ಕೇಂದ್ರದ ಸುಗ್ರಿವಾಜ್ಞೆ ವಿರುದ್ಧ ದೆಹಲಿ ಸಿಎಂಗೆ ಕೇಜ್ರಿವಾಲ್‌ಗೆ ಬಿಹಾರ ಸಿಎಂ ಬೆಂಬಲ
ನವದೆಹಲಿ, ಮೇ 21: ನವದೆಹಲಿ ಸರ್ಕಾರದ ಎಎಪಿ ಸಿಎಂ ಅರವಿಂದ ಕೇಜ್ರಿವಾಲರನ್ನು ಭೇಟಿ ಮಾಡಿ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರ ಸರ್ಕಾರದ ಸುಗ್ರಿವಾಜ್ಞೆ ವಿರುದ್ಧ ಎಎಪಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ 'ಸೇವೆಗಳ' ನಿಯಂತ್ರಣ ವಿಚಾರದಲ್ಲಿ ಕೇಂದ್ರದ ಸುಗ್ರೀವಾಜ್ಞೆ ತರುವುದರ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಭಾನುವಾರ ಕೇಜ್ರಿಲಾರೊಂದಿಗೆ ನಿತಿಶ್ ಕುಮಾರ್ ಬೆಂಬಲ ಘೋಷಿಸಿದರು. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳು ಒಂದಾದರೆ ಕರ್ನಾಟಕದ ಮಾದರಿಯಲ್ಲಿ ಬಹುಮತ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ದೆಹಲಿಯಲ್ಲಿ ಸಭೆ ನಂತರ ಸುದ್ದಿಗಾರರ ಜೊತೆಗೆ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಮತ್ತು ಅರವಿಂದ್ ಕೇಜ್ರಿವಾಲ್ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಾತನಾಡಿದರು.
I will meet WB CM Mamata Banerjee in Kolkata day after tomorrow. I will go to every state and will meet every leader to ask for their support to defeat this bill: Delhi CM Arvind Kejriwal on Centre's ordinance on transfer of bureaucrats in Delhi pic.twitter.com/WDTSUrSoAD
— ANI (@ANI) May 21, 2023
ಈ ವೇಳೆ ನಿತಿಶ್ ಕುಮಾರ್, ಬಿಜೆಪಿಗೆ ನೀಡಿದ ಅಧಿಕಾರವನ್ನು ಮುಂದಿನ ಚುನಾವಣೆಯಲ್ಲಿ ನಾವು ಕಸಿದುಕೊಳ್ಳುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತೇವೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಬಿಹಾರ ಸಿಎಂ ಈ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇವೆ. ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಅಧಿಕಾರಕ್ಕೆ ಬರಲು ಚಿಂತನೆ ನಡೆಸಿದ್ದೇವೆ ಎಂದರು.
ದೆಹಲಿ ಜನರ ಪರ ನಿಲ್ಲುತ್ತೇವೆ: ಕೇಜ್ರಿವಾಲ್
ಬಳಿಕ ಮಾತನಾಡಿದ ನವದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು, ದೆಹಲಿಯ ಪರವಾಗಿ ಎಸ್‌ಸಿ ಆದೇಶವನ್ನು ನಿರಾಕರಿಸುವ ಕೇಂದ್ರವು ಸುಗ್ರೀವಾಜ್ಞೆಯನ್ನು ತರುತ್ತಿರುವ ವಿಷಯದ ಬಗ್ಗೆ ಇಲ್ಲಿನ ಜನರ ಜೊತೆ ನಾವು ನಿಲ್ಲುತ್ತೇವೆ. ಅದಕ್ಕೆ ಸಂಯುಕ್ತ ಜನತಾದಳದ ನಿತಿಶ್ ಕುಮಾರ್ ಅವರ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.

ಒಂದು ವೇಳೆ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆಯನ್ನು ಮಸೂದೆಯಾಗಿ ಜಾರಿಗೊಳಿಸಿದರೆ, ಎಲ್ಲ ವಿಪಕ್ಷಗಳು ಒಟ್ಟಾಗಿ ಬಂದರೆ ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ವಿರುದ್ಧ ನಿಂತು ಸೋಲಿಸಬಹುದು. ಇದು ನಡೆದಿದ್ದೇ ಆದಲ್ಲಿ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವದರಲ್ಲಿ ಸಂದೇಹವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿ ಸರ್ಕಾರಕ್ಕೆ ಬಿಜೆಪಿ ತೊಂದರೆ: ಡಿಸಿಎಂ ವಾಗ್ದಾಳಿ
ಬಿಜೆಪಿ ಸರ್ಕಾರದ ವಿರುದ್ಧ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಹಾರ್ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಬಿಜೆಪಿಯೇತರ ಸರ್ಕಾರಗಳಿಗೆ ಬಿಜೆಪಿ ತೊಂದರೆ ನೀಡುತ್ತಿದೆ. ಎಎಪಿ ಮುಖ್ಯಸ್ಥ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಅನ್ಯಾಯ ಮಾಡುತ್ತಿದೆ. ನಾವು ಅವರೊಂದಿಗೆ ನಿಲ್ಲುತ್ತೇವೆ, ಬಿಜೆಪಿಯ ಈ ರೀತಿಯ ತಾರತಮ್ಯ ಸರಿಯಲ್ಲ ಎಂದು ಅವರು ಗುಡುಗಿದರು.
ಕಳೆದ ಶುಕ್ರವಾರ ಮೇ 19ರಂದು ಕೇಂದ್ರ ಸರ್ಕಾರ 'ವರ್ಗಾವಣೆ ನೇಮಕಾರಿ ವಿಚಾರ ಕುರಿತಂತೆ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಜಿಎನ್‌ಸಿಟಿಡಿ) ಸರ್ಕಾರಕ್ಕೆ ನಿಯಮಗಳನ್ನು ತಿಳಿಸಲು ಸುಗ್ರೀವಾಜ್ಞೆಯನ್ನು ತಂದಿದೆ. ಈ ಮೂಲಕ ದೆಹಲಿಯ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಕ್ಟ್, 1991 ಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications