ಗಾಳಿ ಸುದ್ದಿಗಳಿಗೆ ತೆರೆ, ಸಚಿವನಾಗುವ ಆಸೆ ಇಲ್ಲ ಎಂದ ಅಮಿತ್ ಶಾ
ಲಕ್ನೋ, ಆಗಸ್ಟ್ 1: ಕೇಂದ್ರ ಸಚಿವ ಸಂಪುಟ ಸೇರುವ ಆಸೆ ನನಗಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ತಾನು ಪಕ್ಷ ಸಂಘಟನೆಯಲ್ಲೇ ನೆಮ್ಮದಿಯಾಗಿದ್ದೇನೆ ಅವರು ಸ್ಪಷ್ಟಪಡಿಸಿದ್ದಾರೆ.
ಅನೇಕ ದಿನಗಳಿಂದ ಅಮಿತ್ ಶಾ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮುಖ್ಯ ಹುದ್ದೆ ನಿಭಾಯಿಸಲಿದ್ದಾರೆ. ರಕ್ಷಣಾ ಖಾತೆ ಸಚಿವರಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿತ್ತು.

ಇದಕ್ಕೆಲ್ಲಾ ಅವರು ಸೋಮವಾರ ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೂರ್ಣ ವಿರಾಮ ಹಾಕಿದ್ದಾರೆ. ಸಚಿವನಾಗುವ ಯಾವ ಆಸೆಯೂ ತಮಗಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications