ಶಸ್ತ್ರಾಸ್ತ್ರ ದಲ್ಲಾಳಿಯ ಹಣದಲ್ಲಿ ಸೋನಿಯಾ, ವಾದ್ರಾ ಸ್ವಿಸ್ ಪ್ರವಾಸ
ನವದೆಹಲಿ, ಅಕ್ಟೋಬರ್ 17: ಕಾಂಗ್ರೆಸ್ ಪಕ್ಷ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಅಳಿಯ ರಾಬರ್ಟ್ ವಾದ್ರಾ ವಿಮಾನದ ಟಿಕೆಟ್ ಗಳಿಗೆ ತಲೆ ಮರೆಸಿಕೊಂಡಿರುವ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಹಣ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಹಿನ್ನಲೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. "ಹಿರಿಯ ಕಾಂಗ್ರೆಸ್ ನಾಯಕರು ರಾಬರ್ಟ್ ವಾದ್ರಾ ವಿಚಾರದಲ್ಲೇಕೆ ಮೌನವಾಗಿದ್ದಾರೆ? ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮತ್ತು ರಾಬರ್ಟ್ ವಾದ್ರಾ ನಡುವಿನ ಸಂಬಂಧದ ಬಗ್ಗೆ ಅವರು (ಕಾಂಗ್ರೆಸ್ ನಾಯಕರು) ಉತ್ತರ ನೀಡಬೇಕು," ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಮೌನಂ ಸಮ್ಮತಿ ಲಕ್ಷಣಂ?
"ಕಾಂಗ್ರೆಸ್ ನಾಯಕರು ಮೌನವಾಗಿರುವ ಮೂಲಕ ತಮಗೆ ಇದು ಮೊದಲೇ ಗೊತ್ತಿದೆ ಎಂದು ಹೇಳುತ್ತಿದ್ದಾರೆಯೇ?" ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

2012ರ ಪ್ರಕರಣ
2012ರ ಆಗಸ್ಟ್ ನಲ್ಲಿ ದೆಹಲಿ ಮೂಲದ ಟ್ರಾವೆಲ್ ಏಜೆಂಟರೊಬ್ಬರು ರಾಬರ್ಟ್ ವಾದ್ರಾ ಹೆಸರಿಗೆ ಎರಡು ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಗೆ ಪ್ರಯಾಣ ಮಾಡಲು ಬುಕ್ ಮಾಡಿದ ಈ ಟಿಕೆಟಿಗೆ ಹಣ ನೀಡಿದವರು ವಿವಾದಿತ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ.
ವಿಶೇಷ ಎಂದರೆ ಸ್ವಿಟ್ಜರ್ಲೆಂಟ್ ಕಂಪನಿ ಪೈಲಟಸ್ ಜತೆಗಿನ ಜೆಟ್ ತರಬೇತಿ ವಿಮಾನ ಖರೀದಿಯಲ್ಲಿ ವಾದ್ರಾ ಹೆಸರು ಕೇಳಿ ಬಂದ ಸಂದರ್ಭದಲ್ಲೇ ಈ ಟಿಕೆಟ್ ಬುಕ್ ಮಾಡಲಾಗಿದೆ ಎಂದು 'ಟೈಮ್ಸ್ ನೌ' ವರದಿ ಮಾಡಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ
ಸಂಜಯ್ ಭಂಡಾರಿ ಪ್ರಕರಣ ಮೊದಲಿಗೆ ಬೆಳಕಿಗೆ ಬಂದಿದ್ದು 2017ರ ಏಪ್ರಿಲ್ ನಲ್ಲಿ. ಆದಾಯ ತೆರಿಗೆ ಇಲಾಖೆ ಸಂಜಯ್ ಭಂಡಾರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಪ್ರಮುಖ ಕೆಲವು ದಾಖಲೆಗಳನ್ನು ಸಂಗ್ರಹಿಸಿತ್ತು.
ಈ ವೇಳೆ ವಾದ್ರಾ ಮತ್ತು ಸಂಜಯ್ ಭಂಡಾರಿ ನಡುವೆ ನಡೆದ ಇ-ಮೇಲ್ ಸಂಭಾಷಣೆಗಳು ಅಧಿಕಾರಿಗಳ ಗಮನ ಸೆಳೆದಿದ್ದವು. ಹೀಗಾಗಿ ಇಬ್ಬರ ನಡುವಿನ ಸಂಬಂಧ ಚರ್ಚೆಗೆ ಬಂದಿತ್ತು. ಆದರೆ ವಾದ್ರಾ ಕಂಪನಿ ಮಾತ್ರ ಸಂಜಯ್ ಭಂಡಾರಿ ಜತೆಗಿನ ಸಂಬಂಧವನ್ನು ನಿರಾಕರಿಸುತ್ತಲೇ ಬಂದಿತ್ತು.
|
ಕಾವ್ಯಾತ್ಮಕ ವಿವರಣೆ ಯಾವಾಗ?
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, "ವಾದ್ರಾ ಟಿಕೆಟ್ ಗೇಟ್ ಪ್ರಕರಣದಲ್ಲಿ ರಾಹುಲ್ ಗಾಂಧಿಯ ಕಾವ್ಯಾತ್ಮಕ ವಿವರಣೆಗೆ ಎದುರು ನೋಡುತ್ತಿದ್ದೇನೆ," ಎಂದು ಕಿಚಾಯಿಸಿದ್ದಾರೆ












Click it and Unblock the Notifications