ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಸರ್ಕಾರದಲ್ಲಿ ಮಧ್ಯವರ್ತಿಗಳಿಗೆ ಜಾಗವೇ ಇಲ್ಲ: ಮೋದಿ

|
Google Oneindia Kannada News

ಜುಜ್ವಾ, ಆಗಸ್ಟ್ 23: ತಮ್ಮ ಸರ್ಕಾರದಲ್ಲಿ ಮಧ್ಯವರ್ತಿಗಳಿಗೆ ಯಾವುದೇ ಜಾಗವಿಲ್ಲದ ಕಾರಣ ಸರ್ಕಾರ ಬಿಡುಗಡೆ ಮಾಡುವ ಪ್ರತಿ ರೂಪಾಯಿಯ ಪ್ರತಿ ಪೈಸೆಯೂ ಬಡವರಿಗೆ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುಜರಾತ್‌ನಲ್ಲಿ 'ಇ-ಗೃಹ ಪ್ರವೇಶ' ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2022ರ ವೇಳೆಗೆ ಭಾರತ ಪ್ರತಿ ಕುಟುಂಬವೂ ಸ್ವಂತ ಸೂರು ಹೊಂದಲಿದೆ ಎಂದರು.

ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಸರ್ಕಾರ ಬಿಡುಗಡೆ ಮಾಡುವ ಪ್ರತಿ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿಗಳನ್ನು ತಲುಪುತ್ತಿವೆ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರಸಿದ್ಧ ಹೇಳಿಕೆಗೆ ಪ್ರತಿಕ್ರಿಯೆಯೆಂಬಂತೆ ಮೋದಿ, 'ಈಗ ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ, ಇಡೀ 100 ಪೈಸೆ ಬಡವನ ಮನೆಗೆ ತಲುಪುತ್ತಿದೆ' ಎಂದು ಹೇಳಿದರು.

no place for middlemen in our government: narendra modi

ಕೇಂದ್ರದ ವಸತಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಜನರು ಈಗ ಲಂಚ ಕೊಡುವ ಅಗತ್ಯವಿಲ್ಲ ಎಂದರು.

ಸೆಪ್ಟೆಂಬರ್ 25ರಂದು ಆರೋಗ್ಯ ಸುರಕ್ಷೆ ಯೋಜನೆ ಜಾರಿ: ಮೋದಿಸೆಪ್ಟೆಂಬರ್ 25ರಂದು ಆರೋಗ್ಯ ಸುರಕ್ಷೆ ಯೋಜನೆ ಜಾರಿ: ಮೋದಿ

ದೇಶವು 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಪ್ರತಿ ಕುಟುಂಬವೂ ಸ್ವಂತ ಸೂರು ಹೊಂದುವಂತೆ ಮಾಡುವುದು ತಮ್ಮ ಕನಸು ಎಂದು ಮೋದಿ ಹೇಳಿದರು.

English summary
Prime Minister Narendra Modi said that every paisa of every rupee released by his government reaches the poor as there is no place for middlemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X