ವರದಕ್ಷಿಣೆ ದೂರು ದಾಖಲಾದ ಕೂಡಲೇ ಯಾರನ್ನೂ ಬಂಧಿಸುವ ಹಾಗಿಲ್ಲ: ಸುಪ್ರೀಂ

ವರದಕ್ಷಿಣೆ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸುವ ಹಾಗಿಲ್ಲ ಎಂದ ಸುಪ್ರೀಂ ಕೋರ್ಟ್. ದೂರು ಬಂದ ಕೂಡಲೇ ಮೊದಲು ಪ್ರಾಥಮಿಕ ತನಿಖೆ ನಡೆಸಬೇಕು. ಆ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದವರನ್ನು ಮಾತ್ರ ಬಂಧಿಸಬೇಕು ಎಂದ ನ್ಯಾಯಾಲಯ.

ನವದೆಹಲಿ, ಜುಲೈ 27: ವರದಕ್ಷಿಣೆ ಕಿರುಕುಳದ ದೂರು ಬಂದ ತಕ್ಷಣ ಯಾವುದೇ ಮಹಿಳೆಯ ಪತಿ ಹಾಗೂ ಆತನ ಮನೆಯವರನ್ನು ತಕ್ಷಣಕ್ಕೆ ಬಂಧಿಸಕೂಡದೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ದೂರು ದಾಖಲಿಸಿಕೊಂಡ ನಂತರ, ಪ್ರಾಥಮಿಕ ತನಿಖೆಯನ್ನು ಕೈಗೊಂಡು ಆ ತನಿಖೆಯಲ್ಲಿ ಗಂಡ ಅಥವಾ ಆತನ ಮನೆಯವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮಾತ್ರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕೆಂದು ಅದು ಸೂಚಿಸಿದೆ.

No Immediate Arrest Under Dowry Harassment Law, Says Supreme Court

ಇತ್ತೀಚಿನ ವರ್ಷಗಳಲ್ಲಿ, ವರದಕ್ಷಿಣ ಕಿರುಕುಳ ಕಾನೂನನ್ನು ಸಾಕಷ್ಟು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ದೂರುಗಳು ಬಂದಿದ್ದವು. ಈ ದೂರುಗಳನ್ನು ಆಯಾ ಕಾಲಕ್ಕೆ ಪರಿಶೀಲಿಸುತ್ತಾ ಬಂದಿರುವ ಸುಪ್ರೀಂ ಕೋರ್ಟ್, ವರದಕ್ಷಿಣ ಕಾನೂನಿನಲ್ಲಿ ಮಾರ್ಪಾಟು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುತ್ತಾ ಬಂದಿತ್ತು.

ಜುಲೈ 27ರಂದು ಇಂಥದ್ದೇ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ದೂರು ದಾಖಲಿಸಿದ ತಕ್ಷಣ ಪತಿ ಹಾಗೂ ಆತನ ಸಂಬಂಧಿಕರನ್ನು ಬಂಧಿಸುವ ಕ್ರಮಕ್ಕೆ ತಿಲಾಂಜಲಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+