ರಾಷ್ಟ್ರಪತಿ ಚುನಾವಣೆ, ಬಿಜೆಪಿಗೆ AIADMK ಪನ್ನೀರ್ ಸೆಲ್ವಂ ಬಣ ಬೆಂಬಲ
ಚೆನ್ನೈ, ಜೂನ್ 22: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯನ್ನು ಬೆಂಬಲಿಸಲು ಎಐಎಡಿಎಂಕೆಯ ಒ ಪನ್ನೀರ್ ಸೆಲ್ವಂ ಬಣ ನಿರ್ಧರಿಸಿದೆ. ಪನ್ನೀರ್ ಸೆಲ್ವಂ ಬಣದ ಬೆಂಬಲದಿಂದ ಬಿಜೆಪಿ 12 ಶಾಸಕರು ಹಾಗೂ 12 ಸಂಸದರ ಬೆಂಬಲ ಪಡೆಯಲಿದೆ.
ವಿಶೇಷವೆಂದರೆ ಎಐಎಡಿಎಂಕೆ ಒಡೆದ ಮನೆಯಾಗಿದ್ದರೂ ಎರಡೂ ಬಣಗಳು ಬಿಜೆಪಿಗೆ ಬೆಂಬಲ ನೀಡಿವೆ. ಇನ್ನು ನಿನ್ನೆಯಷ್ಟೇ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹೊಗಳಿದ್ದರು. ಇದೀಗ ಅವರು ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.

130 ಶಾಸಕರು ಹಾಗೂ 37 ಸಂಸದರನ್ನು ಹೊಂದಿರುವ ಎಐಎಡಿಎಂಕೆ ಎಲೆಕ್ಟೋರಲ್ ಕಾಲೇಜ್ ನಲ್ಲಿ 5.36 ಶೇಕಡಾ ಮತಗಳನ್ನು ಹೊಂದಿದ್ದು ಎರಡೂ ಬಣಗಳ ಬೆಂಬಲದಿಂದ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಗೆಲುವು ಮತ್ತಷ್ಟು ಸುಲಭವಾಗಲಿದೆ.












Click it and Unblock the Notifications