಂದರ್ಭದಲ್ಲಿ ಕಾರಿನ ಮಾಲೀಕರು ಅಥವಾ ಚಾಲಕರು ಅಪಘಾತಕ್ಕೆ ಹೊಣೆಯಾಗಿ, ಗಾಯ ಅಥವಾ ಸಾವಿಗೆ ಪರಿಹಾರ ಕಟ್ಟಿಕೊಡಬೇಕಾಗುತ್ತದೆ.[ಏಪ್ರಿಲ್ 1 ರಿಂದ ಎಲ್ಲಾ ವಿಮೆ ಕಂತುಗಳು ದುಬಾರಿ]

ಈ ಹಿಂದೆ ಪರಿಹಾರ ಮೊತ್ತವನ್ನು ವಿಮಾ ಕಂಪೆನಿಯೇ ಪಾವತಿಸುತ್ತಿತ್ತು. ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿರುವುದರಿಂದ ಇನ್ನು ಮುಂದೆ ಹಳೆ ನಿಯಮ ಇರುವುದಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮವಾಗಿ ಈ ನಿಯಮ ಪರಿಚಯಿಸಲಾಗಿದೆ.[ಕುಡಿದು ವಾಹನ ಓಡಿಸಿದರೆ ಭಾರೀ ದಂಡ, ಎಚ್ಚರ!]
ರಸ್ತೆ ಅಪಘಾತವನ್ನು ನಿಯಂತ್ರಿಸುವ ಸಲುವಾಗಿಯೇ ಈ ನಿಯಮ ಮಾಡಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ ಹಾಗೂ ವೇಗವಾದ ಚಾಲನೆಗೆ ಕೂಡ ಹೊಸ ನಿಯಮದಡಿ ಜೈಲು ಶಿಕ್ಷೆ ಹಾಗೂ ಚಾಲನಾ ಪರವಾನಗಿ ರದ್ದು ಮಾಡಲು ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications