ಎನ್‌ಐಎ ಅಧಿಕಾರಿ ತನ್ಜಿಲ್ ಅಹ್ಮದ್ ಹತ್ಯೆ ವ್ಯವಸ್ಥಿತ ಸಂಚು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 04 : ಎನ್‌ಐಎ ಅಧಿಕಾರಿ ಮೊಹಮ್ಮದ್ ತನ್ಜಿಲ್ ಅಹ್ಮದ್ ಹತ್ಯೆ ಪೂರ್ವ ನಿಯೋಜಿತವಾದದ್ದು, ಹಲವು ಗಂಟೆಗಳ ಕಾಲ ಅವರ ಚಲನವಲನದ ಮಾಹಿತಿ ಪಡೆದು ನಂತರ ಹತ್ಯೆ ಮಾಡಲಾಗಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಈ ಹತ್ಯೆಯ ಹಿಂದಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

45 ವರ್ಷದ ತನ್ಜಿಲ್ ಅಹ್ಮದ್ ಅವರು ಕುಟುಂಬದವರೊಂದಿಗೆ ವಿವಾಹ ಆರತಕ್ಷತೆ ಮುಗಿಸಿಕೊಂಡು ಬರುವಾಗ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಕರಣಗಳನ್ನು ತನಿಖೆ ನಡೆಸಲು ಆರಂಭಿಸಿದ ಮೇಲೆ ಅವರಿಗೆ ಶತ್ರಗಳು ಹೆಚ್ಚಾಗಿದ್ದರು. [NIA ಅಧಿಕಾರಿ ಹತ್ಯೆ]

mohammad tanzil ahmed

ವ್ಯವಸ್ಥಿತ ಕೊಲೆ : ತನ್ಜಿಲ್ ಅಹ್ಮದ್ ಅವರ ಕೊಲೆ ಒಂದು ವ್ಯವಸ್ಥಿತ ಸಂಚು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಹಲವು ದಿನಗಳ ಕಾಲ ಅವರು ಸಂಚರಿಸುವ ಸ್ಥಳಗಳ ಮಾಹಿತಿ ಸಂಗ್ರಹಣೆ ಮಾಡಿ, ವ್ಯವಸ್ಥಿತವಾದ ಸಂಚು ರೂಪಿಸಿ ಅವರನ್ನು ಹತ್ಯೆ ಮಾಡಲಾಗಿದೆ. [ಪಠಾಣ್ ಕೋಟ್ ದಾಳಿ : ಉಗ್ರರ ಚಿತ್ರಗಳು ಬಿಡುಗಡೆ]

ಈ ಹತ್ಯೆ ಪ್ರಕರಣದ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈ ದೃಷ್ಟಿಕೋನದಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇಬ್ಬರು ಆರೋಪಿಗಳು 9ಎಂಎಂ ಪಿಸ್ತೂಲ್ ಬಳಸಿ ಮೊಹಮ್ಮದ್ ತನ್ಜಿಲ್ ಅಹ್ಮದ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]

21 ಗುಂಡು ಹೊಕ್ಕಿವೆ : ಭಾನುವಾರ ಮುಂಜಾನೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಹಮ್ಮದ್ ತನ್ಜಿಲ್ ಅಹ್ಮದ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 21 ಗುಂಡುಗಳು ತನ್ಜಿಲ್ ಅಹ್ಮದ್ ಅವರ ದೇಹಕ್ಕೆ ಹೊಕ್ಕಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸುವಾಗಲೇ ಅವರು ಮೃತಪಟ್ಟಿದ್ದರು. ತನ್ಜಿಲ್ ಅಹ್ಮದ್ ಅವರ ಪತ್ನಿ ಸಹ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳ ಸಂತಾಪ : ಮೊಹಮ್ಮದ್ ತನ್ಜಿಲ್ ಅಹ್ಮದ್ ಮೊದಲು ಬಿಎಸ್‌ಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿದ್ದರು. 2009ರ ಫೆಬ್ರವರಿಯಲ್ಲಿ ಅವರನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಮೊದಲು ಎನ್‌ಐಎ ಗುಪ್ತಚರ ವಿಭಾಗದಲ್ಲಿದ್ದ ಅವರು ನಂತರ ತನಿಖಾಧಿಕಾರಿಯಾಗಿದ್ದರು.

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಮೊಹಮ್ಮದ್ ತನ್ಜಿಲ್ ಅಹ್ಮದ್ ನಡೆಸುತ್ತಿದ್ದರು. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ ತನಿಖಾ ತಂಡ ಜೊತೆಯೂ ತನ್ಜಿಲ್ ಅಹ್ಮದ್ ಮಾತುಕತೆ ನಡೆಸಿದ್ದರು. ತನ್ಜಿಲ್ ಅಹ್ಮದ್ ಸಾವಿಗೆ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mohammad Tanzil Ahmed, the NIA officer who was shot dead in Bijnor, Uttar Pradesh yesterday could have made several enemies as a major part of his job involved trailing of Indian Mujahideen operatives. The preliminary investigations suggest that the murder was a well planned one and his assailants had been tracking him for several hours before the incident.
Please Wait while comments are loading...