ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಹಂದಿಜ್ವರ ಭೀತಿ, ಕಾಂಗ್ರೆಸ್ ಪಾದಯಾತ್ರೆ

|
Google Oneindia Kannada News

ಬೆಂಗಳೂರು ಮಾ. 17: ದಕ್ಷ ಐಎಎಸ್ ಅಧಿಕಾರಿ ಡಿಕೆ ಅನುಮಾನಾಸ್ಪದ ಸಾವು ದೇಶಾದ್ಯಂತ ತಲ್ಲಣ ಮೂಡಿಸಿತ್ತು. ಬೆಂಗಳೂರಿನಲ್ಲಿ ಸಾವಿರಾರು ಜನ ಡಿಕೆ ರವಿಯವರ ಅಂತಿಮ ದರ್ಶನ ಪಡೆದರು.

ಬಜೆಟ್ ಅಧಿವೇಶನ ಮುಂದುವರಿದಿದ್ದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಸತ್ ಭವನಕ್ಕೆ ಆಗಮಿಸಿದರು. ಬೆಂಗಳೂರಿನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ರಾಜಧಾನಿಗೆ ಹಿಂದಿರುಗಿದ್ದು ಮಂಗಳವಾರ ಕಾಣಿಸಿಕೊಂಡರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಂದಿ ಜ್ವರದ ಬಾಧೆಗೆ ಹೆದರಿ ಮಾಸ್ಕ್ ಧರಿಸಿ ಓಡಾಡುತ್ತಿರುವ ಮಕ್ಕಳು,, ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ... (ಪಿಟಿಐ ಚಿತ್ರಗಳು)

ಭೂ ಸ್ವಾಧೀನ ಕಾಯ್ದೆ ಬೇಡ

ಭೂ ಸ್ವಾಧೀನ ಕಾಯ್ದೆ ಬೇಡ

ಮೊದಲಿನಿಂದಲೂ ಭೂ ಸ್ವಾಧೀನ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಮಂಗಳವಾರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದಿಂದ ರಾಷ್ಟ್ರಪತಿ ಭವನಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.

ಹಂದಿ ಜ್ವರ ಭೀತಿ

ಹಂದಿ ಜ್ವರ ಭೀತಿ

ದೇಶಾದ್ಯಂತ ಪ್ರತಿದಿನ ಹಂದಿಜ್ವರ ವ್ಯಾಪಕವಾಗುತ್ತಿದ್ದು ಈಗಾಗಲೇ ಸುಮಾರು 2 ಸಾವಿರ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರೋಗ ವ್ಯಾಪಿಸುತ್ತಿದ್ದು ಶಾಲಾ ಮಕ್ಕಳು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ.

ಕಣ್ಣೀರಿಗೆ ಉತ್ತರವೇನು?

ಕಣ್ಣೀರಿಗೆ ಉತ್ತರವೇನು?

ದಕ್ಷ ಅಧಿಕಾರಿ ಡಿಕೆ ರವಿ ಅವರ ಪಾರ್ಥಿವ ಶರೀರದ ಸಮೀಪ ರೋಧಿಸುತ್ತಿರುವ ಪತ್ನಿ ಕುಸುಮಾ. ದೇಶಾದ್ಯಂತ ಸಾವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.

ಮೆಕ್ಕೆ ಜೋಳದ ಬದಲು ಗೋಧಿ ನೀಡಿ

ಮೆಕ್ಕೆ ಜೋಳದ ಬದಲು ಗೋಧಿ ನೀಡಿ

ಕರ್ನಾಟಕದಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಆಹಾರ ಧಾನ್ಯ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಆದರೆ ಮಧ್ಯಪ್ರದೇಶದಲ್ಲಿ ಶಿವಸೇನೆಯ ಮಹಿಳಾ ಕಾರ್ಯಕರ್ತರು ಗೋಧಿ ಬದಲಾಗಿ ಮೆಕ್ಕೆ ಜೋಳ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಮತ್ತೆ ಗೋಧಿಯನ್ನು ನೀಡಬೇಕು ಎಂಬುದು ಮಹಿಳಾ ಕಾರ್ಯಕರ್ತರ ಆಗ್ರಹ.

ಮೋದಿ ಆಗಮನ

ಮೋದಿ ಆಗಮನ

ವಿದೇಶಗಳ ಪ್ರವೇಶ ಮುಗಿಸಿರುವ ನರೇಂದ್ರ ಮೋದಿ ಮಂಗಳವಾರ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸಿದರು.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಬೆಂಗಳೂರಿನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಧಾನಿಗೆ ಹಿಂದಿರುಗಿದ್ದು ಮಂಗಳವಾರ ಕಾಣಿಸಿಕೊಂಡರು.

English summary
News in Pics: Congress chief Sonia Gandhi and other opposition leaders during a march from Parliament to Rashtrapati Bhavan in New Delhi on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X