ಚಿತ್ರ ಸುದ್ದಿ: ರಾಜ್ಯದಲ್ಲಿ ಮೊಹರಂ ಆಚರಣೆ ದಿನ ಬದಲು
ಬೆಂಗಳೂರು, ನ.13: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಕೋರಿಕೆ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಮೊಹರಂ ಆಚರಣೆಗೆ ಸಾರ್ವತ್ರಿಕ ರಜೆ ದಿನವನ್ನು ಬದಲು ಮಾಡಿದೆ.
ನ.14ರ ಬದಲಿಗೆ 15ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ಮಂಗಳವಾರ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮೊಹರಂ ಕಡೇ ದಿನದ ಆಚರಣೆಗೆ ಸರ್ಕಾರದ ರಜೆಗಳ ಪಟ್ಟಿಯಲ್ಲಿ ನ.14ಕ್ಕೆ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ವಕ್ಫ್ ಮಂಡಳಿಯು ಮೊಹರಂ ಕಡೇ ದಿನವನ್ನು ನ.15ಕ್ಕೆ ಆಚರಿಸುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮೊಹರಂ ದಿನಾಚರಣೆಗೆ ನಿಗದಿಪಡಿಸಿದ್ದ ರಜಾ ದಿನದಲ್ಲಿ ಬದಲಾವಣೆ ಮಾಡಿ ಸುತ್ತೋಲೆ ಹೊರಡಿಸಿದೆ.
ತಮಿಳುನಾಡಿನಲ್ಲೂ ನ.15ರಂದು ಆಚರಣೆಗೊಳ್ಳಲಿದೆ. ತಮಿಳುನಾಡು ಹಾಗೂ ಕರ್ನಾಟಕ ಭಾಗಗಳಲ್ಲಿ ಅರ್ಧ ಚಂದ್ರ ದರ್ಶನವಾಗದ ಕಾರಣ ನ್ಯೂ ಇಸ್ಲಾಮಿಕ್ ತಿಂಗಳಾದ ಮೊಹರಂ ನ 10ನೇ ದಿನ ಮುಹರಂ 1435 ಹಿಜ್ರಿ(ಇಸ್ಲಾಮಿಕ್ ಕ್ಯಾಲೆಂಡರ್)ವನ್ನು ನವೆಂಬರ್ 15 ರಂದು ಆಚರಿಸಲಾಗುತ್ತದೆ ಎಂದು ಇಸ್ಲಾಂ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.
ಉಳಿದಂತೆ, ಇಂಗ್ಲೆಂಡಿನ ಪ್ರಿನ್ಸ್ ಚಾರ್ಲ್ ಓಡಾಟ, ಮುಂಬೈನಲ್ಲಿ ಸಚಿನ್ ಸನ್ಮಾನ ಸಮಾರಂಭದಲ್ಲಿ ಬ್ರಿಯಾನ್ ಲಾರಾ, ಧನ್ ಬಾದಿನ ಆತಂಕದ ಕ್ಷಣ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ..

ಮೊಹರಂ ಆಚರಣೆ ಬಗ್ಗೆ
ಇರಾಕಿನ ಕರ್ಬಲಾದಲ್ಲಿ ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್) ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು.
ಅವರ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮುಸ್ಲಿಮರು ಉರೂರುಗಳಲ್ಲಿ ಮೆರವಣಿಗೆ ನಡೆಸಿ ಇಮಾಮ್ ಅವರು ತೋರಿಸಿದ ಮಾನವೀಯತೆ ಸಂದೇಶ ಸಾರುತ್ತಾರೆ.
ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂಥ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ.
ಕುರಾನ್ ನಲ್ಲಿ ಹೇಳಲಾಗಿರುವ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡಾ ಒಂದಾಗಿದ್ದು, ತಿಂಗಳ ಕೊನೆದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ.
ಧನ್ ಬಾದಿನ ಆತಂಕದ ಕ್ಷಣ
ಸರ್ಕಾರಿ ಸ್ವಾಮ್ಯದ ಗಣಿ ಛಾವಣಿ ಕುಸಿತದಿಂದ ನಾಲ್ವರು ಸಾವನ್ನಪ್ಪಿದ ದುರ್ಘಟನೆಯ ಸಂದರ್ಭದಲ್ಲಿ ಸೆರೆಸಿಕ್ಕಿ ಚಿತ್ರ. ಇದರ ವಿವರ ಇಲ್ಲಿ ಓದಿ

ಸಂಭ್ರಮದಲ್ಲಿ ಸಚಿನ್
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನೀಡಿದ ಉಡುಗೊರೆ ಕಂಡು ಸಂಭ್ರಮಪಟ್ಟ ಸಚಿನ್ ತೆಂಡೂಲ್ಕರ್ ಜತೆ ಪತ್ನಿ ಅಂಜಲಿ ಹಾಗೂ ಕೇಂದ್ರ ಸಚಿವ ಶರದ್ ಪವಾರ್

ಚೆಂಗ್ಡುವಿನಲ್ಲಿ
ಚೀನಾ ಹಾಗೂ ಭಾರತ ಗಡಿಭಾಗದ ಚೆಂಗ್ಡುವಿನಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಸಮರಾಭ್ಯಾಸದಲ್ಲಿ ತೊಡಗಿರುವ ದೃಶ್ಯ

ಬೆಡಗಿಯರ ಜತೆ ಪ್ರಿನ್ಸ್
ಇಂಗ್ಲೆಂಡಿನ ಪ್ರಿನ್ಸ್ ಚಾರ್ಲ್ಸ್ ಅವರ ಜತೆ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಹಾಗೂ ಬಾಲಿವುಡ್ ಬೆಡಗಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಬಿಪಾಶಾ ಬಸು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು












Click it and Unblock the Notifications