ಮೋದಿ ಹತ್ಯೆ ಮಾಡಲು ಆರೆಸ್ಸೆಸ್, ಗಡ್ಕರಿ ಸಂಚು : ಶೆಹ್ಲಾ ಟ್ವೀಟ್

ನವದೆಹಲಿ, ಜೂನ್ 10: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜೀವ್ ಗಾಂಧಿ ಮಾದರಿಯಲ್ಲಿ ಹತ್ಯೆಗೈಯಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಶೀದ್ ಅವರು ಗೇಲಿ ಮಾಡಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯನ್ನು ಹತ್ಯೆಗೈಯಲು ಆರೆಸ್ಸೆಸ್ ಹಾಗು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಚು ನಡೆಸಿದಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜೀವ್ ಗಾಂಧಿ ಮಾದರಿಯಲ್ಲೇ ಪ್ರಧಾನಿ ಮೋದಿಯನ್ನು ಹತ್ಯೆಗೈಯಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂದು ಪುಣೆ ಪೊಲೀಸರು ಆರೋಪಿಸಿದ ನಂತರ ಶೆಹ್ಲಾ ಈ ಟ್ವೀಟ್ ಮಾಡಿದ್ದಾರೆ.

Nitin Gadkari planning to kill PM Narendra Modi, Shehla Rashid posts sarcastic tweet; minister to sue her

ಆರೆಸ್ಸೆಸ್/ಗಡ್ಕರಿ ಪ್ರಧಾನಿ ಮೋದಿಯನ್ನು ಕೊಲ್ಲಲು ಸಂಚು ರೂಪಿಸುತ್ತಿರುವಂತೆ ಕಾಣುತ್ತಿದೆ. ನಂತರ ಈ ಹೊಣೆಯನ್ನು ಮುಸ್ಲಿಮರು/ಕಮ್ಯುನಿಸ್ಟ್ ಗಳ ಮೇಲೆ ಹೊರಿಸುತ್ತಾರೆ. ಆನಂತರ ಮುಸ್ಲಿಮರನ್ನು ಕೊಲ್ಲುತ್ತಾರೆ #ರಾಜೀವ್ ಗಾಂಧಿ ಮಾದರಿ" ಎಂದು ಶೆಹ್ಲಾ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಸಚಿವ ಗಡ್ಕರಿ "ವಿಲಕ್ಷಣ ಕಾಮೆಂಟ್ ಗಳನ್ನು ಮಾಡಿರುವ ಸಮಾಜವಿರೋಧಿಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ" ಎಂದಿದ್ದಾರೆ.

ಕೇಂದ್ರ ಸಚಿವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶೆಹ್ಲಾ, "ಜಗತ್ತಿನ ಅತೀ ದೊಡ್ಡ ಪಕ್ಷದ ನಾಯಕರೇ ವ್ಯಂಗ್ಯದ ಟ್ವೀಟ್ ಗೆ ತಲೆಕೆಡಿಸಿಕೊಳ್ಳುತ್ತಾರೆ. "ಟೈಮ್ಸ್ ನೌನಂಥ ಮಾಧ್ಯಮಗಳು ತನ್ನ ಹಾಗು ತಂದೆಯ ವಿರುದ್ಧ ಆಧಾರವಿಲ್ಲದ ದಾಳಿ ನಡೆಸಿದ ನಂತರ ಅಮಾಯಕ ವಿದ್ಯಾರ್ಥಿ ಉಮರ್ ಖಾಲಿದ್ ಏನು ಮಾಡಬೇಕು ಎಂದು ಯೋಚಿಸಿ. ಮಿ. ಗಡ್ಕರಿ ನೀವು ರಾಹುಲ್ ಶಿವ್ ಶಂಕರ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+