ರಾಜ್ಯಸಭೆ ಜೆಡಿಯು ನಾಯಕ ಸ್ಥಾನದಿಂದ ಶರದ್ ಯಾದವ್ ಔಟ್
ರಾಜ್ಯಸಭೆಯಲ್ಲಿ ಜೆಡಿಯು ಪಕ್ಷದ ನಾಯಕ ಸ್ಥಾನದಿಂದ ಶರದ್ ಯಾದವ್ ಉಚ್ಛಾಟನೆ. ಅವರ ಸ್ಥಾನಕ್ಕೆ ಪಕ್ಷದ ಮತ್ತೊಬ್ಬ ಧುರೀಣ ರಾಮ್ ಚಂದ್ರ ಪ್ರಸಾದ್ ಸಿಂಗ್ ನೇಮಕ.
ಪಾಟ್ನಾ, ಆಗಸ್ಟ್ 12: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಸಭೆಯಲ್ಲಿ ಜೆಡಿಯು ಪಕ್ಷದ ನಾಯಕ ಸ್ಥಾನದಿಂದ ಶರದ್ ಯಾದವ್ ಅವರನ್ನು ಕೈಬಿಡಲಾಗಿದೆ. ಆ ಸ್ಥಾನಕ್ಕೆ ಜೆಡಿಯುನ ಮತ್ತೊಬ್ಬ ನಾಯಕ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರನ್ನು ನೇಮಿಸಲಾಗಿದೆ.
ಇತ್ತೀಚೆಗೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಲಾಲೂ ಪ್ರಸಾದ್ ನಾಯಕತ್ವದ ಜೆಡಿಯು ಸಖ್ಯ ತೊರೆದು, ಬಿಜೆಪಿ ಜತೆಗೆ ಸೇರಿ ಹೊಸ ಸರ್ಕಾರ ರಚಿಸಿದ ಬೆನ್ನಲ್ಲೇ ಶರದ್ ಪವಾರ್ ಹಾಗೂ ನಿತೀಶ್ ನಡುವೆ ಬಿರುಕು ಏರ್ಪಟ್ಟಿತ್ತು.

ಬಿಜೆಪಿ ಜತೆಗಿನ ಮೈತ್ರಿಯನ್ನು ಶರದ್ ಪವಾರ್ ಅವರು ಬಹಿರಂಗವಾಗಿಯೇ ಟೀಕಿಸಿದ್ದರಲ್ಲದೆ, ಬಿಜೆಪಿ ಜತೆಗಿನ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ, ಅವರನ್ನು ರಾಜ್ಯಸಭೆಯಲ್ಲಿನ ಜೆಡಿಯು ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಿರುವುದರಿಂದ ಶರದ್ ಯಾದವ್ ಅವರು ಬಹುತೇಕ ಪಕ್ಷ ಬಿಡಲಿದ್ದಾರೆಂದು ಊಹಿಸಲಾಗಿದೆ.












Click it and Unblock the Notifications