ಹಳೇ ನೋಟಿನೊಂದಿಗೆ ಖ್ಯಾತ ನಟನ ಕುಟುಂಬ: ಅಧಿಕಾರಿಗಳ ತೀವ್ರ ವಿಚಾರಣೆ

Written By:
Subscribe to Oneindia Kannada

ಹೈದರಾಬಾದ್, ಡಿ 4: ನಿಷೇಧಗೊಂಡಿರುವ ಐನೂರು ಮತ್ತು ಸಾವಿರ ರೂಪಾಯಿಯ ನೋಟು ಅಪಾರ ಪ್ರಮಾಣದಲ್ಲಿ ಹೊಂದಿದ್ದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಖ್ಯಾತ ತೆಲುಗು ನಟನ ಕುಟುಂಬದ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಘಟನೆ ವರದಿಯಾಗಿದೆ.

ಶನಿವಾರ (ಡಿ 3) ರಾತ್ರಿ ಹೈದರಾಬಾದ್ ವಿಮಾನನಿಲ್ದಾಣದಿಂದ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಪತ್ನಿ ವಸುಂಧರಾ ಮತ್ತು ಕುಟುಂಬದ ಇತರ ಆರು ಸದಸ್ಯರು ಸ್ಪೈಸ್ ಜೆಟ್ ವಿಮಾನದ ಮೂಲಕ ತಿರುಪತಿಗೆ ಬಂದಿಳಿದಿದ್ದರು. (ನೋಟು ಬದಲಾವಣೆ, ಸ್ವಾಮೀಜೀಗೇ ಮುಂಡಾಯಿಸಿದ ಖದೀಮ)

ತಿರುಪತಿಯ ರೇನಿಗುಂಟ ವಿಮಾನನಿಲ್ದಾಣದಲ್ಲಿ ಬಾಲಕೃಷ್ಣ ಅವರ ಪತ್ನಿಯ ಬಳಿ ಅಪಾರ ಪ್ರಮಾಣದ ಹಳೇ ನೋಟಿನ ಕಂತೆ ಇರುವುದನ್ನು ಭದ್ರತಾ ತಪಾಸಣೆಯ ವೇಳೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Noted Telugu actor wife caught with 10 lakh of old notes at Tirupathi

ಅಧಿಕಾರಿಗಳು ಕೂಡಲೇ ಆದಾಯ ತೆರಿಗೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅಧಿಕಾರಿಗಳು ತೀವ್ರ ವಿಚಾರಣೆಗೊಳಿಸಿದಾಗ ಆದಾಯ ತೆರಿಗೆಗೆ ಸಂಬಂಧಿಸಿದ ದಾಖಲೆಗಳನ್ನು ವಸುಂಧರಾ ನೀಡಿದ್ದಾರೆ.

ಇರುವ ದುಡ್ಡಿನ ಕಂತೆಯನ್ನು ತಿರುಪತಿ ದೇವಾಲಯದಲ್ಲಿ ಹುಂಡಿಗೆ ಅರ್ಪಿಸಲು ತೆಗೆದುಕೊಂಡು ಹೋಗುತ್ತಿದ್ದೇನೆಂದು ವಸುಂಧರಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ತನ್ನಲ್ಲಿರುವ ಹತ್ತು ಲಕ್ಷ ರೂಪಾಯಿ ದುಡ್ಡು ಕಪ್ಪುಹಣವಲ್ಲ ಎಂದು ಬಾಲಕೃಷ್ಣ ಪತ್ನಿ ಐಟಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ, ಅಧಿಕಾರಿಗಳು ವಿಮಾನನಿಲ್ದಾಣದಿಂದ ಹೊರಗೆ ಹೋಗಲು ವಸುಂಧರಾ ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಮತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Noted Telugu actor Nandamuri Balakrishna's wife Vasundhara caught with Rs 10 lakh of old notes at Renigunta airport at Tirupathi.
Please Wait while comments are loading...