ಮದುವೆಯ ಅತಿಥಿಗಳ ಸಂಖ್ಯೆ, ಊಟ-ತಿಂಡಿಗೆ ಮಿತಿ, ಮಸೂದೆ ಮಂಡನೆ

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 15: ಮದುವೆಗೆ ಎಷ್ಟು ಮಂದಿ ಅತಿಥಿಗಳನ್ನು ಆಹ್ವಾನಿಸಬೇಕು, ಯಾವ ಆಹಾರ ಸಿದ್ಧಪಡಿಸಬೇಕು ಎಂಬುದಕ್ಕೆ ಮಿತಿ ವಿಧಿಸಿ, ಲೋಕಸಭೆಯಲ್ಲಿ ಸದ್ಯದಲ್ಲೇ ಮಸೂದೆ ಮಂಡನೆಯಾಗಲಿದೆ. ಯಾರು ಮದುವೆಗಾಗಿ 5 ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡುತ್ತಾರೋ ಅಂಥವರು ಬಡ ಹೆಣ್ಣುಮಕ್ಕಳ ಮದುವೆಗೆ ಹಣ ಕೊಡಬೇಕಾಗುತ್ತದೆ.

ಯಾವ ಕುಟುಂಬವು ಮದುವೆಗೆ ಐದು ಲಕ್ಷ ಖರ್ಚು ಮಾಡುತ್ತದೋ ಆ ಮೊತ್ತದ ಶೇ 10ರಷ್ಟು ಹಣವನ್ನು ಬಡ ಹೆಣ್ಣುಮಕ್ಕಳ ಮದುವೆಗೆ ನೀಡಬೇಕು. ಈ ಮಸೂದೆಯನ್ನು ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ ಪ್ರಸ್ತಾವಿಸಲಿದ್ದಾರೆ. ಮುಂಬರುವ ಲೋಕಸಭೆ ಅಧಿವೇಶನದಲ್ಲಿ ವಿವಾಹ ಮಸೂದೆ-2016 ಮಂಡನೆಯಾಗಲಿದೆ.[ಉದ್ಯಮಿ ಬಿಆರ್ ಶೆಟ್ಟಿ ಮಗನ ಮದುವೇಲಿ ಸಿಎಂ, ಸಚಿವರು ಹಾಜರ್]

Wedding

ಐಷಾರಾಮಿ ಮದುವೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ಮಸೂದೆ ಮಂಡಿಸಲಾಗುತ್ತಿದೆ ಎಂದು ರಂಜಿತ್ ತಿಳಿಸಿದ್ದಾರೆ. "ದೇಶದಲ್ಲಿ ಅದ್ಧೂರಿ ಮದುವೆಗಳು ಹೆಚ್ಚಾಗುತ್ತಿವೆ. ತಮ್ಮ ಆಸ್ತಿಯನ್ನು ತೋರಿಸಿಕೊಳ್ಳಲು ಮದುವೆಗಳು ವೇದಿಕೆಯಾಗುತ್ತಿವೆ. ಇದರಿಂದ ಬಡವರ ಮೇಲೆ ಒತ್ತಡ ಬೀಳುತ್ತಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ" ಎಂದು ಅವರು ಹೇಳಿದ್ದಾರೆ.[ರೆಡ್ಡಿ ಮಗಳ ಮದುವೆಯಲ್ಲಿ ನಿಯಮ ಚಲ್ಲಾಪಿಲ್ಲಿ]

ಇನ್ನು ಈ ಮಸೂದೆ ಅಂಗೀಕಾರವಾದರೆ ವಿವಾಹವಾದ 60 ದಿನದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಲೇ ಬೇಕು. ಮದುವೆಗೆ ಭಾಗಿಯಾಗುವ ಅತಿಥಿಗಳು-ಸಂಬಂಧಿಕರ ಸಂಖ್ಯೆ, ಅವರಿಗೆ ಉಣಬಡಿಸುವ ಆಹಾರ ಖಾದ್ಯ, ಅರತಕ್ಷತೆ ಇತ್ಯಾದಿಗಳ ಮೇಲೆ ಕೂಡ ಮಿತಿ ವಿಧಿಸಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bill in the Lok Sabha seeks to put a limit on the number of guests to be invited and dishes to be served in weddings to check "show of wealth" and wants those spending above Rs 5 lakh to contribute towards marriages of poor girls.
Please Wait while comments are loading...