November New Rules: ನವೆಂಬರ್ 1ರಿಂದ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ? ಸಂಪೂರ್ಣ ಮಾಹಿತಿ ಇಲ್ಲಿದೆ
November 2025 New Rules: ಅಕ್ಟೋಬರ್ ಮುಗಿದು ನವೆಂಬರ್ ಎಂಟ್ರಿಯಾಗಿದೆ. ಹಾಗಾದ್ರೆ, ಇಂದಿನಿಂದ ಯಾವೆಲ್ಲಾ ಹೊಸ ನಿಯಮಗಳು ಜಾರಿಯಾಗಿವೆ ಬದಲಾವಣೆಗಳಾಗಿವೆ ಜಾರಿಯಾಗ ಹಾಗೂ ಇದರಿಂದ ಪ್ರಯೋಜನವಾ ಅಥವಾ ಜನಸಾಮಾನ್ಯರಿಗೆ ತೊಂದರೆಯಾಗಿದ್ಯಾ ಎನ್ನುವ ಸಂಪೂರ್ಣ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರತಿ ತಿಂಗಳ ಆರಂಭದಲ್ಲಿ ಒಂದಲ್ಲ ಒಂದು ನಿಯಮಗಳು ಬದಲಾಗುತ್ತಿರುತ್ತವೆ. ಹಾಗೆಯೇ ಇದೀಗ ಇಂದಿನಿಂದ ನವೆಂಬರ್ ತಿಂಗಳು ಆರಂಭ ಆಗಿದ್ದು, ಆಧಾರ್ ಕಾರ್ಡ್ ಸಂಬಂಧಿತ ನಿಯಮಗಳಿಂದ ಹಿಡಿದು ಬ್ಯಾಂಕಿಂಗ್, ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಿವೆ. ಇದು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿಗೆ ಎಂದು ಹೇಳಲಾಗುತ್ತಿದೆ.

ಆಧಾರ್ ಅಪ್ಡೇಟ್ ಶುಲ್ಕ ಪರಿಷ್ಕರಣೆ: ಯುಐಡಿಎಐ ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅಪ್ಡೇಟ್‌ಗೆ 125 ರೂಪಾಯಿ ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತ ಇರಲಿದೆ. ವಯಸ್ಕರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಅಪ್ಡೇಟ್ ಮಾಡಲು 75 ರೂಪಾಯಿ, ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಅಪ್ಡೇಟ್‌ಗೆ 125 ರೂಪಾಯಿ ನಿಗದಿಪಡಿಸಲಾಗಿದೆ. ಇದರ ಪ್ರಕಾರ, ಯಾವುದೇ ದಾಖಲೆಗಳನ್ನು ಸಲ್ಲಿಸದೆ ಆಧಾರ್ ವಿಳಾಸ, ಜನ್ಮ ದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬಹುದಾಗಿದೆ.
ಬ್ಯಾಂಕ್ ನಿಯಮಗಳು: ಇಂದಿನಿಂದ ಅಂದರೆ ನವೆಂಬರ್ 1ರಿಂದ ಬ್ಯಾಂಕ್‌ಗಳು ಗ್ರಾಹಕರಿಗೆ ಒಂದು ಖಾತೆ, ಲಾಕರ್ ಅಥವಾ ಸೇಫ್ ಕಸ್ಟಡಿಗೆ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತವೆ. ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭವಾಗಿ ಪಡೆಯಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಈ ಹೊಸ ನಿಯಮ ಜಾರಿಗೊಳಿಸಲಾಗಿದೆ. ಗ್ರಾಹಕರಿಗೆ ನಾಮಿನಿಗಳನ್ನು ಸೇರಿಸುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ಕೂಡ ಸುಲಭಗೊಳಿಸಲಾಗಿದೆ.
ಹೊಸ ಜಿಎಸ್‌ಟಿ ಸ್ಲ್ಯಾಬ್‌ಗಳು: ಸರ್ಕಾರವು ಕೆಲ ವಸ್ತುಗಳಿಗೆ ವಿಶೇಷ ದರದೊಂದಿಗೆ ಹೊಸ ಎರಡು ಸ್ಲ್ಯಾಬ್ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದು ಇಂದಿನಿಂದ ಜಾರಿಗೆ ಬರುತ್ತಿದೆ. ಹಿಂದಿನ ಶೇಕಡ 5, 12, 18, ಮತ್ತು 28ರ ನಾಲ್ಕು ಸ್ಲ್ಯಾಬ್ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ.
ಶೇಕಡ 12 ಮತ್ತು 28 ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗಿದೆ. ಆದರೆ, ಶೇಕಡ 40 ಐಷಾರಾಮಿ ತೆರಿಗೆ ದರ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಐಷಾರಾಮಿ ಮತ್ತು ತಂಬಾಕುಯುಕ್ತ ವಸ್ತುಗಳಿಗೆ ಅನ್ವಯ ಆಗುತ್ತದೆ. ಈ ನಿರ್ಧಾರ ಭಾರತದ ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.
ಅಲ್ಲದೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯಿಂದ ಏಕೀಕೃತ ಪಿಂಚಣಿ ಯೋಜನೆ (UPS)ಗೆ ಬದಲಾಯಿಸಲು ಬಯಸುವ ಕೇಂದ್ರ ಸರ್ಕಾರಿ ನೌಕರರಿಗೆ ಇದೀಗ ನವೆಂಬರ್ 30ರ ವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯ ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಉದ್ಯೋಗಿಗಳಿಗೆ ಪರಿಶೀಲಿಸಲು ಮತ್ತು ಬದಲಾಯಿಸಲು ಹೆಚ್ಚಿನ ಸಮಯ ಸಿಕ್ಕಂತಾಗಲಿದೆ.
ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ನಿವೃತ್ತ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕು. ಇದನ್ನು ಅವರ ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಗಡುವನ್ನು ತಪ್ಪಿಸುವುದರಿಂದ ಪಿಂಚಣಿ ಪಾವತಿಗಳು ವಿಳಂಬ ಆಗುವ ಸಾಧ್ಯತೆಯಿದೆ.
ಈ ಬ್ಯಾಂಕ್ ಲಾಕರ್ ಶುಲ್ಕಗಳಲ್ಲಿ ಬದಲಾವಣೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೀಘ್ರದಲ್ಲೇ ದೇಶಾದ್ಯಂತ ತನ್ನ ಲಾಕರ್ ಬಾಡಿಗೆ ಶುಲ್ಕಗಳನ್ನು ಪರಿಷ್ಕರಣೆ ಮಾಡಲಿದೆ. ಹೊಸ ದರಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರಲಿದೆ. ಪರಿಷ್ಕೃತ ಶುಲ್ಕಗಳನ್ನು ನವೆಂಬರ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಹಾಗೂ ಅಧಿಸೂಚನೆಯ 30 ದಿನಗಳ ಬಳಿಕ ಜಾರಿಯಾಗಲಿದ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್: ಎಸ್‌ಬಿಐ ಕಾರ್ಡ್ ಬಳಕೆದಾರರು MobiKwik ಮತ್ತು CREDನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ ಶೇಕಡ 1ರಷ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚುವರಿಯಾಗಿ ಎಸ್‌ಬಿಐ ಕಾರ್ಡ್ ಬಳಸಿ ಡಿಜಿಟಲ್ ವ್ಯಾಲೆಟ್‌ಗೆ 1,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಲೋಡ್ ಮಾಡಿದರೆ ಶೇಕಡ 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಹೀಗೆ ಪ್ರತಿ ತಿಂಗಳು ಬ್ಯಾಂಕ್ ಸಂಬಂಧಿತ ನಿಯಮಗಳು ಸೇರಿದಂತೆ ಹಲವಾರು ನಿಯಮಗಳಲ್ಲಿ ಬದಲಾವಣೆಗಳು ಆಗುತ್ತಲಿರುತ್ತವೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications